ಪ್ರೇಮ ಒಂದು ನಿತ್ಯ ಹಂಬಲ ಮತ್ತು ನಿತ್ಯ ವಿರಹದ ಸ್ಥಿತಿ

ಪ್ರೇಮಿಯ ಜೊತೆಯಲ್ಲೇ ಇರುವಾಗಲೂ ಅವನ/ಅವಳ/ಅದರ ಪ್ರೇಮಕ್ಕೆ ಹಂಬಲಿಸುವುದು ಮತ್ತು ಮಿಲನದಲ್ಲೂ ವಿರಹವನ್ನೇ ಕಂಡು ಹಾತೊರೆಯುವುದು ನಮಗೆ ಒಂದಷ್ಟು ನೈಜ ಪ್ರೇಮದ ಅನುಭೂತಿ ಮೂಡಿಸಬಲ್ಲದು. ಪ್ರೇಮದಲ್ಲಿ ತೃಪ್ತಿ ಸಿಕ್ಕಿಬಿಟ್ಟರೆ, ಅದು ಪ್ರೇಮದ ವಿನಾಶಕ್ಕೆ ಮುನ್ನುಡಿಯಾಗುವುದು. । ಅಲಾವಿಕಾ

ಕುಂಡಲಿನಿ ಶಕ್ತಿ : ಓಶೋ ವ್ಯಾಖ್ಯಾನ

ಪ್ರತಿ ಮನುಷ್ಯನಲ್ಲೂ ಅವನ ಮೂಲಾಧಾರ ಚಕ್ರದಲ್ಲಿ ಮೂರು ಸುತ್ತು ಹಾಕಿಕೊಂಡು ಕುಳಿತಿರುವ ಸರ್ಪವನ್ನ ಅವನ ಧೀಶಕ್ತಿಯ ಮೂಲ ಎಂದು ಸಂಕೇತೀಕರಿಸಲಾಗುತ್ತದೆ. ಹಲವಾರು ಧ್ಯಾನ ಪದ್ಧತಿಗಳ ಮೂಲಕ, ತಂತ್ರ ವಿಜ್ಞಾನದ ಮೂಲಕ ಮೂಲಾಧಾರದಲ್ಲಿ ಕೇಂದ್ರೀಕೃತವಾಗಿರುವ ಶಕ್ತಿಯನ್ನ ಉದ್ದೀಪನಗೊಳಿಸಿ, ಹಲವಾರು ಚಕ್ರ ಕೇಂದ್ರಗಳ ಮೂಲಕ ಸಹಸ್ರಾರವನ್ನು ಮುಟ್ಟಿಸಿದಾಗ ಮನುಷ್ಯ ಸುತ್ತಲಿನ ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಸಾಧಿಸುತ್ತಾನೆ ಎಂದು ಸಾಧಕರು ಒಪ್ಪಿಕೊಳ್ಳುತ್ತಾರೆ. ಹೀಗೆ ಸರ್ಪ, ಮನುಷ್ಯನ ಧೀಶಕ್ತಿಯ ಚಲನೆಯ ರೂಪಕವಾಗಿ ಬಳಕೆಯಾಗುತ್ತದೆ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಅನುಪಸ್ಥಿತಿಯ ಅನುಭವ : ಓಶೋ ವ್ಯಾಖ್ಯಾನ

ನಿಮಗೆ ಸಂಗೀತ ಸಂವೇದನೆಯ ಕಿವಿಗಳಿವೆಯಾದರೆ ಹಕ್ಕಿಯ ಹಾಡನ್ನ ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತ ಧ್ಯಾನಿಸಿ. ಆಮೇಲೆ ಹಕ್ಕಿ ಹಾರಿಹೋದಾಗ ಅದರ ಅನುಪಸ್ಥಿತಿಯಲ್ಲಿಯೂ ಹಾಡನ್ನ ಅನುಭವಿಸುವುದು ನಿಮಗೆ ಸಾಧ್ಯವಾದಾಗ ನೀವು ಬೆರಗಾಗುತ್ತೀರಿ. ಥಟ್ಟನೇ ಹಕ್ಕಿಯ ಹಾಡಿನ ಸಂಗತಿ ಸೂಕ್ಷ್ಮವಾಗಿದೆ, ಹಕ್ಕಿಯ ಹಾಡನ್ನ ಅದರ ಉಪಸ್ಥಿತಿಯಲ್ಲಿ ಅನುಭವಿಸುವದಕ್ಕೆ ಬೇಕಾಗುವ ಏಕಾಗ್ರತೆ ಮತ್ತು ಅರಿವಿಗಿಂತ ಹೆಚ್ಚಿನ ಸೂಕ್ಷ್ಮತೆ, ಏಕಾಗ್ರತೆ ಮತ್ತು ಅರಿವು ಅದೇ ಹಾಡನ್ನ ಹಕ್ಕಿಯ ಅನುಪಸ್ಥಿತಿಯಲ್ಲಿ ಅನುಭವಿಸಲು ಬೇಕಾಗುತ್ತದೆ… । ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ನೈಜ ಪ್ರಜ್ಞೆ ಎಂದರೇನು? ಅದರ ನೆಲೆ ಯಾವುದು?

