ಒಬ್ಬರು ಅಪ್ಪಟ ಮೌನ, ಮತ್ತು ಅಚಲತೆಯನ್ನು ಸಾಧಿಸಿದಾಗ, ಮತ್ತು ಅವರ ಮೈಂಡ್ ನಿಶ್ಚಲವಾಗಿರುವಾಗ, ಅವರಿಗೆ ಪರ್ವತದ ಹಿಮಾಚ್ಛಾದಿತ ಮಹಾ ಶಿಖರದ ಅನುಭವವಾಗುವುದು ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ದೇಶವನ್ನು ಮುನ್ನಡೆಸಲು
ತಕ್ಕಡಿ ಎಷ್ಟು ಮುಖ್ಯವೋ
ತಕ್ಕಡಿ ಹಿಡಿಯುವವನ ಸಂಯಮವೂ
ಅಷ್ಟೇ ಮುಖ್ಯ.
ಯಾರು ಈ ಸಂಯಮಿಗಳು?
ರುಚಿಯ ಬಗ್ಗೆ ತಕರಾರು ಮಾಡದವರು
ಆಕಾಶವನ್ನು ಮೈತುಂಬ ಹೊದ್ದವರು
ಬೆಳಕಿನಂತೆ ಹಬ್ಬಿಕೊಳ್ಳುವವರು
ಪರ್ವತಗಳಂತೆ ನೆಲಕ್ಕೆ ಕಾಲೂರಿ ನಿಂತವರು
ಬದುಕು ಕಟ್ಟಿಕೊಟ್ಟ ಬುತ್ತಿಯನ್ನೆಲ್ಲ
ಕಣ್ಣಿಗೊತ್ತಿಕೊಂಡು ಉಣ್ಣುವವರು.
ಕಣ್ಣಳತೆಯಲ್ಲಿ ಯಾವ ಮೈಲಿಗಲ್ಲೂ ಇಲ್ಲದವರು.
ಅವರು ಯಾವುದನ್ನೂ ಕಟ್ಚಿಹಾಕುವುದಿಲ್ಲ
ಅಂತೆಯೇ ಅವರಿಗೆ
ಯಾವುದೂ ಅಸಾಧ್ಯವಲ್ಲ.
ತಾಯಿ ಮಗುವನ್ನು ಕಾಡುವಂತೆ
ಅವರು ಜನರನ್ನು ಕಾಡುತ್ತಾರೆ.
~ ಲಾವೋತ್ಸೇ
ಪರ್ವತಗಳು ಯಾವಾಗಲೂ ಧ್ಯಾನಿಗಳನ್ನು ಆಕರ್ಷಿಸುತ್ತವೆ. ಪರ್ವತಗಳಲ್ಲಿ ಏನೋ ಒಂದು ಅಪರೂಪ ಇದೆ – ಅಪ್ಪಟ ಮೌನ, ಅಚಲತೆ , ನಿಶ್ಚಲತೆ ಮತ್ತು ಬಹುತೇಕ ಕಾಲಾತೀತತೆ. ಪರ್ವತ ಯಾವತ್ತೂ ಶಾಶ್ವತ ಮತ್ತು ಪರ್ವತ ನೆಲೆಯಾಗಿರುವ ರೀತಿ ಒಂದು ಬಗೆಯ centering ನ ಸೂಚಿಸುತ್ತದೆ. ಇದು ಹೇಗೆಂದರೆ ಪರ್ವತ ತನ್ನ ಕೇಂದ್ರದಲ್ಲಿ ತಾನು ನೆಲೆಯಾಗಿರುವಂತೆ; ಎಲ್ಲವೂ ಆ ಕೇಂದ್ರದ ಒಳಗೆ ನೆಲೆಯಾದಂತೆ. ಅರಳಿ ಮರದ ಕೆಳಗೆ ಕುಳಿತಿರುವ ಬುದ್ಧ, ಪರ್ವತದ ಹಾಗೆ ಕಾಣಿಸುತ್ತಾನೆ. ಮತ್ತು ಈ ಜಗತ್ತಿನಲ್ಲಿ ಮೊದಲ ಬಾರಿಗೆ ತಯಾರಿಸಲಾದ ಬುದ್ಧನ ಮೂರ್ತಿ ಥೇಟ್ ಮಹಾ ಬಂಡೆಯಂತೆ ನಿಶ್ಚಲ, ಕಾಲಾತೀತ, ಸಾವಿಲ್ಲದ, ತನ್ನ ಕೇಂದ್ರದೊಳಗೆ ತಾನು ನೆಲೆಯಾಗಿರುವ ಹಾಗೆ ಇದ್ದದ್ದು ಆಕಸ್ಮಿಕವೇನಲ್ಲ.
