ಜ್ಞಾನೋದಯದ ಸ್ಥಿತಿ ಆನಂದಮಯ ಸ್ಥಿತಿಯಲ್ಲ; ಇದು ಆನಂದಮಯ ಸ್ಥಿತಿಯನ್ನೂ ಮೀರಿದ್ದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ರೂಮಿ
ತನ್ನ ಅಂತಃಕರಣದ ಭಾವಪರವಶತೆಯಲ್ಲಿ
ಮೈಮರೆತುಬಿಟ್ಚಾಗಲೆಲ್ಲ
ಸ್ಪಷ್ಟತೆಯನ್ನು ಕಳೆದುಕೊಂಡುಬಿಡುತ್ತಾನೆ.
ಆ ಸ್ಥಿತಿಗೆ ಶರಣಾಗಿ
ಎಲ್ಲವನ್ನೂ ಮರೆತುಬಿಡುತ್ತಾನೆ.
ಆದರೆ ನಾನು ಹಾಗಲ್ಲ,
ಅರಿವು ನನ್ನ ಕೈ ಬಿಡಿದು ನಡೆಸುತ್ತದೆ,
ನಾನೂ ಅದೇ ಆನಂದ ಅನುಭವಿಸುತ್ತೇನಾದರೂ
ಪ್ರೇಮದ ಭಾವೋನ್ಮಾದ
ನನ್ನ ಯಾವತ್ತೂ ಮೈ ಮರೆಸಿಲ್ಲ.
~ ಶಮ್ಸ್ ತಬ್ರೀಝಿ
ಜ್ಞಾನೋದಯದ ಸ್ಥಿತಿಯಲ್ಲಿ ಯಾವ ಅಂಥ ಎಕ್ಸೈಟಮೆಂಟ್ ಇಲ್ಲ; ಆದರೆ ಆನಂದಮಯ ಸ್ಥಿತಿ ಎಕ್ಸೈಟಮೆಂಟ್ ನ ಸ್ಥಿತಿ. ಆನಂದಮಯ ಸ್ಥಿತಿ ಅತ್ಯಂತ ಸುಂದರ state of mind ನಿಜವಾದರೂ ಇದು ಕೊನೆಗೂ ಒಂದು state of mind ಮಾತ್ರ. ಆನಂದಮಯ ಸ್ಥಿತಿ ಒಂದು ಅನುಭವ. ಆದರೆ ಜ್ಞಾನೋದಯದ ಸ್ಥಿತಿ ಅನುಭವವಲ್ಲ ಏಕೆಂದರೆ ಈ ಸ್ಥಿತಿಯಲ್ಲಿ ಅನುಭವಿಸಲು ಯಾರೂ ಉಳಿದಿಲ್ಲ.
ಆನಂದಮಯ ಸ್ಥಿತಿ ಸುಂದರವಾದರೂ ಅದು ಇನ್ನೂ ಇರುವುದು ಅಹಂನ ಪರಿಧಿಯಲ್ಲಿ. ಆದರೆ ಜ್ಞಾನೋದಯ ಅಹಂ ನ ಮೀರಿದ್ದು. ಏಕೆಂದರೆ ಜ್ಞಾನೋದಯ ಆಗುವ ಸಂಗತಿಯಲ್ಲ, ಅದು ಇರುವ ಸಂಗತಿ. ಇದು ಬಿಡುಗಡೆಯ ಸ್ಥಿತಿಯಲ್ಲ, ನಂತರ ನೀವು ಬಿಡುಗಡೆಯ ಸ್ಥಿತಿಯಲ್ಲಿಯೇ ಇರುವುದಿಲ್ಲ, ಇದು ನಿಮ್ಮಿಂದ ನಿಮ್ಮ ಬಿಡುಗಡೆ.
ಜ್ಞಾನೋದಯದ ಕೃಪೆಗೆ ಪಾತ್ರನಾದಿದ್ದ ಝೆನ್ ಮಾಸ್ಟರ್ ಜೋಶು ನ ಆಶ್ರಮಕ್ಕೆ ಒಬ್ಬ ಅತಿಥಿ ಮೊದಲ ಬಾರಿ ಆಗಮಿಸಿದ್ದ. ಆಶ್ರಮದ ಉದ್ಯಾನವನದಲ್ಲಿ ಪ್ರಖರ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಒಬ್ಬ ವೃದ್ಧ ಸನ್ಯಾಸಿ ಧ್ಯಾನ ಮಾಡುತ್ತ ಕುಳಿತಿರುವುದನ್ನ ಆ ಅತಿಥಿ ಗಮನಿಸಿದ. ಆ ವೃದ್ಧನ ಬಗ್ಗೆ ಅತಿಥಿಗೆ ಕುತೂಹಲ ಬೆಳೆಯಿತು.
ಉದ್ಯಾನವನದ ಬಾಗಿಲಲ್ಲೇ ಕುಳಿತಿದ್ದ ಕೆಲಸಗಾರನನ್ನು ಅತಿಥಿ ಪ್ರಶ್ನೆ ಮಾಡಿದ. “ ಯಾರು ಆ ತೇಜಸ್ವಿ ಸನ್ಯಾಸಿ? ಅವನೇನಾ ಝೆನ್ ಮಾಸ್ಟರ್ ಜೋಶೋ?
“ ಅಲ್ಲ, ಅಲ್ಲ ನಾನು ಜೋಶು, ಅವ ನನ್ನ ನೆಚ್ಚಿನ ಶಿಷ್ಯ” ಕೆಲಸಗಾರ ಮುದುಕ ಉತ್ತರಿಸಿದ.