ನೈಜಪ್ರಜ್ಞೆ ಅಹಂಮುಕ್ತ. ಅದು ವೈಶ್ವಿಕವಾದದ್ದು. ನೈಜಪ್ರಜ್ಞೆ ಒಂದು ವ್ಯಕ್ತಿ ಅಥವಾ ಜೀವದ ಪರಿಧಿಯಲ್ಲಿ ಸೀಮಿತವಾಗಿರುವಂಥದ್ದಲ್ಲ. ಒಬ್ಬ ವ್ಯಕ್ತಿ ನೈಜ ಪ್ರಜ್ಞೆಯನ್ನು ಹೊಂದುತ್ತಾನೆ/ಳೆ ಎಂದರೆ ಆತ/ ಆಕೆ ವಿಶ್ವದ ನೆಲೆಗಟ್ಟಿನಲ್ಲಿ ಘಟನೆಗಳನ್ನು ನೋಡುತ್ತಾನೆ/ಳೆ ಎಂದರ್ಥ. ನೈಜ ಪ್ರಜ್ಞಾವಂತರು ತಮ್ಮನ್ನೂ ವಿಶ್ವಚೇತನದ ಭಾಗವಾಗಿ ಗುರುತಿಸಿಕೊಳ್ಳುತ್ತಾರೆ. ಇತರರನ್ನೂ ಹಾಗೆಯೇ ಭಾವಿಸುತ್ತಾರೆ | ಸಾ.ಹಿರಣ್ಮಯಿ

ಮಾಸ್ಟರ್ ರಿಂಝೈನ ಝೆನ್ ಗರ್ಜನೆ : ಓಶೋ ವ್ಯಾಖ್ಯಾನ

This is it. ಈ ಕ್ಷಣ… ಈ ಮೌನದ ಘಳಿಗೆ… ಯಾವ ಥಾಟ್ ಗಳಿಂದಲೂ ಭ್ರಷ್ಟವಾಗಿರದ ಈ ಒಂದು ಕ್ಷಣ, ನಮ್ಮನ್ನ ಅವರಿಸಿಕೊಂಡಿರುವ ಬೆರಗು… ಈ ಒಂದು ಮೌನ … ಸಾವಿನ ಎದುರು ಗರ್ಜಿಸಿದ ಚೈತನ್ಯ ; This is it! ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರೀತಿಯ ಆಚರಣೆ : Art of love #42

ಕಾರ್ಪೆಂಟರಿ ಆಗಿರಬಹುದು, ವೈದ್ಯಕೀಯ ಕಲೆ ಆಗಿರಬಹುದು, ಪ್ರೀತಿ ಎನ್ನುವ ಕಲೆಯೇ ಆಗಿರಬಹುದು, ಯಾವುದೇ ಕಲೆಯನ್ನ ಪ್ರ್ಯಾಕ್ಟೀಸ್ ಮಾಡಬಯಸುವ ವ್ಯಕ್ತಿ ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರಬೇಕಾಗುತ್ತದೆ. ಯಾವುದೇ ಕಲೆಯನ್ನು ಪ್ರ್ಯಾಕ್ಟೀಸ್ ಮಾಡಲು ಮೊಟ್ಟ ಮೊದಲನೇಯದಾಗಿ ಬೇಕಾಗಿರುವುದು ‘ಶಿಸ್ತು’. ಶಿಸ್ತು ಇಲ್ಲದೆ ಮಾಡಿದ ಯಾವುದೇ ಕೆಲಸದಲ್ಲಿ ನಾವು ಪರಿಣತಿಯನ್ನು ಸಾಧಿಸುವುದು ಸಾಧ್ಯವಿಲ್ಲ. ನನಗೆ ಮೂಡ್ ಇದ್ದಾಗ ಮಾತ್ರ ಪ್ರ್ಯಾಕ್ಟೀಸ್ ಮಾಡುತ್ತೇನೆ ಎನ್ನುವುದು, ಒಂದು ಮನೋರಂಜನೆಯ ಹವ್ಯಾಸವಾಗಬಹುದೇ ಹೊರತು ಆ ಕಲೆಯ ಮಾಸ್ಟರ್ ಆಗಲು ನಮಗೆ ಸಹಾಯ ಮಾಡುವುದಿಲ್ಲ. ಆದರೆ ಸಮಸ್ಯೆ, […]