ಪ್ರಾಮುಖ್ಯತೆಯನ್ನು ಕಾಯ್ದುಕೊಳ್ಳಿ ( Keep the sanctity ) : ಓಶೋ 365 #Day 220

ಪ್ರತಿವ್ಯಕ್ತಿಯೂ ತನ್ನ ಅಂತರಂಗದ ಜಾಗವನ್ನು ಕಾಯ್ದುಕೊಳ್ಳಬೇಕು. ಆಗ ಮಾತ್ರ ಭೇಟಿಯಲ್ಲಿ, ಕೂಡುವಿಕೆಯಲ್ಲಿ ಖುಶಿಯಿದೆ, ಮತ್ತು ಇಂಥ ಕೂಡುವಿಕೆಯಲ್ಲಿ ಉತ್ಕಟತೆಯಿದೆ, ತುಡಿತವಿದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ



ನನ್ನ ಪ್ರಕಾರ ನಮ್ಮ work ಮತ್ತು love ನ ಪ್ರತ್ಯೇಕವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಆ ಎರಡೂ ಜೊತೆಯಾಗಿ ಮುಂದುವರೆಯುವ ಸಾಧ್ಯತೆ ಬಹಳ ಕಡಿಮೆ. ನಿಮ್ಮ ವರ್ಕ್ ಸಮಸ್ಯೆಗಳು ನಿಮ್ಮ ಲವ್ ಲೈಫ್ ನ ಮೇಲೆ ಪರಿಣಾಮ ಬೀರಲು ಶುರು ಮಾಡುತ್ತವೆ, ಮತ್ತು ನಿಮ್ಮ ಪ್ರೇಮ ಸಂಬಂಧಿತ ಸಮಸ್ಯೆಗಳು ನಿಮ್ಮ ಕೆಲಸದ   ಮೇಲೆ ಪ್ರಭಾವ ಬೀರುತ್ತವೆ. ಈ ಸಮಸ್ಯೆಗಳು multiplied ಆಗುವಂಥವು. ಪ್ರೇಮ, ಒಂದು ಮಾತ್ರ ಸಾಕು; ಇದು ತಾನೇ ಒಂದು ಜಗತ್ತು. ಇದರ ಮೇಲೆ ಬೇರೆ ಯಾವ ಭಾರವನ್ನು ಹಾಕಬೇಡಿ; ಇದು ಈಗಾಗಲೇ ಸಾಕಷ್ಟು ಸಂಕೀರ್ಣವಾಗಿದೆ. ಸಂಗತಿಗಳನ್ನು ಪ್ರತ್ಯೇಕವಾಗಿಡಿ, ಆಗ ಎಲ್ಲವೂ ಸುಲಲಿತವಾಗುತ್ತವೆ. ಕೆಲಸ ಮತ್ತು ಪ್ರೇಮ ಎರಡೂ ನಿರಾಳವಾಗಿ ಮುಂದುವರೆಯುತ್ತವೆ.

ಗಂಡ ಮತ್ತು ಹೆಂಡತಿ ದಿನದ ೨೪ ಗಂಟೆಯೂ ಜೊತೆ ಜೊತೆಯಾಗಿಯೇ ಇರುವುದು ಅಷ್ಟು ಒಳ್ಳೆಯದಲ್ಲ ; ಇದು ಕಷ್ಟಕರ ಕೂಡ. ಹೀಗಾದಾಗ ನಾವು ಆಸಕ್ತಿ ಕಳೆದುಕೊಂಡು ಬಿಡುತ್ತೇವೆ. ಆಗ ಗಂಡ ಹೆಂಡತಿ ಇಬ್ಬರಿಗೂ ಪ್ರಾಮುಖ್ಯತೆಯಿಲ್ಲ, ಇಬ್ಬರೂ ಪರಸ್ಪರರನ್ನ granted ಆಗಿ ತೆಗೆದುಕೊಳ್ಳುತ್ತಾರೆ. ನಿಮ್ಮದೇ ಆದ ಸ್ವಂತ ಜಾಗ ನಿಮಗೆ ಇರುವುದಿಲ್ಲ. ಇಬ್ಬರೂ ಒಬ್ಬರಮೇಲೊಬ್ಬರು overlap ಆಗುತ್ತೀರಿ, ಇಬ್ಬರೂ ಪರಸ್ಪರರ ಸ್ವಂತ ಜಾಗದಲ್ಲಿ ಅತಿಕ್ರಮಣ ಮಾಡಿ ಗದ್ದಲ ಸೃಷ್ಟಿ ಮಾಡಿಕೊಳ್ಳುತ್ತೀರಿ. ಮತ್ತು ಇದು ಆದಷ್ಟು ಬೇಗ ನಿಮ್ಮ ನಡುವಿನ ಒತ್ತಡಕ್ಕೆ ಕಾರಣವಾಗುತ್ತದೆ.

