No ಎನ್ನುವುದು ಚಿಮ್ಮುತ್ತಿರುವ ಕಾರಂಜಿಯ ಮೇಲೆ ಇಡಲಾಗಿರುವ ಬಂಡೆಯಂತೆ; ಅದು ಚಿಲುಮೆಯನ್ನು ಹತ್ತಿಕ್ಕುತ್ತಿದೆ, ಚಿಮ್ಮುತ್ತಿರುವ ಆ ಚಿಲುಮೆ ಎಂದರೆ ನೀವು. No ಕಾರಣವಾಗಿ ನೀವು ಮುದುಡಿಕೊಳ್ಳುತ್ತೀರಿ, ಪಾರ್ಶ್ವವಾಯುವಿಗೆ ಒಳಗಾಗುತ್ತೀರಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಆವರಿಸಿಕೊಳ್ಳುತ್ತಿರುವ
ಬದಲಾವಣೆಯ ಹೊಸ ಗಾಳಿಯನ್ನು
ತಡೆದು ನಿಲ್ಲಿಸಬಯಸುವ
ನಿಮ್ಮ ಉತ್ಸಾಹವನ್ನ
ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
ಬದಲಾಗಿ ಬದುಕಿಗೆ,
ನಿಮ್ಮ ಮೂಲಕ
ಬಾಳುವ ಅವಕಾಶ ಮಾಡಿಕೊಡಿ.
ಬದಲಾವಣೆ ಎಂದರೆ
ಚಿಮ್ಮಲಾಗಿರುವ ಬದುಕಿನ ನಾಣ್ಯ.
ನಿಮ್ಮ ಬದುಕು
ತಲೆಕೆಳಗಾಗಿ ಬಿಡಬಹುದೆಂದು
ಗಾಬರಿಯಾಗಬೇಡಿ.
ಯಾರಿಗೆ ಗೊತ್ತು,
ಈಗ ನಿಮ್ಮೆಡೆ ಮುಖ ಮಾಡಿರುವ
ಬದುಕಿನ ಭಾಗ
ನೀವು ಬದುಕುತ್ತಿರುವ ಬದುಕಿನ ಭಾಗಕ್ಕಿಂತ
ಅದ್ಭುತವಾಗಿರಬಹುದು.
~ ಶಮ್ಸ್
No ಎನ್ನುವ ಈ ಬಂಡೆಯನ್ನು ಕುಟ್ಟಿತ್ತ ಹೋಗಿ, ಒಂದಲ್ಲ ಒಂದು ದಿನ ಇದು ಬಿರುಕು ಬಿಡುವುದು ಮತ್ತು ಹಾಗೆ ಒಡೆದು ಹೋದಾಗ ನೈಜ Yes ಹುಟ್ಟಿಕೊಳ್ಳುತ್ತದೆ. Yes ಎನ್ನುವ ನಾಟಕ ಮಾಡಿ (pretend) ಅಥವಾ ಈ Yes ಎನ್ನುವುದು ನಿಮ್ಮ ಅಂತರಾಳದಿಂದ ಸಹಜವಾಗಿ ಮೂಡಿ ಬರದಿರುವಾಗಲೂ ಹೇಳಿ ಎಂದು ನಾನು ಹೇಳುತ್ತಿಲ್ಲ. Yes ಸಹಜವಾಗಿರದಿದ್ದಾಗ ಚಿಂತೆ ಮಾಡುವ ಕಾರಣವಿಲ್ಲ, No ಎನ್ನುವ ಬಂಡೆಯನ್ನು ಕುಟ್ಟುತ್ತ ಹೋಗಿ.
No ನ ಸುಲಭವಾಗಿ ಒಪ್ಪಿಕೊಳ್ಳಬೇಡಿ. ಏಕೆಂದರೆ No ನ ಸುತ್ತ ಬದುಕುವುದು ಸಾಧ್ಯವಿಲ್ಲ. ನೀವು No food ನ ತಿನ್ನಲಾರಿರಿ, No water ನ ಕುಡಿಯಲಾರಿರಿ. No ಒಳಗೆ ಬದುಕುವುದು ಯಾರಿಗೂ ಸಾಧ್ಯವಿಲ್ಲ – ಇಲ್ಲಿ ಕೇವಲ ದುಃಖ ಮತ್ತು ಸಂಕಟಗಳು ಮಾತ್ರ ಸಾಧ್ಯ. No ಎನ್ನುವುದು ನರಕ. ಕೇವಲ Yes ಮಾತ್ರ ನಿಮ್ಮನ್ನು ಸ್ವರ್ಗಕ್ಕೆ ಹತ್ತಿರವಾಗಿಸುವುದು. ಮತ್ತು ಯಾವಾಗ ನಿಮ್ಮ ಇರುವಿಕೆಯ ( being) ಕಾರಣವಾಗಿ ನೈಜ Yes ಹುಟ್ಟಿಕೊಳ್ಳುತ್ತದೆಯೋ ಆಗ ಯಾವುದೂ ಹಿಂದೆ ಬೀಳುವುದಿಲ್ಲ. ಆ Yes ನ ಒಳಗೆ ನೀವು ಪೂರ್ಣಗೊಳ್ಳುತ್ತೀರಿ, ಮತ್ತು ನಿಮ್ಮ ಇಡೀ ಎನರ್ಜಿ ಮೇಲಕ್ಕೆ Yes Yes Yes ಎನ್ನುತ್ತ ಚಲಿಸುತ್ತದೆ.
ಆಮೆನ್ ( Amen) ಎನ್ನುವ ಪದದ ಅರ್ಥವೇ ಇದು. ಪ್ರತಿ ಪ್ರಾರ್ಥನೆಯನ್ನು “amen” ನಿಂದ ಮುಕ್ತಾಯಗೊಳಿಸಬೇಕು – ಆಮೆನ್ ಎಂದರೆ yes yes yes. ಆದರೆ ಇದು ನಿಮ್ಮ ಅಂತರಾಳದಿಂದ ( gut) ಮೂಡಿ ಬರಬೇಕು. ಇದು ಮೈಂಡ್ ನ ವ್ಯವಹಾರ ಅಲ್ಲ, ಇದು ಕೇವಲ ಆಲೋಚನೆಗಳ ಭಾಗವಾಗಿರಬಾರದು. ಹೀಗೆ ಹೇಳಿ ಎಂದು ನಾನು ಒತ್ತಾಯ ಮಾಡುತ್ತಿಲ್ಲ ; ಇದು ಹೊರ ಬರುವುದಕ್ಕೆ ದಾರಿ ಮಾಡಿ ಎಂದಷ್ಟೇ ಹೇಳುತ್ತಿದ್ದೇನೆ.

