ಚಿತ್ರಭಿತ್ತಿ

ರೂಮಿ ಹೇಳಿದ್ದು : ಅರಳಿಮರ POSTER

“ಇದು ನಿನ್ನ ದಾರಿ, ಇದು ನಿನ್ನ ಯಾನ. ನಿನ್ನ ಬಾಳಿನ ನಡಿಗೆ ನಿನಗಷ್ಟೇ ಅಧೀನ ” ಅನ್ನುತ್ತಾನೆ ಜಲಾಲುದ್ದೀನ್ ರೂಮಿ ~ ಚೇತನಾ  ಇದು ನಿನ್ನ ದಾರಿ. ಇದು ನಿನ್ನ ಯಾನ. ಮತ್ತೊಬ್ಬರು ನಿನ್ನ ಜೊತೆ ಹೆಜ್ಜೆ ಹಾಕಬಲ್ಲರಷ್ಟೆ. ಹೆಚ್ಚೆಂದರೆ ನಿನ್ನ ದಾರಿಯಲ್ಲಿ ಜೊತೆಯಾಗಿ ನಡೆಯಬಲ್ಲರು. ಆದರೆ ಯಾರೂ ನಿನ್ನ ನಡಿಗೆ ನಡೆಯಲಾರರು. ನಿನ್ನ ಚಲನೆ ನಿನ್ನ ಅಧೀನದಲ್ಲಷ್ಟೆ ಇರುವುದು” ಅನ್ನುತ್ತಾನೆ ಸೂಫಿ ಕವಿ ಜಲಾಲುದ್ದೀನ್ ರೂಮಿ.  ನಮ್ಮ ನಮ್ಮ ಜೀವನದ ಪ್ರಯಾಣವನ್ನು ನಾವಷ್ಟೆ ಮಾಡಲು ಸಾಧ್ಯ. […]

More

ವರ್ಜೀನಿಯಾ ವೂಲ್ಫ್ ಹೇಳಿದ್ದು : ಅರಳಿಮರ POSTER

“ಧಾವಂತಪಡುವ ಅಗತ್ಯವಿಲ್ಲ, ಸಿಡಿಮಿಡಿಗೊಳ್ಳಬೇಕಾಗಿಲ್ಲ; ಇನ್ಯಾರೋ ಆಗಿ ಬದುಕಬೇಕಾಗಿಯೂ ಇಲ್ಲ…. ನಾವು ನಾವಾಗಿದ್ದರೆ ಅಷ್ಟೇ ಸಾಕು” ಅನ್ನುತ್ತಾಳೆ ವರ್ಜೀನಿಯಾ ವೂಲ್ಫ್.  ಬಹುತೇಕ ಎಲ್ಲ ಸಾಧಕರೂ ಹೇಳುವ ಮಾತಿದು. “ನೀವು ನೀವೇ ಆಗಿರಿ” ಎಂದು. 20ನೇ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಖ್ಯಾತ ಇಂಗ್ಲಿಶ್ ಬರಹಗಾರ್ತಿ ವರ್ಜೀನಿಯಾ ವೂಲ್ಫ ಕೂಡಾ ಅದನ್ನೇ ಹೇಳಿದ್ದಾಳೆ.  ನಾವು ಇನ್ಯಾರನ್ನೋ ನೋಡಿ ನಾವು ಅವರಂತೆ ಆಗಲು ಬಯಸುತ್ತೇವೆ. ನಾವು ಗೋಧಿ ಕಾಳಾಗಿರುತ್ತೇವೆ ಮತ್ತು ನಮ್ಮ ತೆನೆಯಲ್ಲಿ ಜೋಳದ ತೆನೆ ಬೆಳೆಯಬೇಕೆಂದು ಬಯಸುತ್ತೇವೆ!! ಇದು ಹೇಗೆ ಸಾಧ್ಯ? […]

