ಸೆಕ್ಸ್ (Sex) : ಓಶೋ 365 #Day 252

ನಿಮ್ಮ ಲೈಂಗಿಕ ಅನುಭವದ ಆಳ ನಿಮ್ಮ ಬಾಕಿ  ಎಲ್ಲ ಅನುಭವಗಳ ಆಳವನ್ನು ನಿರ್ಧರಿಸುವುದು. ನಿಮಗೆ ಲೈಂಗಿಕ ಅನುಭವದ ಆಳವನ್ನು ತಲುಪುವುದು ಸಾಧ್ಯವಾಗದೇ ಹೋದರೆ, ನಿಮಗೆ ಬೇರೆ ಯಾವುದರಲ್ಲೂ ಆಳವನ್ನು ತಲುಪುವುದು ಸಾಧ್ಯವಾಗಲಾರದು, ಏಕೆಂದರೆ ಸೆಕ್ಸ್ ಅತ್ಯಂತ ಮೂಲಭೂತವಾದ, ಮತ್ತು ಅತ್ಯಂತ ಸ್ವಾಭಾವಿಕವಾದ ಅನುಭವ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ



ನಾನು ಪ್ರೀತಿಯೊಡನೆ
ಒಂದಾಗಿಬಿಟ್ಟಿದ್ದೇನೆ.
ಕಾಮ, ಈಗ ನನ್ನನ್ನು ಕಾಡುವುದಿಲ್ಲ
ಎಂದೆಯಲ್ಲಾ,
ಇದು ತುಂಬಾ ಅಪಾಯಕಾರಿ ಹೇಳಿಕೆ.

ನನ್ನ ಪ್ರೇಮವೂ ಹಾಗೇ
ಎಂದು ನಂಬಬೇಡ.

ಮುಂದೊಂದು ದಿನ
ನೀನು ಹಿಂದೆ ಹೇಗೆ ಪ್ರೇಮಿಸುತ್ತಿದ್ದೆ
ಎಂಬ ಚಿತ್ರ ನೋಡಿದೆಯಾದರೆ
ನಿನಗೆ, ನಿನ್ನ ಬಗ್ಗೆಯೇ ಅಸಹ್ಯವಾಗಬಹುದು.
ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೂ
ನಾಚುವುದಿಲ್ಲ ನೀನು ಆಗ.

-ರೂಮಿ

ನಿಮ್ಮ biology ಸೆಕ್ಸ್ ಗೆ ಸಿದ್ಧವಾಗಿರುವಂಥದು, ಈ ಬಗ್ಗೆ ನೀವು ಕಲಿಯುವಂಥದು ಏನೂ ಇಲ್ಲ. ಸಂಗೀತವನ್ನು ಕಲಿಯಬೇಕಾಗುವುದು ಏಕೆಂದರೆ ಅದು ನಿಮ್ಮೊಳಗೆ built in ಅಲ್ಲ. ಕಾವ್ಯ, ಪೇಂಟಿಂಗ್, ನೃತ್ಯ ಈ ಎಲ್ಲವೂ ನೀವು ಕಲಿಯಬೇಕಾಗಿರುವ ಸಂಗತಿಗಳು. ಆದರೆ ಸೆಕ್ಸ್ ಹಾಗಲ್ಲ, ಅದನ್ನು ಈಗಾಗಲೇ ನಿಮ್ಮ biology ಯಲ್ಲಿ ಅಚ್ಚೊತ್ತಲಾಗಿದೆ.

