ತಾವೋ ತಿಳಿವು #10 : ಇದು ಮೂರಲ್ಲ, ಒಂದು…!

  ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ನೋಡಿದರೆ ಕಾಣಿಸದು ಕೇಳಿದರೆ ಕೇಳಿಸದು ಮುಟ್ಟಿದರೆ ನಿಲುಕದು ಇನ್ನೂ ಮುಂದೆ ವರ್ಣಿಸುವುದು ಆಗದ ಮಾತು ಅಂತೆಯೇ ಇದು ಮೂರಲ್ಲ, ಒಂದು. ತಲೆ ಮೇಲೆ ಬೆಳಕಿಲ್ಲ ಕಾಲ ಕೆಳಗೆ ಕತ್ತಲೆಯಿಲ್ಲ ಆರಂಭ, ಕೊನೆ, ಹೆಸರು ಒಂದೂ ಇಲ್ಲ. ರೂಹಿಲ್ಲದ ರೂಹು ಪ್ರತಿಬಂಬವಿಲ್ಲದ ಬಿಂಬ ಕಾಣಿಸದಷ್ಟು ಸೂಕ್ಷ್ಮ, ಕಾಣದಷ್ಟು ಅಪಾರ ಶುರುವಿನ ಗೆರೆಯಿಲ್ಲ, ಮುಟ್ಟುವ ದಾರವಿಲ್ಲ ರುಚಿ ಬಲ್ಲವರಿಲ್ಲ ಆದರೂ ರುಚಿ ಆದವರು ಸಾಕಷ್ಟು ದಾರಿಯಲ್ಲಿ ಹೆಜ್ಜೆ ಹಾಕುತ್ತ […]

More

‘ಬುದ್ಧ’ನನ್ನು ಸುಟ್ಟು ಚಳಿ ಕಾಯಿಸಿಕೊಂಡ ಇಕ್ಕಿಯು

ಇಕ್ಕಿಯು ಒಬ್ಬ ಸುಪ್ರಸಿದ್ಧ ಝೆನ್ ಗುರು. ಒಂದು ಚಳಿಗಾಲದ ಸಂಜೆ ಅವನು ಎಲ್ಲಿಂದ ಎಲ್ಲಿಗೋ ಪ್ರಯಾಣ ಬೆಳೆಸಿದ. ನಡೆಯುತ್ತ ನಡೆಯುತ್ತ ರಾತ್ರಿಯಾಯ್ತು. ರಾತ್ರಿಯಾದಂತೆಲ್ಲ ಚಳಿಯೂ ಹೆಚ್ಚಿತು. ದಾರಿ ಮಧ್ಯ ಸಿಕ್ಕ ಬುದ್ಧ ಮಂದಿರವೊಂದರ ಬಾಗಿಲು ಬಡಿದ ಇಕ್ಕಿಯು, ಅಲ್ಲೇ ಪಡಸಾಲೆಯಲ್ಲಿ ಮಲಗಲು ತನಗೆ ಜಾಗ ಕೊಡಿರೆಂದು ಕೇಳಿದ. ಮಂದಿರದ ಪೂಜಾರಿ ಆಗಲೆಂದು ಹೇಳಿ ಒಂದು ಚಾಪೆ ನೀಡಿದ. ನಡು ರಾತ್ರಿಯ ಹೊತ್ತಿಗೆ ಕಿಟಕಿ ಗಾಜಿನ ಮೇಲೆ ಬೆಂಕಿ ಜ್ವಾಲೆಯ ಪ್ರತಿಫಲನ ಕಂಡು ಹೌಹಾರಿದ ಪೂಜಾರಿ ಗಾಬರಿಯಿಂದ ಹೊರಗೆ […]

More

ಕಥಾ ಸರಿತ್ಸಾಗರ : ದಾಯಾದಿ ಸಹೋದರರು ಹೇಳಿದ ವರ್ಷೋಪಾಧ್ಯಾಯರ ಕಥೆ

ವರರುಚಿಗೆ ವೇತಸಪುರದ ದೇವಸ್ವಾಮಿ ಮತ್ತು ಕರಂಭಕ ಎಂಬ ಬ್ರಾಹ್ಮಣ ಸಹೋದರರ ಮಕ್ಕಳಾದ ವ್ಯಾಡಿ ಮತ್ತು ಇಂದ್ರದತ್ತರ ಪರಿಚಯವಾಯಿತು. ಅವರ ಪರಿಚಯವನ್ನು ಕೇಳಲು ಆ ದಾಯಾದಿ ಸಹೋದರರು ಹೇಳಲು ಆರಂಭಿಸಿದರು…  ಏಕಕಾಲಕ್ಕೆ ತಮ್ಮ ತಂದೆಯರನ್ನು ಕಳೆದುಕೊಂಡ ವೇತಸಪುರದ ವ್ಯಾಡಿ ಮತ್ತು ಇಂದ್ರದತ್ತರು ಉತ್ತಮ ವಿದ್ಯೆ ನೀಡಬಲ್ಲ ಗುರುವಿಗಾಗಿ ಅಲೆದಾಡಿ, ಕುಮಾರಸ್ವಾಮಿಯನ್ನು ಕುರಿತು ಪ್ರಾರ್ಥಿಸಿದರು. ಕುಮಾರಸ್ವಾಮಿಯು ಅವರಿಗೆ ನಂದ ಮಹಾರಾಜನ ಪಾಟಲಿಕ ಎಂಬ ನಗರದಲ್ಲಿ ವಾಸವಿರುವ ವರ್ಷೋಪಾಧ್ಯಾಯನನ್ನು ಆಶ್ರಯಿಸುವಂತೆ ಸೂಚಿಸಿದನು. ಅದರಂತೆ ಪಾಟಲಿಕ ನಗರಕ್ಕೆ ಬಂದ ದಾಯಾದಿಗಳು ಅಲ್ಲಿಯ ಜನರನ್ನು […]

