ಯಾವಾಗ ಏನಾದರೂ ನಿಜವಾಗಿ ಸಂಭವಿಸುತ್ತದೆಯಾದರೆ, ಅದು ಯಾವಾಗಲೂ ಅವರ್ಣನೀಯ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾವಾಗ ಏನೂ ಸಂಭವಿಸುವುದಿಲ್ಲವೋ ಆಗ ಅದರ ಬಗ್ಗೆ ಬೇಕಾದಷ್ಟು ಮಾತನಾಡಬಹುದು. ಆದರೆ ಯಾವಾಗ ಏನಾದರೂ ನಿಜವಾಗಿ ಸಂಭವಿಸುತ್ತದೆಯಾದರೆ ಅದು ಯಾವಾಗಲೂ ಬಹುತೇಕ ಅವರ್ಣನೀಯ. ಈ ಅಸಹಾಯಕತೆಯನ್ನ ಸುಮ್ಮನೇ ಫಿಲ್ ಮಾಡಬಹುದು.
ಏನಾದರೂ ಸಂಭವಿಸಿದಾಗ, ಏನಾಗುತ್ತಿದೆ, ಏನಾಯ್ತು ಎನ್ನುವುದನ್ನ ವಿವರಿಸಲು ನಿಮಗೆ ಸಾಧ್ಯವಾಗುತ್ತಿಲ್ಲವಾದರೆ ಅವು ಅನುಗ್ರಹದ ಕ್ಷಣಗಳು,
ಆಗ ಏನೋ ನಿಜವಾದದ್ದು ಸಂಭವಿಸಿದೆ ಎಂದರ್ಥ.
ಒಮ್ಮೆ ಹೀಗಾಯಿತು…..
ಮಾಸ್ಟರ್ ಹೈಕೂಯಿನ್ ತನ್ನ ಬಹು ದಿನಗಳ ಪ್ರಯಾಣದ ನಂತರ ಆಶ್ರಮಕ್ಕೆ ಹಿಂತಿರುಗಿದ. ಅವನು ಆಶ್ರಮ ಪ್ರವೇಶಿಸಿದಾಗ ಅದು ಸಂಜೆಯ ಧ್ಯಾನದ ಸಮಯವಾಗಿತ್ತು. ಆಶ್ರಮದ ಎಲ್ಲ ಮಾಸ್ಟರ್ ಗಳು, ಸನ್ಯಾಸಿಗಳೂ ತೀವ್ರ ಝಾಝೆನ್ ಧ್ಯಾನದಲ್ಲಿ ಮಗ್ನರಾಗಿದ್ದರು. ಯಾರಿಗೂ ಹೈಕೂಯಿನ್ ಬಂದಿರುವ ವಿಷಯ ಗೊತ್ತೇ ಆಗಲಿಲ್ಲ.
ಆದರೆ ಆಶ್ರಮದೊಳಗೆ ಹೈಕೂಯಿನ್ ಕಾಲಿಡುತ್ತಿದ್ದಂತೆಯೇ ಆಶ್ರಮದ ನಾಯಿಗಳು ಬೊಗಳುತ್ತ ಮಾಸ್ಟರ್ ಸುತ್ತ ಓಡಾಡುತ್ತ ಗದ್ದಲ ಹಾಕತೊಡಗಿದವು, ಬೆಕ್ಕುಗಳು ಮಾಸ್ಟರ್ ನ ಕಾಲು ನೆಕ್ಕುತ್ತ ಚೀರತೊಡಗಿದವು, ಕೋಳಿಗಳು ಸದ್ದು ಮಾಡುತ್ತ ಓಡಾಡತೊಡಗಿದವು, ಮೊಲಗಳು ಆ ಕಡೆಯಿಂದ ಈ ಕಡೆ ಸುಮ್ಮನೇ ಜಿಗಿದಾಡತೊಡಗಿದವು. ಎಲ್ಲ ಪ್ರಾಣಿ ಪಕ್ಷಿಗಳಲ್ಲಿ ಉತ್ಸಾಹ ತುಂಬಿ ತುಳುಕುತ್ತಿತ್ತು.
ಮಾಸ್ಟರ್ ಹೈಕೂಯಿನ್, ಧ್ಯಾನಸ್ಥರಾಗಿದ್ದ ತನ್ನ ಶಿಷ್ಯರನ್ನೂ, ಗದ್ದಲ ಹಾಕುತ್ತಿದ್ದ ಈ ಪ್ರಾಣಿಗಳನ್ನು ಒಮ್ಮೆ ಗಮನಿಸಿ ಮಾತನಾಡಿದ,
“ ಪ್ರೀತಿಯ ಒಂದೇ ಒಂದು ಆಕ್ರಂದನ ಸಾವಿರ ವರ್ಷ ಕುಳಿತು ಧ್ಯಾನ ಮಾಡುವುದಕ್ಕಿಂತ ಮಹತ್ತರವಾದದ್ದು.

