ಸ್ವಾರ್ಥಿ ಮನಸ್ಸು (Old & Mean): ಓಶೋ 365 #Day 272



ವಯಸ್ಸಾಗುತ್ತ ಹೋದಂತೆ ಮೈಂಡ್ ಮುದುಡಿಕೊಳ್ಳುತ್ತ ಹೋಗುತ್ತದೆ, ಮೈಂಡ್ ಸಣ್ಣದಾಗುತ್ತ, ಅನ್ಯಾಯಮಯಿಯಾಗುತ್ತ ಹೋಗುತ್ತದೆ. ಆದ್ದರಿಂದಲೇ ವಯಸ್ಸಾದವರು ಕೊಂಚ mean ಆಗಿರುವುದು ಅನಿರೀಕ್ಷಿತವೇನಲ್ಲ ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ

ಬುದ್ಧಿ ಮತ್ತು ಪ್ರೇಮದ ಸಂಯೋಜನೆ
ಬೇರೆ ಬೇರೆ ಧಾತುಗಳಿಂದ .
ಬುದ್ಧಿ  ಜನರ ನಡುವೆ ಗಂಟು ಹಾಕುತ್ತದೆ
ಆದರೆ  ಯಾವ ಅಪಾಯಕ್ಕೂ ತೆರೆದುಕೊಳ್ಳದಂತೆ.
ಆದರೆ ಪ್ರೇಮ ಹಾಗಲ್ಲ
ಅದು ಬಿಚ್ಚುತ್ತದೆ ಸಂಬಂಧಗಳಲ್ಲಿನ ಸಿಕ್ಕುಗಳನ್ನ
ಎಲ್ಲ ಅಪಾಯಗಳನ್ನೂ ಆಹ್ವಾನಿಸುತ್ತ.

ಬುದ್ದಿಯದು
ಯಾವಾಗಲೂ ಜಾಗರೂಕತೆಯ ಸ್ವಭಾವ
ಸಲಹೆ ನೀಡುವ ಹುಕಿ
ಉನ್ಮತ್ತ ಆನಂದದ ಬಗ್ಗೆ ಸದಾ ಹಿಂಜರಿಕೆ.
ಆದರೆ ಪ್ರೇಮಕ್ಕೆ ಅಪಾರ ಉತ್ಸಾಹ
ಅಪಾಯಗಳಿಗೆ ಎದೆಯೊಡ್ಡುವ ಹುರುಪು
ಬೆಂಕಿಯಲ್ಲಿ ಹಾರಿ ಬಂಗಾರವಾಗುವ ಉತ್ಕಟತೆ.

ಬುದ್ಧಿಯನ್ನು ಒಡೆಯುವುದು ಕಠಿಣ
ಆದರೆ ಪ್ರೇಮ ನಿರಾಯಾಸವಾಗಿ
ತನ್ನನ್ನು ತಾನು ಒಡೆದುಕೊಂಡು
ಅವಶೇಷವಾಗಬಲ್ಲದು.

ನಿಮಗೆ ಗೊತ್ತಿದೆ
ನಿಧಿ ಅಡಗಿರುವುದೆ ಅವಶೇಷಗಳಡಿಯಲ್ಲಿ
ಒಡೆದ ಹೃದಯ
ತನ್ನೊಳಗೆ ಬಚ್ಚಿಟ್ಟುಕೊಂಡಿದೆ
ಅಪಾರ ಸಂಪತ್ತು.

~ ಶಮ್ಸ್

ಆದ್ದರಿಂದ ಬಹಳಷ್ಟು ಜನ ಯಾವಾಗಲೂ ಯಾವ ಕಾರಣವೂ ಇಲ್ಲದೇ ಕೋಪದಲ್ಲಿರುತ್ತಾರೆ, ಕಿರಿಕಿರಿಯಲ್ಲಿರುತ್ತಾರೆ. ಇದಕ್ಕೆ ಕಾರಣವೆಂದರೆ ಅವರು ಬದುಕಿನಲ್ಲಿ ಹೃದಯವನ್ನು ಮಿಸ್ ಮಾಡಿಕೊಂಡು ನಡೆಯುತ್ತಿರುವುದು. ಅವರು ಕೇವಲ ತಮ್ಮ ಮೈಂಡ್ ಪ್ರಕಾರ ಬದುಕುತ್ತಿರುತ್ತಾರೆ, ಮತ್ತು ಮೈಂಡ್ ಗೆ ವಿಶಾಲಗೊಳ್ಳುವ ಯಾವ ದಾರಿಯೂ ಗೊತ್ತಿಲ್ಲ; ಅದಕ್ಕೆ ಕೇವಲ ಮುದುಡಿಕೊಳ್ಳುವುದು ಮಾತ್ರ ಗೊತ್ತು.