More

ಕಥಾ ಸರಿತ್ಸಾಗರ : ವ್ಯಾಡಿ, ಇಂದ್ರದತ್ತರೊಡನೆ ಏಕಶ್ರುತಧರ ವರರುಚಿಯ ಭೇಟಿ

ವಿಂಧ್ಯಾಟವಿಯಲ್ಲಿ ಕಾಣಭೂತಿಯನ್ನು ಭೇಟಿ ಮಾಡಿ ಮಾತನಾಡಿದಾಗ ವರರುಚಿಗೆ ತನ್ನ ಪೂರ್ವಜನ್ಮದ ಸ್ಮರಣೆ ಉಂಟಾಯಿತು. ಅವನು ತಾನು ಪುಷ್ಪದಂತನೆಂದೂ, ಕಾಣಭೂತಿಗೆ ಕಥೆ ಹೇಳುವುದರಿಂದ ತನಗೆ ಶಾಪವಿಮೋಚನೆಯಾಗುವುದೆಂದೂ ಅವನು ಅರಿತನು. ಅದೇ ವೇಳೆಗೆ ಕಾಣಭೂತಿಯು ವರರುಚಿಗೆ ಅವನ ಜೀವನ ವೃತ್ತಾಂತವನ್ನು ಹೇಳುವಂತೆ ಕೇಳಿಕೊಂಡನು. ಅದರಂತೆ ವರರುಚಿಯು ತನ್ನ ಜೀವನಗಾಥೆಯನ್ನು ಹೇಳಲಾರಂಭಿಸಿದನು. ಕೌಶಾಂಬಿಯಲ್ಲಿ ಸೋಮದತ್ತನೆಂಬ ಬ್ರಾಹ್ಮಣನಿದ್ದನು. ಅವನಿಗೆ ಅಗ್ನಿಶಿಖ ಎಂಬ ಹೆಸರೂ ಇತ್ತು. ಅವನ ಹೆಂಡತಿ ವಸುದತ್ತಾ, ಒಂದೊಮ್ಮೆ ಮುನಿಕುಮಾರಿಯಾಗಿದ್ದು, ಶಾಪದಿಂದ ಆಕೆ ಬ್ರಾಹ್ಮಣಳಾಗಿ ಹುಟ್ಟಿದ್ದಳು. ಅವರ ಮಗನೇ ವರರುಚಿ. ವರರುಚಿ […]

More

ತಾವೋ ತಿಳಿವು #9 : ಇರುವುದು ಇಲ್ಲದ ಜಾಗದಲ್ಲೆ…

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಮೂವತ್ತು ತಂತಿ ಕಡ್ಡಿಗಳು ಗಾಲಿಯ ಮಧ್ಯದಲ್ಲಿ ಒಂದಾದವು. ಎಲ್ಲಿ ಗಾಲಿ ಉರುಳುವದಿಲ್ಲವೋ ಅದೇ ಗಾಲಿಯನ್ನು ಉರುಳಿಸುತ್ತಿತ್ತು. ಮಣ್ಣಿನ ಮುದ್ದೆಯ ಟೊಳ್ಳು ಮಾಡಿ ಗಡಿಗೆ ಎಂದರು. ಎಲ್ಲಿ ಗಡಿಗೆಯಿಲ್ಲವೊ ಅಲ್ಲಿಯೇ ನೀರು ತುಂಬುವರು. ಕಿಟಕಿ, ಬಾಗಿಲುಗಳ ಕೊರೆದು ಕೋಣೆ ಎಂದರು. ಎಲ್ಲಿ ಕೋಣೆ ಇಲ್ಲವೊ ಅಲ್ಲಿಯೇ ಮಂದಿ ಮಲಗಿದರು. ನೋಡಿ ಇರುವುದು ಇರದ ಜಾಗದಲ್ಲೆ ನಮ್ಮ ಲಾಭ ಅಡಗಿ ಕೂತಿದೆ.

More

ಭಯವನ್ನು ಬಿಸಾಡಿದ ಶಿಷ್ಯ

ಒಮ್ಮೆ ಗುರು ಶಿಷ್ಯರಿಬ್ಬರು ಕಾಡಿನಲ್ಲಿ ನಡೆದು ಹೋಗುತ್ತಿದ್ದರು. ಸಂಜೆಗತ್ತಲಾದ ಹಾಗೆಲ್ಲಾ ಕಾಡಿನ ದಾರಿ ಕೂಡಾ ದಟ್ಟವಾಗತೊಡಗಿತು. ಗುರು ಒಂದು ಚೀಲವನ್ನುಹಿಡಿದುಕೊಂಡಿದ್ದ. ಅದು ಭಾರವಾಗಿತ್ತು. ಅವರು ಕಾಡಿಗೆ ತೆರಳುವ ಮುಂಚೆ ಸತ್ಸಂಗ ಏರ್ಪಡಿಸಿದ್ದ ಗೃಹಸ್ಥನೊಬ್ಬ ಅವರಿಗೆ ಅದನ್ನು ಕಾಣಿಕೆಯಾಗಿ ನೀಡಿದ್ದ. ಕಾಡಿನಲ್ಲಿ ಮುಂದುವರಿದಂತೆಲ್ಲ ಗುರು ಮತ್ತೆಮತ್ತೆ ತನ್ನ ಶಿಷ್ಯನಿಗೆ “ನಾವು ಭಯಪಡುವ  ಅಗತ್ಯವಿಲ್ಲವಷ್ಟೆ?” ಎಂದು ಕೇಳುತ್ತಿದ್ದ. ