ಐನ್ ಸ್ಟೈನ್ ನ ದೇವರು

ಕನ್ನಡಕ್ಕೆ: ಚಿದಂಬರ ನರೇಂದ್ರ

ಕೆಲವೊಮ್ಮೆ ಆಸ್ತಿಕರು, ನೋಡಿ ಐನ್ ಸ್ಟೈನ್ ಗೂ ದೇವರಲ್ಲಿ ನಂಬಿಕೆ ಇತ್ತು ಎಂದು ವಾದ ಮಾಡುವುದನ್ನ ನೀವು ಗಮನಿಸಿರಬಹುದು. ಹೌದು ಆಲ್ಬರ್ಟ್ ಐನ್ ಸ್ಟೈನ್ ದೇವರನ್ನು ನಂಬುತ್ತಿದ್ದ. ಆದರೆ ಆ ದೇವರು ಮತ ಧರ್ಮಗಳು ವಿವರಿಸುವ ದೇವರಲ್ಲ. ಐನ್ ಸ್ಟೈನ್ ಗೆ ಸ್ಪಿನೋಜ್ ನ ದೇವರಲ್ಲಿ ನಂಬಿಕೆಯಿತ್ತು.

೧೬ ನೇಯ ಶತಮಾನದಲ್ಲಿ ಒಬ್ಬ ತತ್ವಜ್ಞಾನಿಯಿದ್ದ, ಅವನ ಹೆಸರು ಬರೂಚ್ ಸ್ಪಿನೋಜಾ, ಅವನು ಒಂದು ಮಹತ್ವದ ಮಾತು ಹೇಳಿದ, “ದೇವರು ವ್ಯಕ್ತಿಯಲ್ಲ, ದೇವರು ಪ್ರಕೃತಿ”. ಸ್ಪಿನೋಜ ನ ದೇವರು ನಿಮ್ಮನ್ನು ಜಡ್ಜ್ ಮಾಡುವುದಿಲ್ಲ, ಪನಿಶ್ ಮಾಡುವುದಿಲ್ಲ ಮತ್ತು ಅವನು ಪವಾಡಗಳನ್ನೂ ಮಾಡುವುದಿಲ್ಲ.

ಐನ್ ಸ್ಟೈನ್ ಗೆ ದೇವರೆಂದರೆ ಬ್ರಹ್ಮಾಂಡದ ನಿಖರ ವ್ಯವಸ್ಥೆ ( precise order of universe). ಯಾವ ಬ್ರಹ್ಮಾಂಡದ ನಿಯಮಗಳನ್ನು ಮುರಿಯುವುದು ಸಾಧ್ಯವಿಲ್ಲವೋ , ಗುರುತ್ವಾಕರ್ಷಣೆ, ಚಲನೆ, ಬೆಳಕು, ಸಮಯ ಅಂಥ ಮುಂತಾದವುಗಳ ನಿಯಮಗಳ ವ್ಯವಸ್ಥೆ ಅವನಿಗೆ ದೈವ ಸಮಾನವಾಗಿತ್ತು. ಸ್ಪಿನೋಜ ಯಾವುದನ್ನ ದೈವ ಎಂದು ಗುರುತಿಸಿದನೋ ಅದನ್ನು ಐನ್ ಸ್ಟೈನ್ ಪ್ರಕೃತಿಯ ಗಣಿತ ಎಂದು ಹೇಳುತ್ತಿದ್ದ. ಯಾವುದು ಈ ಬ್ರಹ್ಮಾಂಡದ ವ್ಯವಸ್ಥೆಯನ್ನು ನಿಭಾಯಿಸುತ್ತಿದೆಯೋ ಅದೇ ಐನ್ ಸ್ಟೈನ್ ಗೆ ದೇವರಾಗಿತ್ತು. ಐನ್ ಸ್ಟೈನ್ ಗೆ ದೇವರೆಂದರೆ, ಬ್ರಹ್ಮಾಂಡದ mathematical harmony ಯನ್ನು ಅರ್ಥ ಮಾಡಿಕೊಳ್ಳುವುದು. ಐನ್ ಸ್ಟೈನ್ ನ ದೇವರು ಒಬ್ಬ ನಿರ್ದಿಷ್ಟ ವ್ಯಕ್ತಿಯಾಗಿದೇ, ಒಂದು system, ಒಂದು order, ಒಂದು ನಿಗೂಢ ವಾಗಿತ್ತು.

ಸ್ಪಿನೋಜ ನ ಪ್ರಕಾರ ದೇವರು ನಿಮ್ಮನ್ನು ಜಡ್ಜ್ ಮಾಡುವುದಿಲ್ಲ, ಅವನು ಕೇವಲ ಬ್ರಹ್ಮಾಂಡದ ನಿಯಮಗಳನ್ನು ಅನುಸರಿಸುತ್ತಾನೆ. ಮತ್ತು ಈ ಸಿಸ್ಟಂ ಬಹಳ ಸರಳವಾದದ್ದು, ನಿಮ್ಮ ಕ್ರಿಯೆಯ ಮೇಲೆಯೇ ಅದರ ಫಲಿತಾಂಶ ನಿರ್ಭರವಾಗಿದೆ. ಇದು ದೇವರ mood ನ ವಿಷಯವಲ್ಲ, ಇದು ನಿಮ್ಮ ಆಯ್ಕೆಗಳ ಮತ್ತು ಆ್ಯಕ್ಷನ್ ನ ವ್ಯವಸ್ಥೆ . ಇಷ್ಟು ಮಾತ್ರವೇ ಆಗಿದ್ದ ಸ್ಪಿನೋಜ ನ ದೇವರು.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.