ಬಯಕೆ ಶುರುವಾಗೋದು pain ನ ಕಾರಣವಾಗಿ. ಸ್ವಲ್ಪ ಸಮಯದ ನಂತರ ಈ ಎಲ್ಲವೂ ನಿಮಗೆ ನಾರ್ಮಲ್, ಸಾಧಾರಣ, ರೂಟೀನ್ ಅನಿಸ ತೊಡಗುತ್ತದೆ. ಆಗ ಈ ಎಲ್ಲವೂ ನಿಮ್ಮ boredom ನ ಕಾರಣವಾಗುತ್ತವೆ… | ಚಿದಂಬರ ನರೇಂದ್ರ
ಜರ್ಮನ್ ತತ್ವಜ್ಞಾನಿ Arthur Schopenhauer ನ ಪ್ರಕಾರ ಮನುಷ್ಯನ ಬದುಕು ಒಂದು pendulum (ಲೋಲಕ) ನಡುವೆ ಓಲಾಡುತ್ತಿರುತ್ತದೆ. ಪೆಂಡ್ಯುಲಮ್ ನ ಒಂದು ತುದಿಯಲ್ಲಿ pain ಇದ್ದರೆ ಇನ್ನೊಂದು ತುದಿಯಲ್ಲಿ ಇರುತ್ತದೆ boredom. ಮತ್ತು ಈ ಎರಡರ ನಡುವೆ ನಮಗೆ ಸಾಧ್ಯವಾಗುವ ಖುಶಿ, ತಾತ್ಕಾಲಿಕ ಪರಿಹಾರವಾಗಿರುತ್ತದೆ.
ಬಯಕೆ ಶುರುವಾಗೋದು pain ನ ಕಾರಣವಾಗಿ, ಎಲ್ಲಿಯವರೆಗೆ ನಮಗೆ ಏನೂ ದೊರಕುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಮೈಂಡ್ ಅವಿಶ್ರಾಂತವಾಗಿರುತ್ತದೆ. ಉದಾಹರಣೆಗೆ ಪರೀಕ್ಷೆ ಪಾಸ್ ಮಾಡಬೇಕು, ಕೆಲಸ ಬೇಕು, ಹಣ ಬೇಕು, ಯಶಸ್ಸು ಬೇಕು, ರಿಲೇಷನ್ ಶಿಪ್ ಬೇಕು , ಈ ಹಂತದಲ್ಲಿ ನಾವು ಏನನ್ನ ಅನುಭವಿಸುತ್ತೀವಿ? ಒತ್ತಡ, ಆತಂಕ, ಫ್ರಸ್ಟ್ರೇಷನ್, ಹೋಲಿಕೆ, ಮತ್ತು ಈ ಎಲ್ಲವೂ ನೋವುಗಳೇ. ಏಕೆಂದರೆ ಬಯಕೆ ಎನ್ನುವುದರ ಅರ್ಥವೇ ಈಗ ನಮ್ಮ ಬಳಿ ಇರುವುದು ನಮಗೆ ಸಾಕಾಗುತ್ತಿಲ್ಲ ಎನ್ನುವುದು.
ಸ್ವಲ್ಪ ಸಮಯದ ನಂತರ ಇವೆಲ್ಲ ಸಿಕ್ಕಾಗ ನಮಗೆ ಖುಶಿಯಾಗುತ್ತದೆ ಆದರೆ, Schopenhauer ನ ಪ್ರಕಾರ ಇದು ಖುಶಿ ಅಲ್ಲ. ಇದು ನೋವಿಗೆ ಸಿಕ್ಕಿರುವ ತಾತ್ಕಾಲಿಕ ಪರಿಹಾರ. ಸ್ವಲ್ಪ ಸಮಯದ ನಂತರ ಈ ಎಲ್ಲವೂ ನಿಮಗೆ ನಾರ್ಮಲ್, ಸಾಧಾರಣ, ರೂಟೀನ್ ಅನಿಸ ತೊಡಗುತ್ತದೆ. ಆಗ ಈ ಎಲ್ಲವೂ ನಿಮ್ಮ boredom ನ ಕಾರಣವಾಗುತ್ತವೆ. ಮತ್ತು boredom ತಾನೇ ಒಂದು ಬಳಲುವಿಕೆಯಾದ್ದರಿಂದ ಅದು ಮತ್ತೆ ಬಯಕೆಯನ್ನು ಹುಟ್ಟುಹಾಕುತ್ತದೆ. ಮತ್ತೆ ನೀವು ನೋವಿನ ತುದಿಗೆ ಬಂದು ಮುಟ್ಟುತ್ತೀರಿ. ಹೀಗೆಯೇ ನಮ್ಮ ಇಡೀ ಬದುಕು ನೋವು ಮತ್ತು boredom ಗಳ ನಡುವೆ ಓಲಾಡುತ್ತಿರುತ್ತದೆ.