More

ಸಂಬಂಧಗಳಲ್ಲಿ space ಇರಲಿ : ಬೆಳಗಿನ ಹೊಳಹು

ಝೆನ್, ಆನಂದದಿಂದ ಸರಳವಾಗಿ ಬದುಕಲಿಕ್ಕೆಂದೇ ಇರುವ ಆಧ್ಯಾತ್ಮಿಕ ಜೀವನಶೈಲಿ. ಈ ಜೀವನಶೈಲಿಯಲ್ಲಿ ಮುಖ್ಯವಾಗಿ ಕಂಡುಬರುವುದು ವ್ಯಕ್ತಿಗಳ ನಡುವೆ ಪರಸ್ಪರ ‘ಅವಕಾಶ’ (space). ಯಾವುದೇ ಸಂಬಂಧದಲ್ಲಿ ಪರಸ್ಪರ ‘ಸ್ಪೇಸ್’ ಅಥವಾ ತಮ್ಮತನಕ್ಕೆ ಅವಕಾಶ ನೀಡುವುದು ಮುಖ್ಯವಾಗುತ್ತದೆ. ಹೀಗೆ ಅವಕಾಶ ನೀಡದೆ ಇರುವುದೇ ಎಲ್ಲ ಸಮಸ್ಯೆಗಳ ಮೂಲ ಕಾರಣವಾಗಿಬಿಡುತ್ತದೆ. ನಾವು ನಮ್ಮ ಮಕ್ಕಳನ್ನು, ನಮ್ಮ ಗೆಳೆಯರನ್ನು, ಸಂಗಾತಿಯನ್ನು ವಿಪರೀತವಾಗಿ ಪ್ರೀತಿಸುತ್ತೇವೆ ಎಂದುಕೊಳ್ಳಿ. ಈ ಪ್ರೀತಿಯೇ ಕಾಳಜಿಯ ರೂಪದಲ್ಲಿ ವ್ಯಕ್ತವಾಗುತ್ತ ಇರುತ್ತದೆ. ಆದರೆ ಈ ಕಾಳಜಿ ಅವರ ಉಸಿರುಗಟ್ಟಿಸುವಂತೆ ಇರಬಾರದು. ಅವರ […]

More

ಅಂತರ್ ಯಾತ್ರೆಯೇ ಮಹಾ ಯಾತ್ರೆ ~ ಹಫೀಜ್ ಹೇಳಿದ್ದು : ಅರಳಿಮರ POSTER

“ಒಂದು ಅದ್ಭುತವಾದ ಯಾತ್ರೆ ಮಾಡಬೇಕು ಅನ್ನಿಸಿತು. ಮೂರು ದಿನಗಳ ಕಾಲ ಅಲ್ಲಾಡದೆ ಕುಳಿತೆ” ಅನ್ನುತ್ತಾನೆ 14ನೇ ಶತಮಾನದ ಇರಾನಿ ಕವಿ ಹಫೀಜ್ ಶಿರಾಜಿ ಮೂರು ದಿನಗಳ ನಿಶ್ಚಲ ಏಕಾಂತವನ್ನು ಹಫಿಜ್ ಇಲ್ಲಿ ಮಹಾಯಾತ್ರೆಗೆ ಸಮನಾಗಿ ಕಂಡಿದ್ದಾನೆ. ಅಥವಾ ಅಂಥಾ ನಿಶ್ಚಲ ಏಕಾಂತವೇ  ಅದ್ಭುತಯಾತ್ರೆ ಅನ್ನುವುದು ಅವನ ಆಲೋಚನೆಯಾಗಿದ್ದಿರಬಹುದು.  ಹಾಗೆ ನಿಶ್ಚಲವಾಗಿ ಕುಳಿತುಕೊಂಡು ಹಫಿಜ್ ಮಾಡಿದ್ದೇನು? ಸುಮ್ಮನೆ ಕುಳಿತುಕೊಳ್ಳುವುದು ಯಾತ್ರೆ ಹೇಗಾಗುತ್ತದೆ?  ಹೇಗೆಂದರೆ, ಅಂಥಾ ಅವಸ್ಥೆಯಲ್ಲಿ ನಮ್ಮ ಅಂತರ್ ಯಾತ್ರೆ ನಡೆಯುತ್ತದೆ. ಈ ಯಾತ್ರೆಯು ನಾವು ಗಮನಿಸದೆ ಬಿಟ್ಟು, […]

