ಒಂದು ಅಪೂರ್ವವಾದ ಪೆಟ್ಟಿಗೆಯನ್ನು ಕೊಟ್ಟ ಸ್ಯೂಸ್, “ಇದರೊಳಗೆ ಏನಿದೆ ಎಂದು ಯಾವತ್ತೂ ತೆರೆದು ನೋಡಬೇಡ” ಎಂದು ಸೂಚಿಸಿದ. ಅನಂತರ ದೇವತೆಗಳೆಲ್ಲರೂ ಸೇರಿ ಅವಳಿಗೆ ‘ಪಂಡೋರಾ’ ಎಂದು ಹೆಸರಿಟ್ಟರು. ಪಂಡೊರಾಳ ರಹಸ್ಯ ಪೆಟ್ಟಿಗೆ ಹುಟ್ಟಿಸಿದ್ದ ಕುತೂಹಲವೇ ಇಂದಿನ ‘ಪಂಡೊರಾ ಬಾಕ್ಸ್’ ಎಂಬ ನುಡಿಗಟ್ಟಿನ ಮೂಲ । ಸಂಗ್ರಹ & ಅನುವಾದ: ಚೇತನಾ
ವೃತ್ರಾಸುರನ ಪ್ರಾಣ ತೆಗೆದ ಪಂಕ್ಚುಯೇಶನ್ ಮಾರ್ಕ್ ! : Stories retold
ಸರಸ್ವತಿ, “ಸದ್ಯಕ್ಕೆ ನಾನೊಂದು ವ್ಯವಸ್ಥೆ ಮಾಡಿರ್ತೀನಿ, ವಿಶ್ವರೂಪನ್ನ ಕೊಂದು ಇಷ್ಟು ಫಜೀತಿ ಮಾಡಿಕೊಂಡ ಇಂದ್ರನ್ನ ಆಮೇಲೆ ವಿಚಾರಿಸೋಣ” ಅಂತ ಹೋಮಕುಂಡಕ್ಕೆ ಹವಿಸ್ಸು ಸುರೀತಿದ್ದ ಋಷಿಗಳ ನಾಲಿಗೆ ಮೇಲೆ ಪ್ರಭಾವ ಬೀರ್ತಾಳೆ. ವಾಗ್ದೇವಿಯ ಅಣತಿಯಂತೆ ಆ ಋಷಿಗಳ ನಾಲಗೆಗಳು, “ಇಂದ್ರಶತ್ರೋ ವಿವರ್ಧಸ್ವ” ಅನ್ನುವ ಬದಲಾಗಿ, “ಇಂದ್ರ, ಶತ್ರೋ ವಿವರ್ಧಸ್ವ” ಅನ್ನಲು ಶುರು ಮಾಡ್ತವೆ! ಆಮೇಲೆ… । ಅಲಾವಿಕಾ
ಮಹಾ ಪ್ರೇಮಿ ಆರ್ಫಿಯಸನ ದುರಂತ ಕಥೆ
ಆರ್ಫಿಯಸನಿಗೆ ಯೂರಿಡೈಸ್ ತನ್ನ ಹಿಂದೆ ಬರುತ್ತಿದ್ದಾಳೋ ಇಲ್ಲವೋ ಎಂಬ ಅನುಮಾನ ಶುರುವಾಯಿತು. ದೇವದಂಪತಿಗಳ ಎಚ್ಚರಿಕೆ ನೆನಪಾದರೂ ಇನ್ನೇನು ಹೆಬ್ಬಾಗಿಲು ತಲುಪಲು ನಾಲ್ಕೇ ಹೆಜ್ಜೆ ಎಂದು ಉಡಾಫೆ ಮಾಡಿದ. ಹಿಂತಿರುಗಿ ನೋಡಿದ. ಆಗ… । ಸಂಗ್ರಹ ಮತ್ತು ಅನುವಾದ : ಚೇತನಾ
ಸಂಜೀವಿನಿ ವಿದ್ಯೆ ಕಲಿತ ಕಚ ಮತ್ತು ದೇವಯಾನಿಯ ದುಃಖ : Stories retold
ದೇವ ಗುರು ಬೃಹಸ್ಪತಿಯ ಮಗ ಕಚ, ರಾಕ್ಷಸರ ಗುರು ಶುಕ್ರಾಚಾರ್ಯರಿಂದ ಮೃತ ಸಂಜೀವಿನಿ ವಿದ್ಯೆ ಕಲಿತಿದ್ದು ಹೇಗೆ ಗೊತ್ತೆ? ಶುಕ್ರರ ಮಗಳು ದೇವಯಾನಿ ಅವನಿಗೆ ಮನಸೋತಿದ್ದು ಗೊತ್ತೇ…? ~ಚೇತನಾ ತೀರ್ಥಹಳ್ಳಿ
ವಾತಾಪಿ ಜೀರ್ಣೋಭವ : ಅಗಸ್ತ್ಯ ಋಷಿಗಳು ವಾತಾಪಿಯನ್ನು ತಿಂದು ಜೀರ್ಣಿಸಿಕೊಂಡ ಕಥೆ!
