ಮೆದುಳಿನ ಸ್ಮರಣ ಸಂಚಯ ನಿಯಮ

ಚಿದಂಬರ ನರೇಂದ್ರ

ಸೈಕಾಲಜಿ ಯಲ್ಲಿ Hebb’s Law ಎನ್ನುವ ಪರಿಕಲ್ಪನೆಯೊಂದಿದೆ. ಇದರ ಪ್ರಕಾರ, ನಿಮ್ಮ ಮೆದುಳು ನಿಮ್ಮ effort ಗಳನ್ನು ನೆನಪಿಟ್ಟುಕೊಳ್ಳುವ ಯಂತ್ರ. ನೀವು ಕೆಲವು ಸನ್ನಿವೇಶಗಳಿಗೆ ಒಂದೇ ರೀತಿಯಲ್ಲಿ ಮತ್ತೆ ಮತ್ತೆ ಪ್ರತಿಕ್ರಿಯಿಸುತ್ತ ಹೋಗುತ್ತೀರಾದರೆ, ನಿಮ್ಮ ಮೆದುಳು ಅದನ್ನು ನೆನಪಿಟ್ಟುಕೊಳ್ಳುತ್ತ ಹೋಗುತ್ತದೆ. ನಿಮ್ಮ ರಿಯಾಕ್ಷನ್ ಸತ್ಯ ಅಂತಲ್ಲ, ನಿಖರ ಅಂತಲ್ಲ ಬದಲಾಗಿ ನೀವು ಆ ರಿಯಾಕ್ಷನ್ ನ ಮತ್ತೇ ಮತ್ತೆ ನೀಡಿದ ಒಂದೇ ಕಾರಣಕ್ಕಾಗಿ.

ಉದಾಹರಣೆಗೆ ಮೊದಲ ಬಾರಿ ಒಂದು ಸನ್ನಿವೇಶಕ್ಕೆ ನಿಮ್ಮ ಪ್ರತಿಕ್ರಿಯೆ I am bad at presentation ಆಗಿತ್ತಾದರೆ, ಆಗ ಇದು ಕೇವಲ ನಿಮ್ಮ ಯೋಚನೆಯಾಗಿತ್ತು. ಆದರೆ ಪ್ರತಿಬಾರಿ ನೀವು ಇದೇ ರಿಯಾಕ್ಷನ್ ನೀಡುತ್ತೀರಾದರೆ, ನಿಮ್ಮ ಮೆದುಳು ನಿಮ್ಮ ರಿಯಾಕ್ಷನ್ ಸರಿಯೋ ತಪ್ಪೋ ಯೋಚಿಸಲಿಕ್ಕೆ ಹೋಗುವುದಿಲ್ಲ. ನೀವು ಹಲವಾರು ಬಾರಿ ಇದೇ ರೀತಿ ಪ್ರತಿಕ್ರಿಯೆ ನೀಡಿದ್ದರಿಂದ, ಇದು ನಿಜ ಎಂದು ಮೆದುಳು ತಿಳಿದುಕೊಳ್ಳುತ್ತದೆ. ಮಾನಸಿಕವಾಗಿ ಯಾವುದನ್ನ ನೀವು ರಿಪೀಟ್ ಮಾಡುತ್ತ ಹೋಗುತ್ತೀರೋ ಅದನ್ನ ನಿಮ್ಮ default reaction ಆಗಿ ನಿಮ್ಮ ಮೆದುಳು ನೆನಪಿಟ್ಟುಕೊಳ್ಳುತ್ತದೆ.

I can not handle this ಎನ್ನುವುದು ನಿಮ್ಮ ಡಿಫಾಲ್ಟ್ ರಿಯಾಕ್ಷನ್ ಆಗಿದ್ದಾಗ, ಮುಂದೆ ಪ್ರತಿ ಹೊಸ ಸಂದರ್ಭದಲ್ಲೂ ನಿಮ್ಮ ಮೆದುಳು ನಿಮ್ಮ ಡಿಫಾಲ್ಟ್ ರಿಯಾಕ್ಷನ್ ನ ಹೊರಗೆಳೆದುಕೊಂಡು ಬಂದು ಅದನ್ನು ನಿಮ್ಮ ಪ್ರತಿಕ್ರಿಯೆಯಾಗಿಸುತ್ತದೆ. ಏಕೆಂದರೆ ಆ neural pathway ನ ನಿಮ್ಮ ಮೆದುಳು ಹಲವಾರು ಉಪಯೋಗ ಮಾಡಿದ್ದರಿಂದ ಅದು ನಿಮ್ಮ ಅಟೋಮ್ಯಾಟಿಕ್ ರಿಯಾಕ್ಷನ್ ಆಗಿ ಹೊರಹೊಮ್ಮುತ್ತದೆ.

Manifestation (ಒಂದು ವಿಷಯದ ಕುರಿತಾದ ತೀವ್ಪ ಹಂಬಲ) ಕೂಡ ಇದೇ ರೀತಿಯಲ್ಲಿ ಕೆಲಸ ಮಾಡುತ್ತದೆ, ಆದರೆ ಧನಾತ್ಮಕವಾಗಿ. ನಿಮ್ಮ ಮೆದುಳು, ನೀವು ನಿತ್ಯ ಪ್ರ್ಯಾಕ್ಟೀಸ್ ಮಾಡುವ ಸಂಗತಿಗಳನ್ನು ತನ್ನೊಳಗೆ ಗಟ್ಟಿಗೊಳಿಸುತ್ತ ಹೋಗುತ್ತದೆ. ಆದ್ದರಿಂದ ನೀವು ನಿಮ್ಮ ಯಾಂತ್ರಿಕ ರಿಯಾಕ್ಷನ್ ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ, ಅವುಗಳನ್ನು ಮೇಲಿನ ಹಂತಕ್ಕೆ upgrade ಮಾಡುತ್ತ ಹೋಗಬೇಕು.

ಉದಾಹರಣೆಗೆ ಪ್ರತಿ ಬಾರಿ I am not very confident ಎಂದು ಪ್ರತಿಕ್ರಯಿಸುವ ಬದಲಿಗೆ, I am learning to be more confident ಎಂದು ನಿಮಗೆ ನೀವೇ ಹೇಳಿಕೊಳ್ಳಲು ಶುರು ಮಾಡಿ. ಇದನ್ನ ನಿರಂತರವಾಗಿ ರಿಪೀಟ್ ಮಾಡುತ್ತ ಹೋಗಿ, ಇದು ನಿಮ್ಮ ಮೆದುಳನ್ನು ರೀ ವೈರಿಂಗ್ ಮಾಡುವ ವಿಧಾನ. ಹೀಗೆಯೇ ನೀವು ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ನೀವು ಮಾನಸಿಕವಾಗಿ ಏನನ್ನ ಪ್ರ್ಯಾಕ್ಟೀಸ್ ಮಾಡುತ್ತೀರೋ ಅದು, ನಿಮ್ಮ ಬದುಕಿನ ವಾಸ್ತವವಾಗುತ್ತ ಹೋಗುತ್ತದೆ.


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.