ಪೂರ್ವ ದೇಶಗಳವರ ಪುನರ್ಜನ್ಮದ ಪರಿಕಲ್ಪನೆ ಸುಂದರವಾದದ್ದು. ಇದು ನಿಜವೋ ಸುಳ್ಳೋ ಅದು ಮುಖ್ಯವಲ್ಲ. ಇದು ಬದುಕಿನ ಕುರಿತಾದ ಒಂದು ರಿಲ್ಯಾಕ್ಸ್ಡ್ ದೃಷ್ಟಿಕೋನವನ್ನು ದಯಪಾಲಿಸುತ್ತದೆ. ಇದು ಬಹಳ ಮುಖ್ಯ ~ ಓಶೋ ರಜನೀಶ್ ; ಕನ್ನಡಕ್ಕೆ : ಚಿದಂಬರ ನರೇಂದ್ರ
ನಾನು ಸತ್ತ ದಿನ
ನನ್ನ ಹೆಣವನ್ನು ಸ್ಮಶಾನಕ್ಕೆ
ಹೊತ್ತುಕೊಂಡು ಹೋಗುವಾಗ
ಕಣ್ಣೀರು ಹಾಕಬೇಡಿ.
ನಮ್ಮನ್ನೆಲ್ಲ ಬಿಟ್ಟುಹೋದ
ಎಂದು ದುಃಖಿಸಬೇಡಿ.
ಬಿಟ್ಟುಹೋಗುವುದಕ್ಕೂ
ಸಾವಿಗೂ
ಯಾವುದೇ ಸಂಬಂಧವಿಲ್ಲ.
ಸಂಜೆ ಸೂರ್ಯ ಮುಳುಗುತ್ತಾನೆ
ಬೆಳೆಗಾಗುತ್ತಲೇ ಚಂದ್ರ ಮರೆಯಾಗುತ್ತಾನೆ
ಎಂದರೆ
ಅವರು ನಮ್ಮನ್ನಗಲಿದರು
ಎಂದು ಅರ್ಥವೆ?
ಸಾವು ಎಂದರೆ ಮಿಲನ.
ಗೋರಿ, ಸೆರೆಮನೆಯಂತೆ
ಹೊಸ ಹುಟ್ಟಿನ ಜಾಗ.
ಬಾವಿಯಲ್ಲಿ ಕೊಡ ಮುಳುಗಿದಂತೆ
ದೇಹ, ಮಣ್ಣಿನಲ್ಲಿ ನಾಟಿಯಾಗುತ್ತದೆ.
ಒಳಗೆ ಹೋದದ್ದೆಲ್ಲ
ಹೊಸ ಚೆಲುವಿನೊಂದಿಗೆ ಹೊರ ಬರುತ್ತದೆ.
ನಿನ್ನ ಬಾಯಿ
ಇಲ್ಲಿ ಮುಚ್ಚುತ್ತಿದ್ದಂತೆಯೇ
ಅಲ್ಲಿ ಚೀರುತ್ತದೆ ಹೊಸ
ಖುಶಿಯಿಂದ.
~ ರೂಮಿ
ಪಾಶ್ಚಿಮಾತ್ಯರದು ಬಹಳ ಅವಸರದ ಬದುಕು ಏಕೆಂದರೆ ಅವರ ಕ್ರಿಶ್ಚಿಯನ್ ಪರುಕಲ್ಪನೆಯ ಪ್ರಕಾರ ಇರುವುದು ಒಂದೇ ಜನ್ಮ, ಮತ್ತು ಸಾವಿನೊಂದಿಗೆ ಎಲ್ಲವೂ ಕೊನೆಯಾಗುತ್ತದೆ, ಹಾಗು ಮತ್ತೇ ನೀವು ವಾಪಸ್ ಬರುವುದು ಸಾಧ್ಯವಿಲ್ಲ. ಇದು ಜನಗಳ ಮೈಂಡ್ ನಲ್ಲಿ ತುಂಬ ಹುಚ್ಚು ಐಡಿಯಾಗಳನ್ನು ತುಂಬಿದೆ. ಆದ್ದರಿಂದ ಎಲ್ಲರೂ ಅವಸರದಲ್ಲಿದ್ದಾರೆ, ಜೋರಾಗಿ ಓಡುತ್ತಿದ್ದಾರೆ.