ಮೈಂಡ್ ನ ಚಲನೆಗಳು – ಆಲೋಚನೆಗಳು, ಬಯಕೆಗಳು, ಕಲ್ಪನೆಗಳು ಮತ್ತು ನೆನಪುಗಳು, ಈ ಎಲ್ಲವೂ ದುಃಖಕ್ಕೆ ಕಾರಣವಾಗುತ್ತವೆ. ಯಾವಾಗ ಆಲೋಚನೆಗಳ, ಬಯಕೆಗಳ ಚಲನೆ ಇರುವುದಿಲ್ಲವೋ ಆಗ ಮೈಂಡ್ ಮಾಯವಾಗುತ್ತದೆ. ನೀವು ಇದ್ದಿರಿ ಆದರೆ ನಿಮ್ಮೊಳಗೆ ನಿಮ್ಮ ಮೈಂಡ್ ಇಲ್ಲ. No mind ನ ಇಂಥ ಸ್ಥಿತಿ ನಿಮಗೆ ಒಳ ಪರ್ವತದ (inner mountain) ಹೊಳಹುಗಳನ್ನು ನೀಡುವುದು.
ಒಬ್ಬ ಝೆನ್ ವಿದ್ಯಾರ್ಥಿಗೆ ಮಾರ್ಶಲ್ ಆರ್ಟ್ ನ ಹುಚ್ಚು. ಝೆನ್ ಜೊತೆಜೊತೆಗೆ ಯುದ್ಧಕಲೆಯನ್ನೂ ಅಭ್ಯಾಸ ಮಾಡುತ್ತಿದ್ದ.
ಒಮ್ಮೆ ಅವನಿಗೆ ತನ್ನ ಯುದ್ಧಕಲೆಯನ್ನು ಬಳಸಿ ಗುರುವಿನ ಸಾಮರ್ಥ್ಯ ಪರೀಕ್ಷಿಸುವ ಮನಸ್ಸಾಯಿತು.
ಗುರು ವಿಶ್ರಾಂತಿಯಲ್ಲಿದ್ದಾಗ ಅಚಾನಕ್ ಆಗಿ ಈಟಿಯಿಂದ ಗುರುವಿನ ಮೇಲೆ ಆಕ್ರಮಣ ಮಾಡಿದ.
ಗುರು ಕ್ಷಣಾರ್ಧದಲ್ಲಿ ತನ್ನ ಜಪಮಣಿ ಬಳಸಿ ಈಟಿಯ ದಿಕ್ಕನ್ನೇ ಬದಲಾಯಿಸಿದ.
ಶಿಷ್ಯನಿಗೆ ಆಶ್ಚರ್ಯವಾಯಿತು.
ಗುರು ಉತ್ತರಿಸಿದ
“ ಹುಡುಗಾ, ನಿನ್ನ ಯುದ್ಧತಂತ್ರ ಇನ್ನೂ ಪಕ್ವವಾಗಿಲ್ಲ, ಈಟಿಗಿಂತಲೂ ಮೊದಲು ನಿನ್ನ mind move ಆಗಿದ್ದನ್ನ ನಾನು ಕ್ಷಣಾರ್ಧದಲ್ಲಿ
ಗಮನಿಸಿದೆ “
********************************

