ಮನುಷ್ಯ ಮತ್ತು ಬ್ರಹ್ಮಾಂಡ ಒಂದಾಗಿಬಿಡುವ ಪವಾಡ…

ಇದು ಕೆಲವು ಕ್ಷಣಗಳ ಮಟ್ಟಿಗೆ ಮನುಷ್ಯ ಮತ್ತು ಬ್ರಹ್ಮಾಂಡ ಒಂದಾಗಿಬಿಡುವ ಪವಾಡ. ನೇರ cause and effect ಸಂಬಂಧ ಇಲ್ಲದಿರುವಾಗಲೂ ವೈಯಕ್ತಿಕವಾಗಿ ಬಹುಮುಖ್ಯ ಅನಿಸುವಂಥ ಅಸಂಬಂಧಿತ ಸಂಗತಿಗಳು ಒಟ್ಟಿಗೇ ಸಂಭವಿಸುವುದು… | ಚಿದಂಬರ ನರೇಂದ್ರ

ನೀವು ಯಾರ ಬಗ್ಗೆಯೋ ಯೋಚನೆ ಮಾಡುತ್ತಿದ್ದೀರಿ, ಆಗಲೇ ಅಚಾನಕ್ ಆಗಿ ಅವರು ನಿಮಗೆ ಮೆಸೇಜ್ ಮಾಡುತ್ತಾರೆ. ನೀವು ಯಾರ ಬಗ್ಗೆಯೋ ಮಾತನಾಡುತ್ತಿದ್ದೀರಿ ಆಗಲೇ ಅಲ್ಲಿಗೆ ಅವರು ಆಗಮಿಸುತ್ತಾರೆ. ನಾವು ಇದನ್ನ ಕೇವಲ ಕಾಕತಾಳೀಯ ಅಂದುಕೊಂಡು ಬಿಡಬಹುದು ( ಕೆಲವೊಮ್ಮೆ ಹಾಗೆ ಆಗಿರಬಹುದು ಕೂಡ) ಆದರೆ ಜಗತ್ತಿನ ಶ್ರೇಷ್ಠ ಮನಶಾಸ್ತ್ರಜ್ಞ ಕಾರ್ಲ್ ಯೂಂಗ್ ಇದನ್ನ synchronicity ಎಂದು ಕರೆಯುತ್ತಾನೆ. ಹಾಗೆಂದರೆ, ಕೇವಲ ಭ್ರಮೆ ಎನ್ನಬಹುದಾದ ಈ ಕಾಕತಾಳೀಯ, ನಿಜದಲ್ಲಿ ಬ್ರಹ್ಮಾಂಡ ನಮ್ಮ ಜೊತೆ ಮಾತನಾಡಲು ಮಾಡುತ್ತಿರುವ ಪ್ರಯತ್ನವಾಗಿದೆ.

ಇದು ಕೆಲವು ಕ್ಷಣಗಳ ಮಟ್ಟಿಗೆ ಮನುಷ್ಯ ಮತ್ತು ಬ್ರಹ್ಮಾಂಡ ಒಂದಾಗಿಬಿಡುವ ಪವಾಡ. ನೇರ cause and effect ಸಂಬಂಧ ಇಲ್ಲದಿರುವಾಗಲೂ ವೈಯಕ್ತಿಕವಾಗಿ ಬಹುಮುಖ್ಯ ಅನಿಸುವಂಥ ಅಸಂಬಂಧಿತ ಸಂಗತಿಗಳು ಒಟ್ಟಿಗೇ ಸಂಭವಿಸುವುದು. ಈ ಘಟನೆಗಳು ಒಳಗಿನ ಮಾನಸಿಕ ಸ್ಥಿತಿಯನ್ನು ಹೊರಗಿನ ವಾಸ್ತವದೊಂದಿಗೆ ಹೇಗೆ ಒಂದಾಗಿಸುತ್ತವೆ ಎಂದರೆ ಬ್ರಹ್ಮಾಂಡ ನಮಗೆ ಏನೋ ಸೂಚನೆ ಕೊಡುತ್ತಿರುವಂತೆ.

