ಯಾವಾಗಲೂ ನಿಮ್ಮ ನೆನಪಿನಲ್ಲಿರಲಿ, ನೀವು ಕ್ಷಣಿಕ ಅಲ್ಲ, ಶಾಶ್ವತರು, ನೀವು ಬದಲಾಗುವವರು ಅಲ್ಲ ಬದಲಾಗದೇ ಇರುವವರು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ತಾವೋ ಶಾಶ್ವತ, ಅನಂತ.
ಯಾಕೆ ಶಾಶ್ವತ ?
ಅದು ಹುಟ್ಟೇ ಇಲ್ಲ ಎಂದಮೇಲೆ
ಸಾಯುವ ಮಾತೆಲ್ಲಿಂದ ಬಂತು.
ಯಾಕೆ ಅನಂತ ?
ಸ್ವಂತದ್ದು ಏನೂ ಇಲ್ಲ ಎಂದಮೇಲೆ
ಎಲ್ಲಕ್ಕೂ ಒದಗಬಲ್ಲದು ಎಂದೇ ಅರ್ಥ.
ಸಂತ ಹಿಂದಿದ್ದಾನೆ
ಹಾಗೆಂದೇ ತಾವೋ ಮುಂದಿದೆ.
ಯಾವುದಕ್ಕೂ ಅಂಟಿಕೊಂಡಿಲ್ಲ ಎಂದೇ
ತಾವೋ ಎಲ್ಲದರಲ್ಲೂ ಒಂದಾಗಿದೆ.
ತನ್ನಿಂದ ತನ್ನನ್ನು ಕಳೆದುಕೊಂಡಿದ್ದರಿಂದಲೇ
ಪರಿಪೂರ್ಣವಾಗಿ ಮೈದುಂಬಿಕೊಂಡಿದೆ ತಾವೋ.
~ ಲಾವೋತ್ಸೇ
ಹೂವಿನಲ್ಲಿ ಎರಡು ಭಾಗಗಳಿವೆ : ಒಂದು ನಿರಂತರವಾಗಿ ಬದಲಾಗುತ್ತಿರುವುದು – ದೈಹಿಕ ಭಾಗ, ರೂಹು – ಮತ್ತು ಇನ್ನೊಂದು ಈ ರೂಹಿನ ಹಿಂದಿನ ಭಾಗ, formless, ಮತ್ತು ಇದು ಶಾಶ್ವತ. ಹೂವುಗಳು ಬಂದು ಹೋಗುತ್ತವೆ ಆದರೆ ಅವುಗಳ ಚೆಲುವು ಮಾತ್ರ ಶಾಶ್ವತ. ಕೆಲವೊಮ್ಮೆ ಇದು ರೂಪದ ಮೂಲಕ ಅಭಿವ್ಯಕ್ತವಾದರೆ ಒಮ್ಮೊಮ್ಮೆ ಇದು formless ಲ್ಲಿ ಕರಗಿ ಹೋಗುತ್ತದೆ. ಮತ್ತೆ ಹೂವುಗಳು ಹುಟ್ಟುತ್ತವೆ, ಮತ್ತು ಚೆಲುವು ತನ್ನನ್ನು ತಾನು ಪ್ರತಿಪಾದಿಸುತ್ತದೆ. ನಂತರ ಹೂವುಗಳು ಬಾಡಿ ಹೋದಾಗ ಚೆಲವು ಅಭಿವ್ಯಕ್ತಗೊಳ್ಳದ ಸ್ಥಿತಿಗೆ ಮರಳುತ್ತದೆ.
ಮನುಷ್ಯರ, ಹಕ್ಕಿಗಳ, ಪ್ರಾಣಿಗಳ ಮತ್ತು ಎಲ್ಲದರ ಜೊತೆಗೂ ಹೀಗೇ ಆಗುತ್ತದೆ. ನಮಗೆ ಎರಡು ಆಯಾಮಗಳಿವೆ : ಒಂದು, ದಿನದ ಭಾಗ ಮತ್ತು ಈ ಭಾಗದಲ್ಲಿ ನಾವು ಅಭಿವ್ಯಕ್ತಗೊಳ್ಳುತ್ತೇವೆ. ಮತ್ತು ಇನ್ನೊಂದು ರಾತ್ರಿಯ ಭಾಗ, ಇಲ್ಲಿ ನಾವು ಅಭಿವ್ಯಕ್ತಗೊಳ್ಳುವುದಿಲ್ಲ – ಆದರೆ ನಾವು ಶಾಶ್ವತ. ನಾವು ಹಿಂದೆಯೂ ಶಾಶ್ವತವಾಗಿದ್ದೆವು ಮತ್ತು ಮುಂದೆಯೂ ಯಾವಾಗಲೂ ಶಾಶ್ವತವಾಗಿರಲಿದ್ದೇವೆ. ನಮ್ಮ ಇರುವಿಕೆ, ಕಾಲ ಮತ್ತು ಬದಲಾಗುವಿಕೆಯನ್ನು ಮೀರಿದ್ದು.
ಶುರುವಾತಿನಲ್ಲಿ ಇಷ್ಟು ಮಾತ್ರ ನೆನಪಿಟ್ಟುಕೊಳ್ಳಿ”as if“ :
ಮುಂದೆ ನೀವು ಇದರ ವಾಸ್ತವವನ್ನು ಫೀಲ್ ಮಾಡಿಕೊಳ್ಳಲು ಶುರು ಮಾಡುವಿರಿ.
********************************

