ಸಮರ್ಪಣಾ ಭಾವದಿಂದ ಬದುಕಿದಾಗ ಮಾತ್ರ ಬದುಕಿಗೊಂದು ಅರ್ಥ. ಸಮರ್ಪಣಾ ಭಾವ ಹೆಚ್ಚಿದಂತೆಲ್ಲ ಬದುಕಿನ ಅರ್ಥವೂ ಹೆಚ್ಚಾಗುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಜವಾದ ನಂಬಿಕೆ
ಅಂತರಂಗಕ್ಕೆ ಸಂಬಂಧಿಸಿದ್ದು.
ಕಳಚಿಕೊಂಡುಬಿಡುತ್ತವೆ
ಬಾಕಿ ಎಲ್ಲ .
ಯಾವ ಶುದ್ಧ ನೀರಿನಿಂದಲೂ ಸ್ವಚ್ಛವಾಗದ
ಒಂದೇ ಒಂದು ಕೊಳಕು ಕೊಳೆಯೆಂದರೆ
ನಮ್ಮ ಆತ್ಮವನ್ನು ಕಲುಷಿತಗೊಳಿಸುತ್ತಿರುವ
ದ್ವೇಷ ಮತ್ತು ಧರ್ಮಾಂಧತೆ.
ನಿಮ್ಮ ದೇಹವನ್ನು
ಉಪವಾಸ ಮತ್ತು ಕಾಮನೆಗಳ ಹತೋಟಿಯಿಂದ
ಸ್ವಚ್ಛವಾಗಿರಿಸಿಕೊಳ್ಳಬಹುದು
ಆದರೆ
ಹೃದಯವನ್ನು ಶುದ್ಧವಾಗಿಡಬಲ್ಲದ್ದು
ಪ್ರೇಮ ಮಾತ್ರ.
~ ಶಮ್ಸ್
ತಮ್ಮ ಮಾತೃಭೂಮಿಗೆ, ದೇಶಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಜನರಿದ್ದಾರೆ. ಆದರೆ ಈ ದೇಶ ಎನ್ನುವುದು ಸಮರ್ಪಿಸಿಕೊಳ್ಳಲು ಬಹಳ ತುಚ್ಛ ಸಂಗತಿ ಮತ್ತು ಅಡಾಲ್ಫ್ ಹಿಟ್ಲರ್ ನಂಥವರು ಇಂಥ ಸಮರ್ಪಣೆಯನ್ನು ದುರುಪಯೋಗ ಮಾಡಿಕೊಳ್ಳಬಲ್ಲರು.
ಮತ್ತು ಕ್ರಿಶ್ಚಿಯಾನಿಟಿಗೆ, ಹಿಂದೂ ಧರ್ಮಕ್ಕೆ, ಇಸ್ಲಾಂ ಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಕೆಲವು ಜನರಿದ್ದಾರೆ, ದೇಶಕ್ಕಿಂತ ಇದು ಕೊಂಚ ಒಳ್ಳೆಯದಾದರೂ ಇದು ಈಗಲೂ ಅಂಧಾಭಿಮಾನ, ಮೂಢನಂಬಿಕೆ , ಮನುಷ್ಯ ನಿರ್ಮಿತ ಸಂಗತಿ, ಮತ್ತು ಇದು ಮಾನವತೆಯನ್ನು ವಿಭಜಿಸುವಂಥದು. ಒಬ್ಬರು ಕ್ರಿಶ್ಚಿಯನ್ ಆದರೆ, ಇನ್ನೊಬ್ಬರು ಹಿಂದೂ ಆಗುತ್ತಾರೆ ಮತ್ತು ಆಗ ಇಲ್ಲೊಂದು ವಿಭಜನೆ ಸೃಷ್ಟಿಯಾಗುತ್ತದೆ, ಹಿಂಸೆ- ಬಿಕ್ಕಟ್ಚು ಹುಟ್ಟಿಕೊಳ್ಳುತ್ತದೆ. ಮತ್ತು ವ್ಯಂಗ್ಯ ಎಂದರೆ ಇಲ್ಲಿ ಹಿಂಸೆಯ ಹೆಸರು ಪ್ರೇಮ!
ಆದ್ದರಿಂದ ನಮ್ಮನ್ನು ವಿಭಜಿಸುವ ಯಾವ ಸಂಗತಿಗೂ ಸಮರ್ಪಿಸಿಕೊಳ್ಳಬೇಡಿ.
********************************

