ಮೊದಲ ನೋಟದ ಪ್ರೇಮ

ನೀವು ಪ್ರೇಮದಲ್ಲಿ ಬೀಳುವುದು ಆ ವ್ಯಕ್ತಿಯೊಂದಿಗೆ ಅಲ್ಲ ಬದಲಾಗಿ ಆ ಸಿದ್ಧಮಾದರಿಯೊಂದಿಗೆ… | ಚಿದಂಬರ ನರೇಂದ್ರ

Love at first sight ಎನ್ನುವುದು ನಿಜದ ಸಂಗತಿ. ಇದು ನಾವು ಗಮನಿಸಬಹುದಾದ ಮಾನಸಿಕ ವಿದ್ಯಮಾನ. ಆದರೆ ಫಿಲಾಸೊಫರ್ ಮತ್ತು cognitive scientist Berit Brogaard ಪ್ರಕಾರ, ಇದು ನಮ್ಮ ಸಿನೆಮಾಗಳಲ್ಲಿ ತೋರಿಸುವ ಹಾಗೆ ಬಹಳ ರೋಮ್ಯಾಂಟಿಕ್ ಆದ ಸಂಗತಿಯೇನಲ್ಲ. Brogaard ಹಲವು ವರ್ಷಗಳ ಕಾಲ ಈ ರೋಮ್ಯಾಂಟಿಕ್ ಆಕರ್ಷಣೆಯ ಸಮಯದಲ್ಲಿ ಜನರ ಮೆದುಳಿನಲ್ಲಿ ನಡೆಯುವ ಸಂಗತಿಗಳನ್ನು ಅಧ್ಯಯನ ಮಾಡಿ ಒಂದು ತೀರ್ಮಾನಕ್ಕೆ ಬರುತ್ತಾರೆ. ಈ Love at first sight ಸಮಯದಲ್ಲಿ ಜನ ಅನುಭವಿಸುವ ಆಯಸ್ಕಾಂತೀಯ ಆಕರ್ಷಣೆ ಒಂದು ಬಗೆಯ pattern recognition ( ಮಾದರಿ ಗುರುತಿಸುವಿಕೆ). ನಿಮ್ಮ ಮೆದುಳು ಒಂದು ಚೆಹರೆಯನ್ನು ನೋಡಿ, ಅದರ ದನಿಯನ್ನು ಕೇಳಿ, ಅಥವಾ ಅವರು ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಗಮನಿಸಿ ಅದನ್ನು ಮಾದರಿ ಟೆಂಪ್ಲೇಟ್ ಜೊತೆ ಹೋಲಿಸಿ ನೋಡುತ್ತದೆ.

ಈ ಟೆಂಪ್ಲೇಟ್ ನ ಮೆದುಳು ನಿಮಗೆ ಮ್ಯಾಟರ್ ಆದ ಪ್ರತಿಯೊಬ್ಬರನ್ನು ನೋಡಿ ಸಿದ್ಧಪಡಿಸಿಕೊಂಡಿದೆ ; ನಿಮ್ಮ ತಂದೆ ತಾಯಿ, ನಿಮ್ಮ ಮೊದಲ ಪ್ರೇಮ, ನಿಮ್ಮ ಹತ್ತಿರದ ಗೆಳೆಯರು, ನಿಮ್ಮ ಮೇಲೆ ಬಹುವಾಗಿ ನಂಬಿಕೆಯಿಟ್ಟಿದ್ದ ಟೀಚರ್, ನಿಮ್ಮ ಹೃದಯವನ್ನು ಒಡೆದವರು ಇತ್ಯಾದಿಯಾಗಿ.

ಈ ಎಲ್ಲ ಜನ, ನಿಮ್ಮೊಳಗೆ ಬಿಟ್ಟುಹೋಗಿರುವ ತಮ್ಮ ಅಂಶಗಳನ್ನ ನಿಮ್ಮ ಮೆದುಳು ಒಟ್ಟುಗೂಡಿಸಿ, ನಿಮ್ಮ ಲವ್ ಹೇಗಿರಬೇಕೆಂದು ಒಂದು ಅಪ್ರಜ್ಞಾಪೂರ್ವಕ ಮಾದರಿಯನ್ನು ಸಿದ್ಧಪಡಿಸುತ್ತದೆ. ಮತ್ತು ನೀವು Love at first sight ಸನ್ನಿವೇಶಕ್ಕೆ ಎದುರಾದಾಗ ನೀವು ಪ್ರೇಮದಲ್ಲಿ ಬೀಳುವುದು ಆ ವ್ಯಕ್ತಿಯೊಂದಿಗೆ ಅಲ್ಲ ಬದಲಾಗಿ ಆ ಸಿದ್ಧಮಾದರಿಯೊಂದಿಗೆ. ಆದರೆ ಅಪರಿಚಿತ ವ್ಯಕ್ತಿಗೂ ತನ್ನದೇ ಆದ ಮಾದರಿಗಳಿವೆ, ತನ್ನದೇ ಆದ ಇತಿಹಾಸವಿದೆ.

ಆದ್ದರಿಂದಲೇ ಫಸ್ಟ್ ಲವ್ ಅಷ್ಟು ತೀವ್ರವಾಗಿರುವುದು (intense) ಅಷ್ಟು ನಾಜೂಕಾಗಿರುವುದು (fragile). ಏಕೆಂದರೆ ನೀವು ಪ್ರೇಮದಲ್ಲಿ ಬೀಳುತ್ತಿರುವುದು ಒಬ್ಬ ವ್ಯಕ್ತಿಯೊಂದಿಗಲ್ಲ, ಬದಲಾಗಿ ನಿಮ್ಮದೇ ಆದ ಇತಿಹಾಸದೊಂದಿಗೆ. ಆದ್ದರಿಂದ ಮೊದಲ ಆಕರ್ಷಣೆ ಮುಗಿದು ನಿಜದ ಪ್ರೇಮ ಶುರುವಾಗೋದು, ನಿಮ್ಮ ಮೈಂಡ್ ನಲ್ಲಿದ್ದ ಸಿದ್ಧ ಮಾದರಿ ಮಸುಕಾಗಿ ಆ ವ್ಯಕ್ತಿ ಸ್ಪಷ್ಟವಾಗಿ ಕಾಣಿಸಲು ಶುರುವಾದಾಗ. ಆಗ ಅವರು ನಿಮಗೆ ಪರಿಚಿತರಲ್ಲ, ಅವರು ನಿಮಗೆ ಅಪರಿಚಿತರು. ಆಗ ಮಾತ್ರ ನೀವು ಅವರನ್ನು ಪ್ರೇಮಿಸಲು ಆಯ್ಕೆ ಮಾಡಿಕೊಳ್ಳಬಹುದು. ಒಬ್ಬ ವ್ಯಕ್ತಿಯನ್ನು ಅವರು ಇರುವ ಹಾಗೆ ಪ್ರೇಮಿಸಲು ಆಯ್ಕೆ ಮಾಡಿಕೊಳ್ಳುವುದು ಮಾತ್ರ ನಿಜವಾದ ಪ್ರೇಮ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.