ಸ್ವಾಭಿಮಾನ ಮತ್ತು ಅಹಂಕಾರಗಳ ನಡುವೆ ಏನು ವ್ಯತ್ಯಾಸ? ಈ ಬಗ್ಗೆ ಕವಿ ಜಾವೇದ್ ಅಖ್ತರ್ ಹೇಳೋದು ಹೀಗೆ… । ಸಂಗ್ರಹ – ಅನುವಾಡ: ಚಿದಂಬರ ನರೇಂದ್ರ
ಇದನ್ನ ಅರಿತುಕೊಳ್ಳಲು ಇರುವ ಒಂದು ಸುಲಭ ವಿಧಾನದ ಬಗ್ಗೆ ನಿಮಗೆ ಹೇಳುತ್ತೇನೆ, ಇದು ಲಿಟ್ಮಸ್ ಟೆಸ್ಟ್. ಸ್ವಾಭಿಮಾನಿ ಮನುಷ್ಯ ತನ್ನ ಅಹಂ ನ ದೊಡ್ಡ ಮನುಷ್ಯರ ಎದುರು ತೋರಿಸುತ್ತಾನಾದರೆ, ಅಹಂಕಾರಿ ಮನುಷ್ಯ ತನ್ನ ಅಹಂ ತನಗಿಂತ ದುರ್ಬಲ ಮನುಷ್ಯರ ಎದುರು ತೋರಿಸುತ್ತಾನೆ. ಸ್ವಾಭಿಮಾನಿ ಮನುಷ್ಯ ದುರ್ಬಲ ವ್ಯಕ್ತಿಯನ್ನು ಸಹನೆ ಮತ್ತು ಅಂತಃಕರಣದಿಂದ ನೋಡುತ್ತಾನಾದರೆ, ಅಹಂಕಾರಿ ಮನುಷ್ಯ ದುರ್ಬಲ ಜನರನ್ನ ಸಹಿಸುವುದಿಲ್ಲ ಮತ್ತು ಅವನು ಬಲಾಢ್ಯರ ಎದುರು ಶರಣಾಗತಿಯ ಭಾವವನ್ನು ಹೊಂದಿರುತ್ತಾನೆ.
ನಿಮ್ಮ ಸ್ವಾಭಿಮಾನವನ್ನು ದುರ್ಬಲರ ಎದುರು ಪರೀಕ್ಷೆ ಮಾಡಿಕೊಳ್ಳಲಿಕ್ಕಾಗುವುದೆ? ಸ್ವಾಭಿಮಾನವನ್ನು ಬಲಾಢ್ಯರ ಎದುರು ಮಾತ್ರ ಪ್ರದರ್ಶಿಸಿ ಟೆಸ್ಟ್ ಮಾಡಿಕೊಳ್ಳಬಹುದು. ಇವರು ನನಗಿಂತ ಬಲಾಢ್ಯರೇ ಹಾಗಾದರೆ ನಾನು ಇವರೆದುರು ತಲೆ ಬಾಗಿಸುವುದಿಲ್ಲ ಎನ್ನುವುದು ಸ್ವಾಭಿಮಾನಿಗಳ ವರ್ತನೆಯಾದರೆ, ಅಹಂಕಾರಿಗಳು ಬಲಾಢ್ಯರ ಎದುರು ತಲೆ ತಗ್ಗಿಸಿ ನಡೆದುಕೊಳ್ಳುತ್ತಾರೆ ಮತ್ತು ದುರ್ಬಲರ ಎದುರು ತಮ್ಮ ಅಭಿಮಾನವನ್ನ, ಅಹಂಕಾರವನ್ನ ಪ್ರದರ್ಶನ ಮಾಡುತ್ತಾರೆ.