ಹಾಗಾಗಿ, ಇಷ್ಟು ಸಹಜವಾದ ಸೆಕ್ಸ್ ನೊಳಗೆ ನಿಮಗೆ ಆಳವಾಗಿ ಪ್ರವೇಶ ಮಾಡುವುದು ಸಾಧ್ಯವಾಗದೇ ಹೋದರೆ, ನೀವು ಹೇಗೆತಾನೆ ಸಂಗೀತದ, ನೃತ್ಯದ ಆಳವನ್ನು ಪ್ರವೇಶ ಮಾಡುತ್ತೀರಿ?  ಸೆಕ್ಸ್ ನ ಬಗ್ಗೆ ನೀವು ಹಿಂಜರಿತ ಪ್ರದರ್ಶನ ಮಾಡುತ್ತೀರಾದರೆ, ನೃತ್ಯದ ಬಗ್ಗೆಯೂ ನೀವು ಹಿಂಜರಿಯುತ್ತೀರಿ. ಮುಂದೆ ನಿಮಗೆ ಯಾವ ಸಂಬಂಧವನ್ನು ಹೊಂದುವುದೂ ಸಾಧ್ಯವಾಗುವುದಿಲ್ಲ ಏಕೆಂದರೆ ಸಂಬಂಧಗಳು ಲೈಂಗಿಕವಾಗುತ್ತಿರುತ್ತವೆ. ಜನ ಭಯಭೀತರಾಗಿದ್ದಾರೆ, ಮತ್ತು ವಿಶೇಷವಾಗಿ ಆಧುನಿಕ ಮೈಂಡ್ ಭಯಭೀತವಾಗಿದೆ, ಏಕೆಂದರೆ ಸಂಗತಿಗಳ ಬಗ್ಗೆ ಲಭ್ಯವಾಗಿರುವ ಬಹಳಷ್ಟು ತಿಳುವಳಿಕೆ ಸಂಗತಿಯ ಆಳವನ್ನು ಪ್ರವೇಶಿಸುವುದಕ್ಕೆ ಅಡ್ಡಿಯಾಗಿದೆ, ಮತ್ತು ಜನರನ್ನು ಭಯಕ್ಕೆ ದೂಡಿದೆ.

ಮಾನವ ಜನಾಂಗದ ಇತಿಹಾಸದಲ್ಲಿ ಮನುಷ್ಯ ಹಿಂದೆಂದೂ ಇಷ್ಟು ಭಯಭೀತನಾಗಿರಲಿಲ್ಲ ಆದರೆ ಈಗ ಗಂಡಸು ತಾನು ಸಾಕಷ್ಟು ಗಂಡು ಹೌದೋ ಅಲ್ಲವೋ ಎಂದು ಗಾಬರಿಯಾಗಿದ್ದರೆ, ಹೆಣ್ಣು ತಾನು orgasm ಪಡೆಯುವುದು ಸಾಧ್ಯವೇ ಎಂದು ಭಯಗ್ರಸ್ತಳಾಗಿದ್ದಾಳೆ.  Orgasm ಹೊಂದುವುದು ಅವಳಿಗೆ ಸಾಧ್ಯವಾಗದೇ ಹೋದರೆ, ಅವಳು ಸೆಕ್ಸ್ ನ ಪ್ರವೇಶ ಮಾಡದಿರುವುದೇ ಒಳ್ಳೆಯದು, ಏಕೆಂದರೆ ಅಂಥ ಪರಿಸ್ಥಿತಿ ಬಹಳ ಅವಮಾನಕಾರಿಯಾದದ್ದು ಅಥವಾ ಅವಳು ತೋರಿಕೆಯ orgasm ನ ಪ್ರದರ್ಶನ ಮಾಡಬೇಕಾಗುವುದು. ಮತ್ತು ಗಂಡಸು, ತಾನು ಮಹಾ ಗಂಡಸು ಎಂದು ಹೆಣ್ಣಿಗೆ ಪ್ರೂವ್ ಮಾಡುವ ಭಯದಿಂದ ತತ್ತರಿಸುತ್ತಿದ್ದಾನೆ. ಎಂಥ ಮೂರ್ಖತನ ಇದು. ನೀವು ಕೇವಲ ನಿಮ್ಮ ಹಾಗಿದ್ದರೆ ಸಾಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.