ಕಾರ್ಲ್ ಯೂಂಗ್ ಇದನ್ನ “a-causal connecting principle” ಎಂದು ವ್ಯಾಖ್ಯಾನ ಮಾಡುತ್ತಾನೆ.  ಇದು ಒಳಗಿನ ಮತ್ತು ಹೊರಗಿನ ಸಂಗತಿಗಳ ನಡುವೆ ಅ-ಸಹಜವಾದರೂ ಅರ್ಥಪೂರ್ಣವಾದ ಸಂಪರ್ಕ. 1920 ರಲ್ಲಿ ಕಾರ್ಲ್ ಯೂಂಗ್ ಈ ಪರಿಕಲ್ಪನೆಯನ್ನು ಹುಟ್ಟುಹಾಕಿದನಾದರೂ ಮುಂದೆ ಪ್ರಸಿದ್ಧ ಭೌತಶಾಸ್ತ್ರಜ್ಞ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ Wolfgang Pauli ಯ ಜೊತೆ ಸೇರಿ ಈ ಪರಿಕಲ್ಪನೆಯನ್ನು ಇನ್ನಷ್ಟು ಆಳವಾಗಿ ಅಭಿವೃದ್ಧಿಪಡಿಸಿದ.

ಈ ಪರಿಕಲ್ಪನೆ ಮನುಷ್ಯನ ಅಧ್ಯಾತ್ಮಿಕ ಅಭಿವೃದ್ಧಿಯ ಸಂಕೇತದಂತೆ ತೋರುತ್ತದೆಯಾದರೂ ಇದೊಂದು ಮನಶಾಸ್ತ್ರೀಯ ವಿದ್ಯಮಾನ. ಇಲ್ಲಿ ಮನಸ್ಸು ಹೆಚ್ಚು ಕನೆಕ್ಟೆಡ್ ಆದ ಅಶಾಸ್ತ್ರೀಯ ಅಥವಾ ಕ್ವಾಂಟಮ್ ವಾಸ್ತವದಲ್ಲಿ ಅಪರೂಪದ ಹೊಳಹುಗಳನ್ನ ಕಂಡುಕೊಳ್ಳುತ್ತದೆ ( where the mind finds patterns or meaning, or in some views, a rare glimpse into a more interconnected, non-classical, or quantum reality)

Synchronicity ಕೇವಲ ಕಾಕತಾಳೀಯದಂತೆ ಶುದ್ಧ random ಅಲ್ಲ, ಇದು ಮನುಷ್ಯನ ಅನುಭವದ ಅರ್ಥಪೂರ್ಣತೆ ಸಂಬಂಧಿಸಿದ್ದು. ಈ ಬ್ರಹ್ಮಾಂಡ ಬೇಕಾಬಿಟ್ಟಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಬದಲಾಗಿ ಇಲ್ಲೊಂದು ಸುಸಂಬದ್ಧತೆ ಇದೆ ಮತ್ತು ಇದು ಕೇವಲ ಕಾಕತಾಳೀಯ ಹಾಗು ಉದ್ದೇಶರಹಿತ ಅಲ್ಲ. ಮುಂದಿನ ಬಾರಿ ನಿಮ್ಮ ಜೊತೆ ಇಂಥದೊಂದು ಘಟನೆ ನಡೆದಾಗ ನಿಮಗೆ ನೆನಪಿರಲಿ ಇದು ಬ್ರಹ್ಮಾಂಡ ತನ್ನ ಭಾಷೆಯಲ್ಲಿ ನಿಮ್ಮ ಜೊತೆ ಏನೋ ಮಾತನಾಡುವ ಪ್ರಯತ್ನ ಮಾಡುತ್ತಿದೆ ಎನ್ನುವುದನ್ನ.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.