ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನಾನು ನಿಮಗೆ ಹುಚ್ಚರಾಗುವ ಬಹಳ ಸುಲಭ ಮತ್ತು ಬಹಳ ಹತ್ತಿರದ ದಾರಿಯೊಂದನ್ನ ಹೇಳಿಕೊಡುತ್ತೇನೆ. ಇದು ಅತ್ಯಂತ fool proof ದಾರಿ,
“ನೀವು ನಿಮ್ಮ ಬಗ್ಗೆ ಯೋಚನೆ ಮಾಡಲು ಶುರು ಮಾಡಿ”
ನಾನು ಏನು ಮಾಡುತ್ತಿದ್ದೇನೆಂದರೆ……
ನಾನು ಏನು ಹೇಳುತ್ತೇನೆಂದರೆ…..
ನನ್ನದು ವಿಚಿತ್ರ ಚಟ……
ನಾನು ಬೆಳಿಗ್ಗೆ ಮೊದಲು ಮುಖ ತೊಳೆದುಕೊಂಡು ಆಮೇಲೆ ಹಲ್ಲುಜ್ಜುತ್ತೇನೆ……
ನನ್ನ ಪ್ರಕಾರ…..
ನಾನು ಮೊದಲು ಹೀಗಿರಲಿಲ್ಲ….
ಯಾಕೆ ಹೀಗೆ? ಇದೆಲ್ಲ ಹುಚ್ಚುತನದ ಗುರುತು.
ಮೊದಲು ಜನರಲ್ಲಿ ಆಸಕ್ತಿ ಬೆಳೆಸಿಕೊಳ್ಳಿ. ಕೆಲಸದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ. ನಿಮ್ಮ ಸುತ್ತಲಿನ ಜಗತ್ತಿನಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆ ನಿಮ್ಮ ಆಸಕ್ತಿ ಇರಲಿ. ಜನ ಏನು ಬರೆಯುತ್ತಿದ್ದಾರೆ, ಏನು ಹೇಳುತ್ತಿದ್ದಾರೆ ಆ ಬಗ್ಗೆ ನಿಮ್ಮ ಲಕ್ಷ ಇರಲಿ.
ನಮ್ಮ ಬಗ್ಗೆ ನಾವು ಯೋಚಿಸುವುದೆಂದರೆ, ಒಂದು ಈರುಳ್ಳಿ ತೆಗೆದುಕೊಂಡು ಅದರ ಸಿಪ್ಪೆಗಳನ್ನು ಸುಲಿಯುತ್ತ, ಈರುಳ್ಳಿ ಎಲ್ಲಿದೆ ಎಂದು ಹುಡುಕುವುದು.
ಹೀಗೆ ಆಲೋಚನೆಯ ಒಂದು ಮಗ್ಗುಲನ್ನು ವಿವರಿಸುತ್ತಾರೆ, ಕವಿ ಜಾವೇದ್ ಅಖ್ತರ್.
********************************

