ನಮ್ಮ ಮೆದುಳು ಯಾವಾಗಲೂ ತಾನು ಸರಿ ಎನಿಸಿಕೊಳ್ಳಲು ಬಯಸುತ್ತದೆ. ಆಗ ಮಾತ್ರ ಅದು ಸುರಕ್ಷತೆಯನ್ನ, ಸಮಾಧಾನವನ್ನ ಅನುಭವಿಸುತ್ತದೆ…. | ಕನ್ನಡಕ್ಕೆ: ಚಿದಂಬರ ನರೇಂದ್ರ
ಸೈಕಾಲಜಿಯಲ್ಲಿ ಒಂದು ಪದ ಇದೆ, confirmation bias. ಯಾವಾಗಲಾದರೂ ನೀವು ಇದನ್ನು ಗಮನಿಸಿದ್ದೀರಾ? ಒಮ್ಮೆ ನೀವು ಒಬ್ಬ ವ್ಯಕ್ತಿಯ ಬಗ್ಗೆ ಅಥವಾ ಒಂದು ಸಂದರ್ಭದ ಬಗ್ಗೆ ಗಟ್ಟಿಯಾಗಿ ಓಪೀನಿಯನ್ ಗೆ ಒಳಗಾಗಿಬಿಟ್ಟಿರೆಂದರೆ, ಆಮೇಲೆ ನಿಮಗೆ ಆ ನಿಮ್ಮ ಓಪೀನಿಯನ್ ನ್ನೇ ಸಮರ್ಥಿಸುವ ಸಂಗತಿಗಳು ಕಾಣತೊಡಗುತ್ತವೆ. ಇದನ್ನೇ confirmation bias ಎನ್ನಲಾಗುತ್ತದೆ.
ನಿಮ್ಮ ಮೆದುಳು ಅನಿಶ್ಚಿತತೆಯನ್ನ ಇಷ್ಟಪಡುವುದಿಲ್ಲ. ಒಮ್ಮೆ ನೀವು ಏನನ್ನಾದರೂ ನಂಬಿಬಿಟ್ಟಿರೆಂದರೆ ನಿಮ್ಮ ಮೆದುಳು ಯಾವಾಗಲೂ ಅದನ್ನು ಪ್ರೊಟೆಕ್ಟ್ ಮಾಡಲು ಪ್ರಯತ್ನ ಮಾಡುತ್ತದೆ. ಸಂಶೋಧನೆಗಳ ಪ್ರಕಾರ ಮನುಷ್ಯ ತಾನು ಒಪ್ಪುವ ಸಂಗತಿಗಳ ಬಗ್ಗೆಯೇ ಹೆಚ್ಚು ಗಮನ ನೀಡುತ್ತಾನೆ. ಮತ್ತು ತಾನು ಒಪ್ಪದ ಸಂಗತಿಗಳನ್ನು ಅವನು ಅಪ್ರಜ್ಞಾಪೂರ್ವಕವಾಗಿಯಾದರೂ ನಿರ್ಲಕ್ಷಿಸಲು ಶುರು ಮಾಡುತ್ತಾನೆ. ಇದು ನಾವು ಹಟಮಾರಿಯಾಗಿರುವ ಕಾರಣಕ್ಕೆ ಅಲ್ಲ, ಬದಲಾಗಿ ನಮ್ಮ ಮೆದುಳು ಯಾವಾಗಲೂ ತಾನು ಸರಿ ಎನಿಸಿಕೊಳ್ಳಲು ಬಯಸುತ್ತದೆ. ಆಗ ಮಾತ್ರ ಅದು ಸುರಕ್ಷತೆಯನ್ನ, ಸಮಾಧಾನವನ್ನ ಅನುಭವಿಸುತ್ತದೆ.
