ಜಡ್ಜಿಂಗ್ ನ ಮೊದಲು ಬಿಟ್ಟು ಬಿಡಬೇಕು. ಇದು ಒಂದು ಕಾಯಿಲೆ, ಇದರಿಂದ ಯಾವ ಸಮಾಧಾನವೂ ಸಾಧ್ಯವಿಲ್ಲ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಜದ ಸಂತನ ಮಹಾಮನೆಯಲ್ಲಿ
ಯಾಕೆ ಇಷ್ಟೇ ಜನ ಅಂತೀರಾ?
ಪ್ರತಿ ಬಾರಿ
ನೀವು ಅಂಗಳದಲ್ಲಿ
ಕಾಲಿಡುವ ಮುನ್ನ,
ನಿಮ್ಮ ಅಹಂನ ಒಂದು ಚೂರನ್ನು
ನೀವು ಕಾಣಿಕೆ ಡಬ್ಬದಲ್ಲಿ
ಹಾಕಲೇ ಬೇಕು.
ಜನರಿಗೆ ಗೊತ್ತಿಲ್ಲ
ಆ ಕಾಣಿಕೆ ಡಬ್ಬಕ್ಕೆ
ತಳವೇ ಇಲ್ಲ.
– ಹಾಫಿಜ್
ನೀವು ಯಾರೊಬ್ಬರ ಯೋಗ್ಯತೆಯನ್ನು ನಿರ್ಧರಿಸುವಾಗ ಯಾವತ್ತೂ present ನಲ್ಲಿ ಇರುವುದಿಲ್ಲ. ಯಾವಾಗಲೂ ಹಿಂದೆ – ಮುಂದೆ ಹೊಯ್ದಾಡುತ್ತಿರುತ್ತೀರ, ಯಾವತ್ತೂ here & now ಲ್ಲಿ ನೆಲೆಯಾಗಿರುವುದಿಲ್ಲ. ಏಕೆಂದರೆ here & now ಎನ್ನುವುದಕ್ಕೆ ಯಾವ ಲೇಪವಿಲ್ಲ, ಅದಕ್ಕೆ ಒಳ್ಳೆಯದು ಕೆಟ್ಟದ್ದು ಎನ್ನುವ ಯಾವ ಹಣೆಪಟ್ಟಿಯಿಲ್ಲ. ಅದು ತನ್ನ ಎಲ್ಲ ಚೆಲುವಿನೊಂದಿಗೆ ತನ್ನಷ್ಟಕ್ಕೆ ತಾನು ಇದೆ ಅಷ್ಟೇ, ಯಾವುದರೊಂದಿಗೂ ಅದನ್ನು ಹೋಲಿಸುವುದು ಸಾಧ್ಯವಿಲ್ಲ.
ಯೋಗ್ಯತೆಯನ್ನು ನಿರ್ಧರಿಸುವ ಐಡಿಯಾದಲ್ಲಿಯೇ ಅಹಂ ಇದೆ. ಅಹಂ ಎನ್ನುವುದು, ಗ್ರೇಟ್ ಇಂಪ್ರೂವರ್. ಅದು ಬದುಕಿರುವುದೇ ಇಂಪ್ರೂವಮೆಂಟ್ ಎನ್ನುವ ಐಡಿಯಾದ ಮೇಲೆ. ಅದು ನಿಮ್ಮನ್ನು improve improve ಎಂದು ಹಿಂಸಿಸುತ್ತಿರುತ್ತದೆ, ಮತ್ತು improve ಮಾಡಬೇಕಾಗಿರುವುದು ಏನೂ ಇರುವುದಿಲ್ಲ.
ಎಂದಾದರೂ ಜಡ್ಜಮೆಂಟ್ ನ ಪ್ರಸಂಗ ಎದುರಾದರೆ, ಅದನ್ನು ಅಲ್ಲಿಯೇ ಡ್ರಾಪ್ ಮಾಡಿಬಿಡಿ. ಇದು ನಿಮ್ಮನ್ನು ನೀವು ಹಿಂಸೆ ಮಾಡಿಕೊಳ್ಳುವ ಅನವಶ್ಯಕ ಚಟ.
ಮುಲ್ಲಾ ನಸ್ರುದ್ದೀನ್ ಗೂ ಮತ್ತು ಸ್ಥಳೀಯ ದೇವಾಲಯದ ಪುರೋಹಿತನಿಗೂ ಸದಾ ಜಗಳ ಆಗುತ್ತಿತ್ತು. ಒಮ್ಮೆಯಂತೂ ಜಗಳ ಕೋರ್ಟಿನ ಮೆಟ್ಟಲೇರಿತು.
ಎರಡೂ ಕಡೆಯ ವಾದಗಳನ್ನು, ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಆಜ್ಞೆ ಮಾಡಿದರು,
“ ಇದು ಅಂಥ ದೊಡ್ಡ ವ್ಯಾಜ್ಯವೇನಲ್ಲ, ಇಬ್ಬರೂ ಒಂದೆಡೆ ಕೂತು ಪರಿಹರಿಸಿಕೊಳ್ಳಬಹುದು. ಇಬ್ಬರೂ ಒಬ್ಬರಿಗೊಬ್ಬರು ಹಸ್ತಲಾಘವ ಮಾಡಿ, ಇನ್ನೊಬ್ಬರ ಬಗ್ಗೆ ಒಳ್ಳೆಯ ಮಾತುಗಳನ್ನ ಹೇಳಿ “
ಮುಂದೆ ಬಂದ ಪುರೋಹಿತ, ನಸ್ರುದ್ದೀನ್ ನ ಕೈ ಕುಲುಕಿ ಹೇಳಿದ,
“ ನೀನು ನನಗೆ ಏನು ಬಯಸುತ್ತಿದ್ದೀಯೋ ನಾನೂ ನಿನಗೆ ಅದನ್ನೇ ಬಯಸುತ್ತೇನೆ “
“ ನೋಡಿ ಮಹಾಸ್ವಾಮಿ, ಇವ ಮತ್ತೆ ಜಗಳ ಶುರು ಮಾಡುತ್ತಿದ್ದಾನೆ “
ನಸ್ರುದ್ದೀನ್ ಕಿರುಚಿದ.
*******************************