ಮಿತಿಮೀರಿ ಊಟ ಮಾಡಿದಾಗ, ಭೂರೀ ಭೋಜನ ನಡೆಸಿದಾಗ ಕೆಲವರು ಹೊಟ್ಟೆ ಸವರಿಕೊಳ್ಳುತ್ತಾ ‘ವಾತಾಪಿ ಜೀರ್ಣೋಭವ’ ಎನ್ನುವುದುಂಟು. ಏನು ತಿಂದರೂ ಜೀರ್ಣವಾಗುತ್ತದೆ ಅನ್ನುವ ಆಶಯ ವ್ಯಕ್ತಪಡಿಸಲೂ ಇದನ್ನೊಂದು ನುಡಿಗಟ್ಟಾಗಿ ಬಳಸುವುದುಂಟು. ಇದಕ್ಕೆ ಹಿನ್ನೆಲೆಯಾಗಿ ಒಂದು ಸ್ವಾರಸ್ಯಕರ ಕಥೆಯಿದೆ. ಅದೇನು ಗೊತ್ತೇ?
ಸಂತೋಕನ ಜಪಾನೀ ಹಾಯ್ಕುಗಳು
ಮೂಲ : santoka taneda | ಕನ್ನಡಕ್ಕೆ : ಚಿದಂಬರ ನರೇಂದ್ರ
ಟ್ರಾಯ್ ಯುದ್ಧ ಮತ್ತು ಟ್ರೋಜನ್ ಕುದುರೆ : ಮಕ್ಕಳಿಗೊಂದು ಗ್ರೀಕ್ ಕಥೆ
ಮಕ್ಕಳಿಗಾಗಿ ಒಂದು ಗ್ರೀಕ್ ಪುರಾಣ ಕಥೆ
ಬದುಕುವ ಇಚ್ಛೆ ಎಂದರೇನು? : ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನ ಉತ್ತರ
“ಎಂತಹ ಹೀನಸ್ಥಿತಿಯಲ್ಲಿ ಜೀವಿಸುವವರೂ ಪ್ರಾಣ ಕಳೆದುಕೊಳ್ಳಲು ಬಯಸುವುದಿಲ್ಲ. ಜೀವಿಗಳಲ್ಲಿರುವ ಈ ‘ಬದುಕುವ ಇಚ್ಛೆ’ಯ ವಿಶೇಷವನ್ನು ದಯವಿಟ್ಟು ಅರ್ಥಮಾಡಿಸಿ” ಎಂದು ಯುಧಿಷ್ಠಿರ ಕೇಳಿಕೊಂಡಾಗ ಭೀಷ್ಮ ಒಂದು ದೃಷ್ಟಾಂತದ ಮೂಲಕ ಉತ್ತರಿಸುತ್ತಾರೆ…
ಸಾವಿನ ನಂತರ ಯಮಲೋಕದವರೆಗೆ ಜೀವದ ಪ್ರಯಾಣ ಹೇಗಿರುತ್ತದೆ? : ಗರುಡಪುರಾಣದ ವಿವರಣೆ ಓದಿ
ಸಾವಿನ ನಂತರ ಜೀವ ಎಲ್ಲಿಗೆ ಹೋಗುತ್ತದೆ? ಸ್ವರ್ಗ ನರಕಗಳು ಇರುವುದು ನಿಜವೇ? ಇತ್ಯಾದಿ ಕುತೂಹಲ ಎಲ್ಲ ದೇಶಕಾಲಗಳ ಮನುಷ್ಯರನ್ನೂ ಕಾಡಿದೆ. ಹಾಗೆಂದೇ ಬಹುತೇಕ ಎಲ್ಲ ಮತ ಪಂಥಗಳು, ಜನಪದ – ನಾಗರಿಕತೆಗಳು ಈ ಬಗ್ಗೆ ತಮ್ಮದೇ ವಿವರಗಳನ್ನು ನೀಡಲು ಯತ್ನಿಸಿವೆ. ಅಂಥವುಗಳಲ್ಲಿ ನಮ್ಮ ಗರುಡಪುರಾಣವೂ ಒಂದು. ಈ ಲೇಖನದಲ್ಲಿ ಗರುಡಪುರಾಣದಲ್ಲಿ ಹೇಳಲಾಗಿರುವಂತೆ ಸಾವಿನ ನಂತರ ಜೀವದ ಪ್ರಯಾಣ ಮತ್ತು ಅವಸ್ಥೆಯ ಬಗ್ಗೆ ಮಾಹಿತಿ ಇದೆ.