ಒಂದು ಬಗೆಯ ಸೆಕ್ಸ್, ಅದು ಲೈಂಗಿಕ ( sexual) ಅಲ್ಲವೇ ಅಲ್ಲ. ಸೆಕ್ಸ್ ಬಹಳ ಸುಂದರವಾದದ್ದು ಆದರೆ ಅದು ಮೈಂಡ್ ನಿಂದ ಕಲುಷಿತವಾಗಿರುವಾಗ ಯಾವತ್ತೂ ಸುಂದರ ಅಲ್ಲ ~ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನು ಪ್ರೀತಿಯೊಡನೆ
ಒಂದಾಗಿಬಿಟ್ಟಿದ್ದೇನೆ.
ಕಾಮ, ಈಗ ನನ್ನನ್ನು ಕಾಡುವುದಿಲ್ಲ
ಎಂದೆಯಲ್ಲಾ,
ಇದು ತುಂಬಾ ಅಪಾಯಕಾರಿ ಹೇಳಿಕೆ.
ನನ್ನ ಪ್ರೇಮವೂ ಹಾಗೇ
ಎಂದು ನಂಬಬೇಡ.
ಮುಂದೊಂದು ದಿನ
ನೀನು ಹಿಂದೆ ಹೇಗೆ ಪ್ರೇಮಿಸುತ್ತಿದ್ದೆ
ಎಂಬ ಚಿತ್ರ ನೋಡಿದೆಯಾದರೆ
ನಿನಗೆ, ನಿನ್ನ ಬಗ್ಗೆಯೇ ಅಸಹ್ಯವಾಗಬಹುದು.
ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೂ
ನಾಚುವುದಿಲ್ಲ ನೀನು ಆಗ.
-ರೂಮಿ
ನಮ್ಮ ಫೋಕಸ್ ಪ್ರೀತಿಯ ಮೇಲಿರಬೇಕು. ನೀವು ಒಬ್ಬರನ್ನು ಪ್ರೀತಿಸುತ್ತೀರಿ, ನೀವು ನಿಮ್ಮ ಇರುವಿಕೆಯನ್ನು (being) ಅವರ ಜೊತೆ ಹಂಚಿಕೊಳ್ಳುತ್ತೀರಿ, ಮತ್ತು space ನ ಹಂಚಿಕೊಳ್ಳುತ್ತೀರಿ. ನಿಜವಾದ ಪ್ರೀತಿ, ಇಬ್ಬರು ವ್ಯಕ್ತಿಗಳ ನಡುವೆ ಅವಕಾಶವನ್ನು (space) ಸಾಧ್ಯ ಮಾಡುವುದು. ಈ space ಇಬ್ಬರದೂ ಅಲ್ಲ ಅಥವಾ ಇಬ್ಬರದೂ ಹೌದು. ಇಬ್ಬರ ನಡುವಿನ ಈ ಪುಟ್ಟ ಅವಕಾಶದಲ್ಲಿ ನೀವಿಬ್ಬರೂ ಭೇಟಿ ಮಾಡುತ್ತೀರಿ, ಒಡನಾಡುತ್ತೀರಿ ಮತ್ತು ಒಂದಾಗುತ್ತೀರಿ. ಈ space ಭೌತಿಕ space ಅಲ್ಲ, ಇದು ಅಧ್ಯಾತ್ಮಿಕ space. ಈ ಅವಕಾಶದಲ್ಲಿ ನೀನು ನೀನಲ್ಲ ಮತ್ತು ಅವರು ಅವರಲ್ಲ. ನೀವಿಬ್ಬರೂ ಆ ಅವಕಾಶದಲ್ಲಿ ಭೇಟಿಯಾಗುತ್ತಿದ್ದೀರಿ ಅಷ್ಟೇ.
ಒಂದು ಬಗೆಯ ಸೆಕ್ಸ್ , ಅದು ಲೈಂಗಿಕ ( sexual) ಅಲ್ಲವೇ ಅಲ್ಲ. ಸೆಕ್ಸ್ ಬಹಳ ಸುಂದರವಾದದ್ದು ಆದರೆ ಅದು ಮೈಂಡ್ ನಿಂದ ಕಲುಷಿತವಾಗಿರುವಾಗ (sexuality) ಯಾವತ್ತೂ ಸುಂದರ ಅಲ್ಲ. Sexuality ಎಂದರೆ ಅದು ಬೌದ್ಧಿಕ ಸೆಕ್ಸ್ – ಸೆಕ್ಸ್ ಬಗ್ಗೆ ಯೋಚಿಸುವುದು, ಅದನ್ನು ಪ್ಲಾನ್ ಮಾಡುವುದು, ಮ್ಯಾನೇಜ್ ಮಾಡುವುದು, ಮ್ಯಾನುಪ್ಯುಲೇಟ್ ಮಾಡುವುದು. ಹಾಗೆಂದರೆ ಇನ್ನೊಬ್ಬರನ್ನು ಲೈಂಗಿಕ ವಸ್ತು ( sex object) ಎಂದು ತಿಳಿದುಕೊಂಡು ಅಪ್ರೋಚ್ ಮಾಡುವುದು.