ಜ್ಞಾನಿಗಿಂತ ಅಜ್ಞಾನಿಯ ಮೈಂಡ್ ದೊಡ್ಡದು , ಏಕೆಂದರೆ ಅಜ್ಞಾನಿಯ ಮೈಂಡ್ ನಲ್ಲಿ ಏನೂ ಇಲ್ಲ. ಕೇವಲ ಜಾಗ ಮಾತ್ರ ಉಂಟು. ಜ್ಞಾನಿಯ ಮೈಂಡ್ ನಲ್ಲಿ ಜ್ಞಾನ ತುಂಬಿಕೊಂಡಿದೆ ; ಯಾವ ಜಾಗವೂ ಖಾಲೀ ಇಲ್ಲ. ಆದರೆ ಮನುಷ್ಯನ ಅಂತರಾಳದ ಇನ್ನೊಂದು ಹೆಸರು ಹೃದಯ.

ಹೇಗೆ ಹೊರಗಿನ ಜಾಗ, ಆಕಾಶ ಅಪರಿಮಿತವಾಗುದೆಯೋ ಹಾಗೆಯೇ ಅಂತರಾಳದ ಆಕಾಶಕ್ಕೂ ಮಿತಿಯಿಲ್ಲ. ಹೀಗೆ ಇರಲೇ ಬೇಕು, ಹೊರಗಿನ ಆಕಾಶ ಅಪರಿಮಿತವಾಗಿದ್ದರೆ ಒಳಗಿನ ಆಕಾಶ ಕೂಡ ಅಪರಿಮಿತವಾಗಿರಲೇ ಬೇಕು. ಈ ಸಮತೋಲನ ಇರಲೇ ಬೇಕು. ಒಳಗಿನ ಆಕಾಶ ಹೊರಗಿನ ಆಕಾಶದಷ್ಟೇ ವಿಶಾಲವಾಗಿದೆ ಅದೇ ಪ್ರಮಾಣದಲ್ಲಿ.

ಆದ್ದರಿಂದ ಮೈಂಡ್ ಒಳಗೊಳ್ಳುವಾಗ ಧ್ಯಾನ ಸಾಧ್ಯವಾಗುವುದಿಲ್ಲ, ಆಗ ಅದು ಕೇವಲ ಧ್ಯಾನದ ನಕಲು ಮಾತ್ರ. ಇದು ನಿಜ ಅಲ್ಲ, ವಾಸ್ತವ ಅಲ್ಲ. ನಿಜವಾದದ್ದು ಯಾವಾಗಲೂ ಹೃದಯದಲ್ಲಿ ಸಂಭವಿಸುತ್ತದೆ. ಆದ್ದರಿಂದ ನೆನಪಿರಲಿ, ನಾನು ಯಾವಾಗ ಜಾಗೃತಿಯ ಬಗ್ಗೆ  ಮಾತನಾಡುತ್ತೇನೆಯೋ ಅದು ಹೃದಯದ ಜಾಗೃತಿ. ಇದು ಸಿದ್ಧಾಂತದ ಮೂಲಕ ತಿಳಿದುಕೊಳ್ಳುವ ಸಂಗತಿಯಲ್ಲ, ಇದನ್ನು ಖುದ್ದಾಗಿ ಅನುಭವಿಸಬೇಕು, ಇದು ನಿಮ್ಮ ಅಸ್ತಿತ್ವದ ಸ್ಥಿತಿಯಾಗಬೇಕು.

ತನ್ನ ನೂರು ವರ್ಷದ ತಂದೆಯನ್ನ ನರ್ಸಿಂಗ್ ಹೋಂ ಗೆ ಕರೆದುಕೊಂಡು ಬಂದಿದ್ದ ಎಪ್ಪತೈದು ವರ್ಷ ವಯಸ್ಸಿನ ನಸ್ರುದ್ದೀನ್.

“ ಡಾಕ್ಟರ್, ನನ್ನ ಅಪ್ಪ ಯಾಕೋ ಇತ್ತೀಚಿಗೆ ಹುಚ್ಚುಚ್ಚಾಗಿ ಆಡುತ್ತಾನೆ. ಕಳೆದ ಹದೈನೈದು ದಿನಗಳಿಂದ ಬಾತ್ ಟಬ್ ನಲ್ಲಿ ರಬ್ಬರ್ ಡೋನಾಲ್ಡ್ ಡಕ್ ಜೊತೆ ಆಟ ಆಡುತ್ತ ಕೂತು ಬಿಡುತ್ತಿದ್ದಾನೆ. ದಯವಿಟ್ಟು ಇವನನ್ನು ನಿಮ್ಮ ಆಸ್ಪತ್ರೆಗೆ ಸೇರಿಸಿಕೊಳ್ಳಿ “

“ಬಹುಶಃ, ಇದು ವಯೋಸಹಜ ನೆನಪಿನ ಸಮಸ್ಯೆ. ಅವನ ವರ್ತನೆಯಿಂದ ಯಾರಿಗೂ ತೊಂದರೆ ಇಲ್ಲ ತಾನೆ? ಮನೆಯಲ್ಲಿಯೇ ಆರೈಕೆ ಮಾಡು “

ಮನೋವೈದ್ಯರು ನಸ್ರುದ್ದೀನ್ ಗೆ ತಿಳಿಹೇಳಿದರು.

“ಆದರೆ, ಅದು ನನ್ನ ಡೋನಾಲ್ಡ್ ಡಕ್ “

ನಸ್ರುದ್ದೀನ್ ನಿಧಾನಕ್ಕೆ ತನ್ನ ಸಮಸ್ಯೆ ಹೇಳಿಕೊಂಡ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.