ಮಾದಕ ಪದಾರ್ಥ (Drugs): ಓಶೋ 365 #Day340

ಮಾದಕ ಪದಾರ್ಥಗಳನ್ನು ಬಳಸದಿರುವುದು ಒಳ್ಳೆಯದು, ಏಕೆಂದರೆ ಕೆಲವೊಮ್ಮೆ ಅವು ಕೆಲ ವಿಶಿಷ್ಟ ಅನುಭವಗಳನ್ನು ನಿಮಗೆ ನೀಡುತ್ತವೆ, ಮತ್ತು ಇದು ಸಮಸ್ಯೆ. ಒಮ್ಮೆ ನಿಮಗೆ ಈ ದಾರಿಯಲ್ಲಿ ಅನುಭವಗಳಾದರೆ, ಆ ಅನುಭವಗಳನ್ನು drugs ನ ಸಹಾಯವಿಲ್ಲದೇ ಸಹಜವಾಗಿ ಪಡೆಯುವುದು ಮುಂದೆ ಸಾಧ್ಯವಾಗುವುದಿಲ್ಲ. ಅನುಭವಗಳು ಮೂಲಭೂತ ಸಂಗತಿಗಳಲ್ಲ ಆದರೆ ಅವುಗಳ ಮೂಲಕ ಬೆಳವಣಿಗೆ ಸಾಧಿಸುವುದು ಬಹಳ ಮಹತ್ವಪೂರ್ಣ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ಇಡೀ ರಾತ್ರಿ
ತೆಂಗಿನ ಗರಿಗಳ ನೆರಳು
ಮೆಟ್ಚಿಲುಗಳನ್ನು ಗುಡಿಸುತ್ತಿತ್ತು.

ಒಂದು ಕಣ ಧೂಳೂ ಕದಲಲಿಲ್ಲ

ಇಡೀ ರಾತ್ರಿ
ಚಂದ್ರನ ಕಿರಣಗಳು
ಸರೋವರವನ್ನು ಇರಿಯುತ್ತಿದ್ದವು

ಒಂದು ಹನಿ ಕಾಂತಿಯೂ ಉಳಿಯಲಿಲ್ಲ.

ಡ್ರಗ್ಸ್ ನ ಮೂಲಕ ನಿಮಗೆ ಕೆಲವು ಅನುಭವಗಳಾದಬಹುದು ಆದರೆ ಅವು ನಿಮ್ಮ ಬೆಳವಣಿಗೆಗೆ ಕಾರಣವಾಗುವುದಿಲ್ಲ. ಆ ಅನುಭವಗಳು ನಿಮ್ಮ ಬಳಿ ಬಂದಿವೆಯೇ ಹೊರತು ನೀವು ಆ ಅನುಭವಗಳ ಬಳಿ ಹೋಗಿಲ್ಲ. ಇದು ನಿಮ್ಮ ಕಣ್ಣ ಅಳತೆಯಲ್ಲಿ ಹಿಮಾಲಯವನ್ನು ನೋಡಿದ ಹಾಗೆ, ಸುಂದರ ಹೌದು ಆದರೆ ಇದು ನಿಮ್ಮ ನೋಟವನ್ನು ಮೀರಿ ಅಲ್ಲ. ನೀವು ಇನ್ನೂ ಹಾಗೆಯೇ ಇರುವಿರಿ, ನಿಮ್ಮ ನೋಟ ನಿಮ್ಮ ವಾಸ್ತವವಾದರೆ , ನೀವು ಏನನ್ನೋ ಕಳೆದುಕೊಳ್ಳುತ್ತಿದ್ದೀರಿ, ಏಕೆಂದರೆ ನೀವು ಈಗ ಅದಕ್ಕೆ ಅಡಿಕ್ಟ್ ಆಗಿದ್ದೀರಿ. ಇಲ್ಲ, ನೀವು ಹಿಮಾಲಯಕ್ಕೆ ಹೋಗುವುದು ಒಳ್ಳೆಯದು . ಇದು ಕಠಿಣ, ಇದು ದೂರದ ಪ್ರಯಾಣ. ಡ್ರಗ್ಸ್ ಈ ಪ್ರಯಾಣವನ್ನು ಕಿರಿದಾಗಿಸುತ್ತದೆ. ಅವು ಬಹುತೇಕ ಹಿಂಸಾತ್ಮಕ; ಅವು ನಿಮಗೆ premature ನ ಸಾಧ್ಯಮಾಡುತ್ತವೆ. ದೂರ ಪ್ರಯಾಣವಾದರೂ ಸರಿ ಅದು ನಿಮಗೆ ಒಳ್ಳೆಯದು , ಏಕೆಂದರೆ ಸಂಘರ್ಷದ ಮೂಲಕವೇ ಬೆಳವಣಿಗೆ ಸಾಧ್ಯ. ಆಗ ನಿಮ್ಮೊಳಗೊಂದು ಐಕ್ಯತೆ ಸಾಧ್ಯವಾಗುತ್ತದೆ, ಮತ್ತು ನೀವು ಹರಳುಗಟ್ಟುತ್ತೀರಿ. ಇದು ನಿಜವಾದದ್ದು – ಅನುಭವ ಎಲ್ಲ ಅಪ್ರಸ್ತುತ. ಬೆಳವಣಿಗೆ ನಿಜವಾದ ಸಂಗತಿ. ಯಾವತ್ತೂ ನಿಮಗೆ ನೆನಪಿರಲಿ, ನನ್ನ ಒತ್ತು ಯಾವತ್ತೂ ಬೆಳವಣಿಗೆಯ ಮೇಲೆಯೇ ಹೊರತು ಅನುಭವದ ಮೇಲೆ ಅಲ್ಲ. ಮೈಂಡ್ ಯಾವತ್ತೂ ಹೊಸ ಹೊಸ ಅನುಭವಗಳಿಗಾಗಿ ಹಾತೊರೆಯುತ್ತಿರುತ್ತದೆ; ಅದಕ್ಕೆ ಅನುಭವದ ಮೇಲೆ ವ್ಯಾಮೋಹ – ಮತ್ತು ನಾವು ಮೈಂಡ್ ನ ದಾಟಿ ಮುಂದೆ ಹೋಗಬೇಕು.