ಯಾವಾಗ ಮೈಂಡ್ ಸೆಕ್ಸ್ ನ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೋ ಆಗ ಅದು ಶುದ್ಧ, ಅದು ಮುಗ್ಧ. ಇದು ವರ್ಜಿನ್ ಸೆಕ್ಸ್. ಇಂಥ ಸೆಕ್ಸ್ , ಬ್ರಹ್ಮಚರ್ಯಕ್ಕಿಂತಲೂ ಶುದ್ಧವಾದದ್ದು, ಏಕೆಂದರೆ ಒಬ್ಬ ಬ್ರಹ್ಮಚಾರಿ ಸೆಕ್ಸ್ ಬಗ್ಗೆ ಯೋಚಿಸುತ್ತಾನೆಂದರೆ ಅದು ಬ್ರಹ್ಮಚರ್ಯ ಅಲ್ಲ.
ತುಂಬು ಬದುಕನ್ನು ಬಾಳಿದ ಒಬ್ಬ ವಯಸ್ಸಾದ ಸನ್ಯಾಸಿಯನ್ನು ಯುವತಿಯರ ವಿದ್ಯಾಸಂಸ್ಥೆಯೊಂದರಲ್ಲಿ ಅಧ್ಯಾತ್ಮದ ಶಿಕ್ಷಕನನ್ನಾಗಿ ನೇಮಿಸಲಾಯಿತು.
ಯುವತಿಯರು ಮೇಲಿಂದ ಮೇಲೆ ಪ್ರೇಮದ ಬಗ್ಗೆ ತಮ್ಮೊಳಗೆ ಮಾತನಾಡಿಕೊಳ್ಳುವುದನ್ನು ಗಮನಸಿದ ಸನ್ಯಾಸಿ, ಒಂದು ದಿನ ಆ ಯುವತಿಯರನ್ನು ಎಚ್ಚರಿಸಿದ.
“ ಏನೇ ಅತಿಯಾದರೂ ಬದುಕಿನಲ್ಲಿ ಅದರಿಂದಾಗುವ ಅಪಾಯವನ್ನು ಮೊದಲು ತಿಳಿದುಕೊಳ್ಳಿ.
ಕಾದಾಟದಲ್ಲಿ ಅತಿಯಾದ ಕೋಪ, ಅಜಾಗರೂಕತೆಗೆ ಕೊನೆಗೆ ಸಾವಿಗೆ ಕಾರಣವಾಗುತ್ತದೆ.
ಧಾರ್ಮಿಕ ನಂಬಿಕೆಗಳ ಬಗ್ಗೆ ಅತಿ ಉತ್ಸಾಹ, ಸಂಕುಚಿತ ಸ್ವಭಾವಕ್ಕೆ, ಹಿಂಸೆಗೆ ದಾರಿಯಾಗುವುದು.
ಪ್ರೇಮದಲ್ಲಿ ಅತಿ ಉತ್ಕಟತೆ, ಮನಸ್ಸಿನಲ್ಲಿ ಪ್ರೇಮಿಯ ಬಗ್ಗೆ ಕಲ್ಪನೆಗಳನ್ನು ಹುಟ್ಟುಹಾಕುವುದು. ಮುಂದೆ ಈ ಕಲ್ಪನೆಗಳು ಕೃತಕ, ಹುಸಿ ಎಂದು ಸಿದ್ಧವಾದಾಗ ಹುಟ್ಟುವ ಸಿಟ್ಟು, ನೆಮ್ಮದಿಯನ್ನು ನಾಶ ಮಾಡುವುದು.
ಅತಿಯಾಗಿ ಪ್ರೇಮಿಸುವುದೆಂದರೆ, ಚೂರಿಯ ಮೊನೆಯಿಂದ ಜೇನಿನ ಹನಿಯನ್ನು ನೆಕ್ಕಿದಂತೆ”
“ ಗಂಡು ಹೆಣ್ಣಿನ ಪ್ರೇಮದ ಬಗ್ಗೆ ನಿನಗೆ ಹೇಗೆ ಗೊತ್ತು? ನೀನು ಬ್ರಹ್ಮಚಾರಿ ಅಲ್ವಾ? “
ಒಬ್ಬ ಯುವತಿ ಪ್ರಶ್ನೆ ಮಾಡಿದಳು.
“ ನಾನು ಸನ್ಯಾಸಿಯಾದ ಕಥೆಯನ್ನು ಮುಂದೆ ಯಾವಾಗಲಾದರೂ ನಿಮಗೆ ಹೇಳುತ್ತೇನೆ “
ಸನ್ಯಾಸಿ ನಗುತ್ತ ಎದ್ದು ಹೋದ.