ಈಗ ಒಂದು ಸನ್ನಿವೇಶವನ್ನ ಕಲ್ಪನೆ ಮಾಡಿಕೊಳ್ಳಿ. ನೀವು ಹೊಸದಾಗಿ ಒಂದು ಕಂಪನಿಗೆ ಜಾಯಿನ್ ಆಗಿದ್ದಿರಿ ಮತ್ತು ಮೊದಲ ದಿನವೇ ನಿಮ್ಮ ಮ್ಯಾನೇಜರ್ ನಿಮ್ಮೊಡನೆ ಒರಟಾಗಿ ನಡೆದುಕೊಳ್ಳುತ್ತಾನೆ. ಆಗ ನಿಮ್ಮ ಮೆದುಳು, ಮ್ಯಾನೆಜರ್ = ಒರಟ ಎನ್ನುವ ತೀರ್ಮಾನಕ್ಕೆ ಬಂದು ಬಿಡುತ್ತದೆ. ನಂತರ ಮ್ಯಾನೇಜರ್ ನ ಪ್ರತಿಯಂದು ನ್ಯೂಟ್ರಲ್ ವರ್ತನೆ ಕೂಡ ನಿಮಗೆ ಋಣಾತ್ಮಕವಾಗಿ ಕಾಣತೊಡಗುತ್ತದೆ. ಅವ ಬ್ಯುಸಿ ಆಗಿದ್ದು ನಿಮ್ಮತ್ತ ನೋಡಿ ಸ್ಮೈಲ್ ಮಾಡದಿದ್ದರೆ ಅವನು ಒರಟ, ಅವನು ನಿಮಗೆ ಸರಿಯಾದ ಫೀಡ್ ಬ್ಯಾಕ್ ಕೊಡದಿದ್ದರೆ ಅವನು ಒರಟ, ಅವನು ನಿಮ್ಮನ್ನು ತಿದ್ದಿದರೆ ಅವನು ಒರಟ, ಆದರೆ ಅವನು ನಿಮಗೆ ಸಹಾಯ ಮಾಡಿದರೂ ಅದು ನಿಮಗೆ ಕೇವಲ ನಾರ್ಮಲ್ ಹೊರತು ಒಳ್ಳೆಯದೇನಲ್ಲ, ನಿಮ್ಮ ಮೊದುಳು ಈ ವಿಷಯವನ್ನ ಕೂಡಲೇ ಮರೆತು ಬಿಡುತ್ತದೆ. ಏಕೆಂದರೆ ನೀವು ನಿಮ್ಮ ನಂಬಿಕೆಯ ಕನ್ನಡಕದ ಮೂಲಕ ನಿಮ್ಮ ಮ್ಯಾನೇಜರ್ ನ ನೋಡಲು ಶುರು ಮಾಡಿದ್ದೀರಿ.
ಈ ಕಾರಣವಾಗಿಯೇ ತಪ್ಪು ತಿಳುವಳಿಕೆಗಳು ಹುಟ್ಟಿಕೊಳ್ಳುತ್ತವೆ, ಈ ಕಾರಣವಾಗಿಯೇ ಸಂಬಂಧಗಳು ಹಿನ್ನಡೆಯನ್ನು ಅನುಭವಿಸುತ್ತವೆ, ಮತ್ತು ಈ ಕಾರಣವಾಗಿಯೇ self doubt ಕೂಡ ಹುಟ್ಟಿಕೊಳ್ಳುತ್ತದೆ. I am not good enough ಎಂದು ನೀವು ನಂಬಲು ಶುರು ಮಾಡಿದಾಗ, ನಿಮ್ಮ ಮೊದಳು ಇದಕ್ಕೆ ಪೂರಕವಾದ ಸಾಕ್ಷಿಗಳನ್ನು ಸಂಗ್ರಹಿಸಲು ಶುರು ಮಾಡುತ್ತದೆ. ಮುಂದಿನ ಬಾರಿ ನಿಮಗೆ ಯಾವುದರ ಬಗ್ಗೆಯಾದರೂ ಬಲವಾದ ನಂಬಿಕೆ ಹುಟ್ಟಿಕೊಳ್ಳತೊಡಗಿದೆಯೆಂದರೆ, ಒಂದು ಕ್ಷಣ pause ಮಾಡಿ ಯೋಚಿಸಿ, ನೀವು ಗಮನಿಸುತ್ತಿರುವುದು, ಅನುಭವಿಸುತ್ತಿರುವುದು ವಾಸ್ತವವನ್ನೋ ಅಥವಾ ನಿಮ್ಮ ಮೆದಳು ಪ್ರೂವ್ ಮಾಡಬಯಸುತ್ತಿರುವ ಸಂಗತಿಯನ್ನೋ ಎನ್ನುವುದನ್ನ, ನಂತರ ಯಾವುದಾದರೂ ಒಂದು ನಿರ್ಧಾರಕ್ಕೆ ಬನ್ನಿ.