ತಾವು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವುದರ ಕುರಿತು ಯಾರಿಗೂ ಚಿಂತೆಯಿಲ್ಲ; ಅವರು ಕೇವಲ ಅವಸರದ ಬಗ್ಗೆ ಯೋಚಿಸುತ್ತಿದ್ದಾರೆ. ಆದ್ದರಿಂದ ಯಾರೂ ಏನನ್ನೂ ಆನಂದಿಸುತ್ತಿಲ್ಲ, ಏಕೆಂದರೆ ಇಂಥ ವೇಗದಲ್ಲಿ ಹೇಗೆ ಆನಂದ ಸಾಧ್ಯ? ಇಡೀ ಬದುಕು hit & run ಸಂಗತಿಯಾಗಿದೆ.
ಯಾವುದನ್ನಾದರೂ ಆನಂದಿಸಬೇಕಾದರೆ ನಾವು ರಿಲ್ಯಾಕ್ಸ್ಡ್ ದೃಷ್ಟಿಕೋನವನ್ನು ಹೊಂದಿರಬೇಕಾಗುತ್ತದೆ. ಬದುಕನ್ನು ಆನಂದಿಸಬೇಕಾದರೆ ಶಾಶ್ವತತೆಯ ಬಗ್ಗೆ ನಂಬಿಕೆ ಇರಬೇಕಾಗುತ್ತದೆ. ಸಾವು ಹತ್ತಿರದಲ್ಲಿದೆ ಎನ್ವುವುದನ್ನು ಒಪ್ಪುವಿರಾದರೆ ಬದುಕನ್ನು ಆನಂದಿಸುವುದು ಹೇಗೆ ಸಾಧ್ಯ? ಜನ ಎಷ್ಟು ಸಾಧ್ಯವೋ ಅಷ್ಟು ಎಂಜಾಯ್ ಮಾಡಲು ಪ್ರಯತ್ನಿಸುತ್ತಾರಾದರೂ ಈ ಪ್ರಯತ್ನದಲ್ಲಿ ಅವರು ತಮ್ಮೊಳಗಿನ ಶಾಂತಿಯನ್ನು ಕಳೆದುಕೊಂಡುಬಿಡುತ್ತಾರೆ, ಮತ್ತು ಶಾಂತಿಯಿಲ್ಲದಾಗ ಯಾವ ಆನಂದವೂ ಇರುವುದಿಲ್ಲ. ಸಂಗತಿಗಳನ್ನು ನಿಧಾನವಾಗಿ ಆಸ್ವಾದಿಸುತ್ತಿರುವಾಗ ಮಾತ್ರ ಖುಶಿ ಸಾಧ್ಯ . ವ್ಯರ್ಥ ಮಾಡಲಿಕ್ಕೆ ಸಾಕಷ್ಟು ಸಮಯ ಇರುವಾಗ ಮಾತ್ರ ಖುಶಿ ಸಾಧ್ಯ.
ಪೌರ್ವಾತ್ಯರ ಪುನರ್ಜನ್ಮದ ಪರಿಕಲ್ಪನೆ ಸುಂದರವಾದದ್ದು. ಇದು ನಿಜವೋ ಸುಳ್ಳೋ ಅದು ಮುಖ್ಯವಲ್ಲ. ಇದು ಬದುಕಿನ ಕುರಿತಾದ ಒಂದು ರಿಲ್ಯಾಕ್ಸ್ಡ ದೃಷ್ಟಿಕೋನವನ್ನು ದಯಪಾಲಿಸುತ್ತದೆ. ಇದು ಬಹಳ ಮುಖ್ಯ. ತಾತ್ವಿಕತೆಯ ( metaphysics) ಬಗ್ಗೆ ನನಗೆ ಚಿಂತೆ ಇಲ್ಲ, ಅದು ನಿಜ ಇರಬಹುದು ಅಥವಾ ಸುಳ್ಳಾಗಿರಬಹುದು, ಅದು ಪಾಯಿಂಟ್ ಅಲ್ಲ. ಅದು ನನಗೆ ಅಪ್ರಸ್ತುತ, ಆದರೆ ಇದು ಬದುಕಿಗೆ ಸುಂದರವಾದ ಹಿನ್ನೆಲೆಯನ್ನಂತೂ ಒದಗಿಸುತ್ತದೆ.