More

ನಾವು ಪ್ರೀತಿಸುವುದು…. : ಅರಳಿಮರ POSTER

“ನಾವು ಬದುಕನ್ನು ಪ್ರೀತಿಸುವುದು ಬದುಕಿಗೆ ಒಗ್ಗಿಕೊಂಡಿದ್ದೇವೆ ಎಂದಲ್ಲ, ಪ್ರೀತಿಗೆ ಒಗ್ಗಿಕೊಂಡಿದ್ದೇವೆ ಎಂದು” ಅನ್ನುತ್ತಾನೆ ಫ್ರೆಡ್ರಿಕ್ ನೀಷೆ.  ನೀಷೆ ಮಾತಿನಲ್ಲಿ ಎಷ್ಟು ಸತ್ಯವಿದೆ ನೋಡಿ! ನಮಗೆ ಬದುಕಲಿಕ್ಕೇನೂ ಪ್ರೀತಿ ಬೇಕಿಲ್ಲ. ಆದರೆ ಪ್ರೀತಿಗಾಗಿ ಪ್ರೀತಿ ಬೇಕು. ಪ್ರೀತಿಯ ಅನುಭೂತಿ ನಮಗೆಂಥ ಗುಂಗು ಹಿಡಿಸಿರುತ್ತದೆ ಎಂದರೆ, ಪ್ರೀತಿಸದೆ ನಾವು ಇರಲಾರೆವು ಅನ್ನುವಷ್ಟು!  ಪ್ರೀತಿಗಾಗಿ ನಾವು ಬದುಕುವುದಿಲ್ಲ. ಹಾಗೆ ಹೇಳುವವರು ನಿಜವನ್ನೇ ಹೇಳುತ್ತಾರ ಎಂದೇನೂ ಇಲ್ಲ. ಅದು ಅವರ ಪಾಲಿನ ಆ ಸಂದರ್ಭದ ಭಾವುಕ ಸತ್ಯವಷ್ಟೆ ಆಗಿರುತ್ತದೆ. ಆದರೆ ಪ್ರೀತಿಗಾಗಿ ನಾವು […]

More

ಅನುಭವಿಸಿದರಷ್ಟೆ ಗ್ರಹಿಕೆ ಸಾಧ್ಯ : ಅರಳಿಮರ POSTER

ನಮಗೆ ಕೇಳಿಸಿಕೊಳ್ಳುವುದಕ್ಕಿಂತ ಪ್ರತಿಕ್ರಿಯಿಸುವುದರಲ್ಲೇ ಹೆಚ್ಚಿನ ಆಸಕ್ತಿ. ಹೀಗಾಗಿಯೇ ನಾವು ಬಹಳಷ್ಟನ್ನು ಗ್ರಹಿಸಲಾಗದೆಹೋಗುತ್ತೇವೆ. ನಾವು ಬಹುತೇಕವಾಗಿ ಮಾಡುವುದು ಇದನ್ನೇ. ಯಾರಾದರೂ ಮಾತಾಡುವಾಗ ಅವರೇನು ಹೇಳುತ್ತಾರೆ ಎಂದು ಕೇಳಿಸಿಕೊಳ್ಳದೆ ನಾನೇನು ಹೇಳಬೇಕು ಎಂಬುದರ ಬಗೆಗೇ ಹೆಚ್ಚು ಉತ್ಸಾಹ ಹೊಂದಿರುತ್ತೇವೆ. ಹಾಗೆಯೇ ಏನನ್ನಾದರೂ ನೋಡುವಾಗ ಅದನ್ನು ಹೇಗೆ ವರ್ಣಿಸಬೇಕು ಎಂದು ಯೋಚಿಸುತ್ತಾ ಪದಗಳನ್ನು ಹೆಣೆಯುವುದರಲ್ಲೇ ಮಗ್ನರಾಗಿಬಿಡುತ್ತೇವೆ. ಗ್ರಹಿಸುವುದಕ್ಕಿಂತ ಹೆಚ್ಚಾಗಿ ಪ್ರತಿಕ್ರಿಯಿಸುವುದರಲ್ಲೇ ನಮಗೆ ಆಸಕ್ತಿ. ನಾವು ಅರೆಬರೆ ತಿಳಿವಳಿಕೆ ಹೊಂದುವಂತೆ ನಮ್ಮ ಈ ವರ್ತನೆಯಿಂದಲೇ.  ಆದ್ದರಿಂದಲೇ ಚಾಪ್ಲಿನ್ ಹೇಳುತ್ತಾನೆ, “ಏನನ್ನಾದರೂ ನೋಡುವಾಗ, ಕೇಳುವಾಗ […]