ಆದ್ದರಿಂದ ವ್ಯಕ್ತಿ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳುವುದು ಒಳ್ಳೆಯದು. ಪ್ರತಿಯೊಬ್ಬರೂ ತಮ್ಮ ತಮ್ಮ inner space ಹೊಂದುವುದು ಒಳ್ಳೆಯದು. ಆಗ ಯಾವಾಗಲೊಮ್ಮೆಯ ಭೇಟಿ ಖುಶಿ ತರುತ್ತದೆ. ಆಗ ಭೇಟಿಯಲ್ಲಿ ಆನಂದವಿದೆ, ಮತ್ತು ಇಂಥ ಭೇಟಿಯಲ್ಲಿ ಉತ್ಕಟತೆಯಿದೆ, ತುಡಿತವಿದೆ.  ೨೪ ಗಂಟೆಯೂ ತನಗೆ ಅಂಟಿಕೊಂಡಿರುವ ವ್ಯಕ್ತಿಯನ್ನು ನಾವು ಮರೆತು ಬಿಡುವ ಸಾಧ್ಯತೆ ಹೆಚ್ಚು. Obvious ಆದದ್ದು ನಮಗೆ ಯಾವಾಗಲೂ ಮುಖ್ಯ ಅನಿಸುವುದಿಲ್ಲ. ನಾವು ನಮ್ಮ ಅಂತರಂಗದ ಜಾಗಗಳನ್ನು ಕಾಯ್ದುಕೊಂಡಾಗ, ಆಪ್ತತೆಯೂ ಹೆಚ್ಚಾಗುತ್ತದೆ, ಸಲಿಗೆಯೂ ಬೆಳೆಯುತ್ತದೆ.

“ ಅಪ್ಪ, ನಾನು ಮದುವೆಯಾಗಬೇಕು “

ನಸ್ರುದ್ದೀನ್ ನ ಮಗ ಅಪ್ಪನಿಗೆ ಮನವಿ ಸಲ್ಲಿಸಿದ.

“ ಸಾಧ್ಯವಿಲ್ಲ, ನಿನಗಿನ್ನೂ ಬುದ್ಧಿ ಬಂದಿಲ್ಲ “

ನಸ್ರುದ್ದೀನ್,  ಸಾರಾಸಗಟಾಗಿ ಮಗನ ಮನವಿ ನಿರಾಕರಿಸಿದ.

“ ನನಗೆ ಬುದ್ಧಿ ಬರೋದು ಯಾವಾಗ ? “

ಮಗ, ಮತ್ತೆ ನಸ್ರುದ್ದೀನ್ ನನ್ನು ಪ್ರಶ್ನೆ ಮಾಡಿದ.

“ ಮದುವೆ ಯೋಚನೆಯನ್ನು ನೀನು ಸಂಪೂರ್ಣವಾಗಿ ತಲೆಯಿಂದ ತೆಗೆದುಹಾಕಿದಾಗ. “

ನಸ್ರುದ್ದೀನ್ ಮಗನಿಗೆ ಸಮಾಧಾನ ಮಾಡಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.