ಮನುಷ್ಯನಿಗೆ ಮೀರಿ ಬೆಳೆಯುವ ಅಂತಃಶಕ್ತಿ ಇದೆ, ಆದರೆ ನಾವು ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲವಾದರೆ, ಈ ಶಕ್ತಿ ವಿನಾಶಕಾರಿ ಶಕ್ತಿಯಾಗಿ ಬದಲಾವಣೆಗೊಳ್ಳುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಎಲ್ಲ ಸೃಜನಶೀಲ ಜನರು ಅಪಾಯಕಾರಿ, ಏಕೆಂದರೆ ಯಾವಾಗ ಅವರ ಸೃಜನಶೀಲತೆಗೆ ಅವಕಾಶ ಸಿಗುವುದಿಲ್ಲವೋ ಅವರು ವಿನಾಶಕಾರಿಯಾಗುತ್ತಾರೆ.
ಈ ಭೂಮಿಯ ಮೇಲೆ ಮಾನವ ಜನಾಂಗ ಮಾತ್ರ ಸೃಜನಶೀಲ ; ಬೇರೆ ಯಾವ ಪ್ರಾಣಿಯೂ ಮಾನವನಷ್ಟು ಅಪಾಯಕಾರಿಯಲ್ಲ ಏಕೆಂದರೆ ಬೇರೆ ಯಾವ ಪ್ರಾಣಿಗೂ ಸೃಜನಶೀಲ ಸಾಮರ್ಥ್ಯವಿಲ್ಲ. ಅವು ಸುಮ್ಮನೇ ಬದುಕುತ್ತವೆ, ಅವಕ್ಕೆ ನಿಯಮಿತವಾದ ಪ್ರೊಗ್ರಾಮ್ಡ್ ಬದುಕು ಇದೆ, ಇದನ್ನು ಬಿಟ್ಟು ಅವು ಬೇರೆ ದಾರಿ ತುಳಿಯುವುದಿಲ್ಲ. ನಾಯಿ, ನಾಯಿಯಾಗಿ ಬದುಕುತ್ತದೆ ಮತ್ತು ನಾಯಿಯಾಗಿ ಸಾಯುತ್ತದೆ. ಅದು ಯಾವತ್ತೂ ಬುದ್ಧ ಆಗಲು ಬಯಸುವುದಿಲ್ಲ, ಮತ್ತು ಅದು ಯಾವತ್ತೂ ದಾರಿ ತಪ್ಪಿ ಹಿಟ್ಲರ್ ಆಗುವುದಿಲ್ಲ. ಅದು ಸುಮ್ಮನೇ ತನ್ನ ದಾರಿಯನ್ನು ಹಿಂಬಾಲಿಸುತ್ತದೆ, ಅದು ಬಹಳ ಸಂಪ್ರದಾಯಬದ್ಧ, ಕಟ್ಟಾ ಆರ್ಥೋಡಾಕ್ಸ್, ಮಧ್ಯಮವರ್ಗೀಯ ಲೌಕಿಕ (middle class materialistic) ; ಮಾನವನನ್ನು ಹೊರತುಪಡಿಸಿ ಎಲ್ಲ ಪ್ರಾಣಿಗಳು ಮಧ್ಯಮವರ್ಗೀಯ ಲೌಕಿಕ ಪ್ರಾಣಿಗಳು.
ಮನುಷ್ಯ ಪ್ರಾಣಿಗಳಲ್ಲೇನೋ ಒಂದು ವಿಲಕ್ಷಣ ಗುಣವಿಶೇಷ ಇದೆ. ಅವರು ಏನೋ ಮಾಡಲು ಬಯಸುತ್ತಾರೆ, ಎಲ್ಲೋ ಹೋಗಲು ಬಯಸುತ್ತಾರೆ, ಏನೋ ಆಗಲು ಬಯಸುತ್ತಾರೆ; ಇದಕ್ಕೆ ಅವಕಾಶವಿಲ್ಲವಾದರೆ, ಅವರು ಗುಲಾಬಿ ಆಗಲಿಲ್ಲವಾದರೆ , ಅವರು weed (ಕಳೆ) ಆದರೂ ಆಗಲು ಬಯಸುತ್ತಾರೆ – ಅವರು ಏನೋ ಒಂದು ಆಗಬೇಕು ಅಷ್ಟೇ. ಅವರು ಬುದ್ಧ ಆಗಲಿಲ್ಲವಾದರೆ, ಅಪರಾಧಿಗಳಾಗುತ್ತಾರೆ. ಅವರು ಕವಿತೆ ಸೃಷ್ಟಿಸಲಿಲ್ಲವಾದರೆ, ಕರಾಳ ಸ್ವಪ್ನಗಳನ್ನು ಸೃಷ್ಟಿಸುತ್ತಾರೆ. ಅವರು ತಾವು ಅರಳಲಿಲ್ಲವಾದರೆ, ಬೇರೆಯವರ ಅರಳುವಿಕೆಗೂ ತೊಂದರೆ ನೀಡುತ್ತಾರೆ.
ಇಂಟರ್ವ್ಯೂನಲ್ಲಿ ನಸ್ರುದ್ದೀನ್ ನ ಪ್ರಶ್ನೆ ಮಾಡಲಾಯಿತು.
“ ನೀನು ಸೈಕಾಲೊಜಿಸ್ಟ್ ಕ್ಲಿನಿಕ್ ಲ್ಲಿ ಮಾಡ್ತಿದ್ದ ಕೆಲ್ಸ ಯಾಕೆ ಬಿಟ್ಟೆ ? “
ಆ ಸೈಕಾಲೊಜಿಸ್ಟ್ ಜೊತೆ ಕೆಲ್ಸ ಮಾಡೋದು ಕಷ್ಟ. ಕ್ಲಿನಿಕ್ ಗೆ ಲೇಟ್ ಆಗಿ ಬಂದ್ರೆ, ನನಗೆ ಸುಪೀರಿಯಾರಿಟಿ ಕಾಂಪ್ಲೆಕ್ಸ್, ಬೇಗ ಬಂದ್ರೆ ಕೀಳರಿಮೆ, ಸರಿಯಾದ ಸಮಯಕ್ಕೆ ಬಂದ್ರೆ obsessional disorder.
ನಸ್ರುದ್ದೀನ್ ಉತ್ತರಿಸಿದ.