More

ಮೊದಲ ಹೆಜ್ಜೆ ಪ್ರಯಾಣಕ್ಕೆ ಮುನ್ನುಡಿ : ಅರಳಿಮರ POSTER

ನೆಲಕ್ಕೂರಿದ ಹೆಜ್ಜೆಯನ್ನು ಎತ್ತಿಡದೆ ನಡಿಗೆ ಸಾಧ್ಯವಾಗುವುದೇ? ನಡಿಗೆ ಸಾಧ್ಯವಾಗದೆ ಪ್ರಯಾಣ ಸಾಧ್ಯವಾಗುವುದೇ? ಆ ಮೊದಲ ಹೆಜ್ಜೆಯೇ ಸಾವಿರಾರು ಮೈಲುಗಳ ಪ್ರಯಾಣಕ್ಕೆ ಮುನ್ನುಡಿಯಾಗಿದೆ! ನೆಲದ ಮೇಲೆ ಊರಿದ ಕಾಲನ್ನು ತೆಗೆಯದೆ ನಡಿಗೆ ಸಾಧ್ಯವಿಲ್ಲ. ನಡಿಗೆ ಸಾಧ್ಯವಾಗದೆ ಹೋದರೆ ಪ್ರಯಾಣವೂ ಸಾಧ್ಯವಿಲ್ಲ. “ಒಂದು ಹೆಜ್ಜೆ ಎತ್ತಿಡುವ ಮೂಲಕ ಸಾವಿರಾರು ಮೈಲುಗಳ ಪ್ರಯಾಣ ಆರಂಭವಾಗುತ್ತದೆ” ಎಂದು ಲಾವೋತ್ಸು ಹೇಳಿದ್ದನ್ನು ಹೀಗೆ ಅರ್ಥೈಸಬಹುದು.  ನಾವು ನೆಲಕ್ಕಂಟಿಕೊಂಡಿರುತ್ತೇವೆ. ನಮಗೆ ನೆಲೆಯೂರಿದ ಹೆಜ್ಜೆಯನ್ನು ಎತ್ತಲು ಭಯ. ಎಲ್ಲಿ ನೆಲೆ ಕಳೆದುಕೊಂಡುಬಿಡುತ್ತೇವೋ ಎಂದು ಆತಂಕ. ಆದ್ದರಿಂದಲೇ ನಾವು  […]

More

ಗೆಲ್ಲುವುದಕ್ಕಿಂತ ಸೋಲದೆ ಇರುವುದು ಮುಖ್ಯ : ಅರಳಿಮರ POSTER

ಗೆಲ್ಲುವುದು ಮುಖ್ಯವೋ? ಸೋಲುವುದು ಮುಖ್ಯವೋ? ಅವೆರಡೂ ಒಂದೆಯೋ ಅಥವಾ ಬೇರೆಬೇರೆಯೋ…!? ಗೆದ್ದೇ ಗೆಲ್ಲುವೆ ಎಂಬ ಆತ್ಮವಿಶ್ವಾಸಕ್ಕಿಂತ ಎಲ್ಲಿಯೂ ಸೋಲಬಾರದು ಎನ್ನುವ ಎಚ್ಚರ ನಮ್ಮನ್ನು ಹೆಚ್ಚು ಅರ್ಥಪೂರ್ಣವಾಗಿ ಗುರಿ ತಲುಪಿಸುತ್ತದೆ.  ಆತ್ಮವಿಶ್ವಾಸ ಕೆಲವೊಮ್ಮೆ ಅತಿರೇಕವಾಗಿ ಅಹಂಕಾರಕ್ಕೆ ಪರಿವರ್ತನೆಗೊಳ್ಳುವ ಅಪಾಯವಿರುತ್ತದೆ. ಗೆಲ್ಲಬೇಕು, ಗೆದ್ದೇ ಗೆಲ್ಲುವ ಅನ್ನುವ ನಿರ್ಣಯಗಳು ಇತರ ಸಂಗತಿಗಳನ್ನು ಕಡೆಗಣಿಸುವಂತೆ ಮಾಡಬಹುದು. ಅಥವಾ ಗುರಿಯೊಂದನ್ನೆ ಗಮನದಲ್ಲಿಟ್ಟುಕೊಂಡು ದಾರಿ ತಪ್ಪಲೂಬಹುದು. ಆದರೆ, ಸೋಲಬಾರದು ಅನ್ನುವ ಪ್ರಜ್ಞೆ ಅಥವಾ ಎಚ್ಚರ ಹಾಗಲ್ಲ. ಅದು ನಮ್ಮಿಂದ ತಪ್ಪುಗಳಾದಂತೆ ರಕ್ಷಿಸುತ್ತದೆ. ಸರಿಯಾದ ಹಾದಿಯಲ್ಲಿ ನಡೆಸುತ್ತದೆ. […]

More

ಕಾರ್ಲ್ ಯಂಗ್ ಹೇಳಿದ್ದು : ಅರಳಿಮರ POSTER

ಕಾರ್ಲ್ ಯಂಗ್, ಆಧುನಿಕ ಕಾಲಘಟ್ಟದ ಸ್ವಿಸ್ ಮನಶ್ಶಾಸ್ತ್ರಜ್ಞ, ತತ್ತ್ವಜ್ಞಾನಿ ಮತ್ತು ಸಾಹಿತಿ.  “ಯಾರು ಹೊರಗೆ ನೋಡುತ್ತಾರೋ ಅವರು ಕನಸು ಕಾಣುತ್ತಾರೆ. ಯಾರು ತಮ್ಮೊಳಗೆ ನೋಡಿಕೊಳ್ತಾರೋ ಅವರು ಜಾಗೃತರಾಗುತ್ತಾರೆ” ~ ಕಾರ್ಲ್ ಯಂಗ್

More