ನೀವು ಮ್ಯಾರಥಾನ್ ( long distance running ) ಓಡುವಿರಾದರೆ ಅದು ಪರಿಪೂರ್ಣ ಧ್ಯಾನ. ಜಾಗಿಂಗ್, ರನ್ನಿಂಗ್, ಈಜು – ಯಾವುದರಲ್ಲಿ ನೀವು ಪರಿಪೂರ್ಣವಾಗಿ ಒಳಗೊಳ್ಳುವುದು ಸಾಧ್ಯವಾಗುತ್ತದೆಯೋ ಅದು ಬಹಳ ಒಳ್ಳೆಯದು~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನದಿಯ ಒಂದು ತೀರ ಇಲ್ಲದಾಗ
ಇನ್ನೊಂದು ತೀರ ಇರುವುದು ಹೇಗೆ ಸಾಧ್ಯ?
ಎರಡೂ ತೀರಗಳು ಇಲ್ಲವಾದಾಗ
ಎಲ್ಲೆಲ್ಲೂ ನದಿ.
ಇದೇ ಶೂನ್ಯದ ಅಖಂಡತೆ.
ನಿಮ್ಮ ಬುದ್ಧಿ – ಮನಸ್ಸು ಇಲ್ಲದಾಗ,
ನಿಮ್ಮ ಸುತ್ತ ಗಡಿ ಇಲ್ಲ
ಆದ್ದರಿಂದಲೆ ನೀವು ಗಮನಿಸುತ್ತಿರುವ
ಹೂವಿನ ಸುತ್ತಲೂ ಗಡಿ ಇಲ್ಲ.
ಆಗ ನೀವಿಬ್ಬರೂ ಒಂದು.
ಎರಡೂ ಶೂನ್ಯಗಳು ಒಂದು
ಇದೇ ಶೂನ್ಯದ ಅಖಂಡತೆ.
ಬೌದ್ಧರು ‘ಅನಾತ್ಮ’ ಎಂದಿರುವುದೂ ಇದನ್ನೇ.
ಎಷ್ಟು ಸುಂದರ ಈ ಸತ್ಯ.
~ Hsin Hsin Ming
ಈ ಎಲ್ಲದರಲ್ಲಿ ಕ್ರಿಯೆ ಮಾತ್ರ ಉಳಿದುಕೊಳ್ಳುತ್ತದೆ, ನೀವು ಕಳೆದು ಹೋಗಿಬಿಡುತ್ತೀರಿ, ಏಕೆಂದರೆ ಇಲ್ಲಿ ಅಹಂ ಕೆಲಸ ಮಾಡುವುದಿಲ್ಲ. ನೀವು ರನ್ನಿಂಗ್ ಮಾಡುತ್ತಿರುವಾಗ ಅಲ್ಲಿ ಕೇವಲ ರನ್ನಿಂಗ್ ಇರುತ್ತದೆ, ಅಲ್ಲಿ ರನ್ನರ್ ಇರುವುದಿಲ್ಲ. ಇದೇ ಧ್ಯಾನ.
ಡಾನ್ಸರ್ ಇರದೇ ಕೇವಲ ಡಾನ್ಸ್ ಇರುವಾಗ ಅದು ಧ್ಯಾನ. ನೀವು ಪೇಂಟ್ ಮಾಡುವಾಗ, ಪೇಂಟಿಂಗ್ ಮಾತ್ರ ಇದ್ದು ಪೇಂಟರ್ ಕಳೆದುಹೋಗಿ ಬಿಟ್ಟರೆ ಅದು ಧ್ಯಾನ. ಯಾವುದೇ ಕ್ರಿಯೆ, ಎಲ್ಲಿ ಕ್ರಿಯೆ ಮತ್ತು ಕರ್ತನ ನಡುವೆ ವಿಭಜನೆ ಇರುವುದಿಲ್ಲವೋ ಅದು ಧ್ಯಾನವಾಗುತ್ತದೆ.
ನೀವು ಬದುಕನ್ನು ಅದರ ಎಲ್ಲ ಆಯಾಮಗಳೊಂದಿಗೆ, ಎಲ್ಲ ಬಣ್ಣಗಳೊಂದಿಗೆ ಯಾವ ಭಯ, ಯಾವ ಅಪರಾಧಿ ಭಾವ ಇಲ್ಲದೇ ಇಡಿಯಾಗಿ ಬಾಳಬಹುದು. ನೀವು Zorba ಥರ ಡಾನ್ಸ್ ಮಾಡಬಹುದು Buddha ನ ರೀತಿ ಧ್ಯಾನ ಮಾಡಬಹುದು. ನನಗೆ ಇವುಗಳಲ್ಲಿ ಯಾವ ದ್ವಂದ್ವವೂ ಕಾಣುವುದಿಲ್ಲ. Infact ನೀವು ಪರಿಪೂರ್ಣವಾಗಿ, ಆಳವಾಗಿ ಡಾನ್ಸ್ ಮಾಡುವಿರಾದರೆ, ಎಷ್ಟು ಆಳ ಎಂದರೆ ಕೊನೆಗೆ ಡಾನ್ಸರ್ ಮಾಯವಾಗಿ ಕೇವಲ ಡಾನ್ಸ್ ಉಳಿದುಕೊಳ್ಳುತ್ತದಲ್ಲ ಅಷ್ಟು ಆಳವಾಗಿ ಡಾನ್ಸ್ ಮಾಡುವಿರಾದರೆ, ಅದು ಧ್ಯಾನ ಆರಂಭ ಮಾಡಲು ಸರಿಯಾದ ಸಮಯ.
ಮತ್ತು ನಿಮ್ಮನ್ನು ನೀವು ಆಳವಾಗಿ ಧ್ಯಾನದಲ್ಲಿ ತೊಡಗಿಸಿಕೊಂಡು, ಎಷ್ಟು ಮೌನ, ಪ್ರಶಾಂತತೆ ಮತ್ತು ಆನಂದವನ್ನು ಹೊಂದಿದ್ದೀರೆಂದರೆ ಅದು ನಿಮಗೆ ಸಾಕಾಗಿ ನೀವು ಅದನ್ನು ಈಗ ಇಡೀ ಜಗತ್ತಿಗೆ ಹಂಚಲು ಹಾತೊರೆಯುತ್ತಿರುವಿರಿ. ಇದು ಡಾನ್ಸ್ ಶುರುಮಾಡಲು ಸರಿಯಾದ ಸಮಯ. ಆಗ ನಿಮ್ಮ ಡಾನ್ಸ್ ಇಡೀ ಜಗತ್ತಿನ ಮೇಲೆ ತನ್ನ ಹಾರೈಕೆಗಳ ಮಳೆ ಸುರಿಸುತ್ತದೆ .