ಆದ್ದರಿಂದ ನೈಜ ಅಧ್ಯಾತ್ಮಿಕ ಆಯಾಮ, ಅನುಭವದ ಆಯಾಮವಲ್ಲ. ಹಾಗೆ ನೋಡಿದರೆ ಅನುಭವಕ್ಕೆ ಯಾವ ಆಯಾಮವೂ ಇಲ್ಲ. ಕೇವಲ ನೀವು – ನೀವೂ ಅಲ್ಲ, ಯಾವ ಮಿತಿಗಳಿಲ್ಲದ, ಯಾವ ಗುರಿ ಇಲ್ಲದ, ಶುದ್ಧ ಇರುವಿಕೆ, ಕೇವಲ ಪೂರ್ಣ ಪ್ರಜ್ಞೆ. ನೀವು ಅನುಭವಿಸುವ ಸಂಗತಿಗಳು ಸುಂದರವಲ್ಲ, ನೀವು ಸುಂದರ ಮತ್ತು ನಿಮ್ಮ ಸುತ್ತ ತುಂಬಿಕೊಂಡಿದೆ ಅಪಾರ ಖಾಲೀತನ.

ಝೆನ್ ಮಾಸ್ಟರ್ ಸಾವಿನ ಹಾಸಿಗೆಯಲ್ಲಿದ್ದ.
ಅವನ ಪ್ರೀತಿ ಪಾತ್ರ ಮತ್ತು ಅವನ ವಾರಸುದಾರ ಶಿಷ್ಯ, ಪ್ರಶ್ನೆ ಮಾಡಿದ.

ಮಾಸ್ಟರ್, ಇನ್ನೂ ಏನಾದರೂ ನಮಗೆ ಕಲಿಸುವುದು ಉಳಿದಿದೆಯೆ? ಹಾಗೇನಾದರೂ ಉಳಿದಿದ್ದರೆ ಸಾವಿಗೂ ಮುಂಚೆ ಆದಷ್ಟು ಬೇಗ ಹೇಳಿಕೊಡಿ.

ಮಾಸ್ಟರ್, ಒಂದು ಕ್ಷಣ ಧ್ಯಾನ ಮಗ್ನನಾಗಿ ಚಿಂತಿಸಿ ಮಾತನಾಡಿದ.

ನಿನ್ನ ಒಳನೋಟ ಅದ್ಭುತ, ನಿನ್ನ ಕಲಿಕೆ ಮತ್ತು ತರಬೇತಿ ಪರಿಪೂರ್ಣ, ಆದರೂ………

ಹೇಳಿ ಮಾಸ್ಟರ್, ಅದೇನಿದ್ದರೂ ನಾನು ಪರಿಹರಿಸಿಕೊಳ್ಳುವೆ.

ಏನಿಲ್ಲ, ನಿನ್ನ ಮೈ ಝೆನ್ ನಿಂದ ನಾರುತ್ತಿದೆ.


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.