ಆಳ ( Depth): ಓಶೋ 365 #Day 325


ಒಂದೇ ಒಂದು ಕ್ಷಣ ಕೂಡ ಶಾಶ್ವತವಾಗಬಲ್ಲದು, ಏಕೆಂದರೆ ಇದು ಉದ್ದದ ( length) ಪ್ರಶ್ನೆ ಅಲ್ಲ, ಆಳದ ಪ್ರಶ್ನೆ. ಇದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ : ಸಮಯದ ಮಾಪನ length ಆದರೆ ಧ್ಯಾನದ ಮಾಪನ ಆಳ (depth) ~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ



ಸಮಯ ನಿಧಾನವಾಗಬೇಕಾದರೆ
ಕ್ಷಣಗಳನ್ನು  ಆನಂದಿಸಿ,
ನಾವು ಇಡೀ ಬದುಕನ್ನು ಬಾಳುವುದು
ಇಂಥ  ಕ್ಷಣಗಳಲ್ಲಿ.

~ Wu Wei

Time is length : ಒಂದು ಕ್ಷಣದ ಹಿಂದೆ ಮತ್ತೊಂದು ಮತ್ತು ಅದರ ಹಿಂದೆ ಇನ್ನೊಂದು….. ಹೀಗೆ ಮುಂದುವರೆವ ಸರಣಿ. ಒಂದು ಇನ್ನೊಂದನ್ನು ಹಿಂಬಾಲಿಸುತ್ತವೆ ಒಂದು ಸಮತಲದ ಮೇಲೆ. ಟಿಕ್ ಟಿಕ್ ಎನ್ನುತ್ತ ಸಮಯ ಮುಂದುವರೆಯುತ್ತದೆ ಆದರೆ ಆ ಸಮತಲ ಇನ್ನೂ ಅಲ್ಲೇ ಇದೆ.

ಆದರೆ ಆಳದ ವಿಷಯದಲ್ಲಿ ನೀವು ಆ ಕ್ಷಣದೊಳಗೆ ಜಾರಿ ಬೀಳುತ್ತೀರಿ, ಅಥವಾ ಇನ್ನೊಂದು ಪದ ಉಪಯೋಗಿಸಬಹುದಾದರೆ, you slip up. ಈ ಎರಡೂ ಒಂದೇ ಆದರೂ ಈಗ ನೀವು horizontal ಪಾತಳಿಯಲ್ಲಿ ಇಲ್ಲ, vertical ಆಗಿದ್ದೀರಿ. ನೀವು ಹೊರಳಿದಾಗ ಥಟ್ಟನೇ ನೀವು linear process ನಿಂದ ಹೊರಗೆ ಬರುತ್ತೀರಿ. ಇದು ಗಾಬರಿಯ ವಿಷಯ, ಏಕೆಂದರೆ ಮೈಂಡ್ ನ ಅಸ್ತಿತ್ವ ಇರೋದು ಕೇವಲ horizontal ಪಾತಳಿಯಲ್ಲಿ. ಆಗ ಮೈಂಡ್ ಭಯಗ್ರಸ್ತವಾಗುತ್ತದೆ, ಎಲ್ಲಿಗೆ ಹೋಗುತ್ತಿರುವೆ ನೀನು? ಎಂದು.

ಇದು ಸಾವಿನ ಹಾಗೆ ಕಾಣುತ್ತದೆ. ಇದು ಹುಚ್ಚುತನದ ಹಾಗೆ ಕಾಣುತ್ತದೆ. ಮೈಂಡ್ ಗೆ ಕೇವಲ ಈ ಎರಡು ವ್ಯಾಖ್ಯಾನಗಳು ಮಾತ್ರ ಸಾಧ್ಯ : ಒಂದು ನೀವು ಹುಚ್ಚರಾಗುವುದು ಮತ್ತು ಇನ್ನೊಂದು ನಿಮ್ಮ ಸಾವು. ಈ ಎರಡು ಸನ್ನಿವೇಶಗಳೂ ಭಯಾನಕವಾದವು, ಮತ್ತು ಒಂದು ರೀತಿಯಲ್ಲಿ ಎರಡೂ ನಿಜ ಕೂಡ. ಮೈಂಡ್ ನ ಪ್ರಕಾರ ನೀವು ಸಾಯುತ್ತಿದ್ದೀರಿ – ಆದ್ದರಿಂದ ನಿಮ್ಮ ವ್ಯಾಖ್ಯಾನ ಸರಿ  – ಮತ್ತು ನೀವು ಸಾಯುತ್ತಿದ್ದೀರಿ ಹಾಗೆಂದರೆ  ನಿಮ್ಮ ಅಹಂ ಸಾಯುತ್ತಿದೆ. ಮತ್ತು ಒಂದು ರೀತಿಯಲ್ಲಿ ನೀವು ಹುಚ್ಚರಾಗುತ್ತಿದ್ದೀರಿ ಕೂಡ, ಏಕೆಂದರೆ ನೀವು ಮೈಂಡ್ ನ ಮೀರಿ ಹೋಗುತ್ತಿದ್ದೀರಿ, ಅದು ಎಲ್ಲ ವಿವೇಕ ತನ್ನದೆಂದು ಹೇಳಿಕೊಳ್ಳುತ್ತದೆ, ಅದರ ಪ್ರಕಾರ ಮೈಂಡ್ ನ ಪರಿಧಿಯಲ್ಲಿರುವುದು ಮಾತ್ರ ಸರಿ, ಮತ್ತು ಮೈಂಡ್ ನ ಆಚೆ ಇರೋದು ಹುಚ್ಚುತನ. ನೀವು ಗಡಿಯನ್ನು ದಾಟುತ್ತಿದ್ದೀರಿ, ಅಪಾಯದ ಗೆರೆಯನ್ನು ದಾಟುತ್ತಿದ್ದೀರಿ. ಮತ್ತು ಯಾರಿಗೆ ಗೊತ್ತು ಒಮ್ಮೆ ನೀವು ಆ ಗೆರೆಯನ್ನು ದಾಟಿದ ಮೇಲೆ ಹಿಂದೆ ಬರುತ್ತೀರೋ ಇಲ್ಲವೋ ಎನ್ನುವುದು.

ಆದರೆ ಯಾವಾಗ ನೀವು horizontal line ನ ಜಾರಿ ಆಚೆ ಹೋಗುತ್ತೀರೋ , ಅಲ್ಲಿ ಶಾಶ್ವತತೆ ಇದೆ; ಆಗ ಸಮಯ ಮಾಯವಾಗುತ್ತದೆ. ಒಂದು ಕ್ಷಣ, ಶಾಶ್ವತಕ್ಕೆ ಸಮವಾಗುತ್ತದೆ, ನಿಂತೇ ಹೋದಂತೆ. ಅಸ್ತಿತ್ವದ ಇಡೀ ಚಲನೆ ನಿಂತು ಹೋಗುತ್ತದೆ ಏಕೆಂದರೆ ಅದರ ಚಲಿಸುವ ಬಯಕೆಯೇ ನಿಂತು ಹೋಗುತ್ತದೆ.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.