ಉರ್ದು ಬರಹಗಾರ್ತಿ ಇಸ್ಮತ್ ಚುಗ್ತಾಯಿ, ಮಹಿಳಾ ಸಾಹಿತ್ಯ ಸೇರಿದಂತೆ ಇತ್ತು ಭಾರತೀಯ ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದವರು. ಸಂದರ್ಶನವೊಂದರಲ್ಲಿ ಇಸ್ಮತ್ ತಮ್ಮ ದೀಪಾವಳಿ ನೆನಪು ಹಂಚಿಕೊಂಡಿದ್ದು ಹೀಗೆ… | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಪತ್ರಕರ್ತೆ: ನೀವು ದೀಪಾವಳಿ ಆಚರಿಸುತ್ತೀರಾ?
ಇಸ್ಮತ್ ಚುಗ್ತಾಯಿ: ನನಗೆ ದೀಪಾವಳಿ ಬಹಳ ಇಷ್ಟ. ಅದರಲ್ಲೂ ಪಟಾಕಿ ಅಂದ್ರೆ ಪ್ರಾಣ. ಅಪ್ಪ ಅಮ್ಮನ್ನ ಪಟಾಕಿಗಾಗಿ ಪೀಡಿಸುತ್ತಿದ್ದೆ. ನಮಗೆ ದೀಪಾವಳಿ ಯಾಕೆ ಅಂತ ಅಮ್ಮ ಕೇಳಿದಾಗ, ಅವತ್ತು ಲಕ್ಷ್ಮಿ ಮನೆಗೆ ಬರ್ತಾಳೆ ಅಂತ ನನ್ನ ಉತ್ತರ.
“ಮುಸಲ್ಮಾನರ ಮನೆಗೂ ಲಕ್ಷ್ಮಿ ಬರ್ತಾಳ?” ಅಮ್ಮ ಮತ್ತೆ ಪ್ರಶ್ನೆ ಮಾಡಿದಳು. ಪಾಪ ಲಕ್ಷ್ಮಿಗೇನು ಗೊತ್ತಾಗುತ್ತದೆ ಯಾವದು ಹಿಂದೂ ಮನೆ ಯಾವುದು ಮುಸಲ್ಮಾನರ ಮನೆ ಅಂತ? ಯಾರ ಮನೆಯಲ್ಲಿ ದೀಪ, ಬೆಳಕು ಇರುತ್ತದೆಯೋ ಲಕ್ಷ್ಮಿ ಅವರ ಮನೆಗೆ ಬರ್ತಾಳೆ, ನಾನು ಉತ್ತರಿಸಿದೆ. ನನ್ನ ಉತ್ತರ ಕೇಳಿ ಅಪ್ಪ ನಕ್ಕು ಬಿಟ್ಟರು!

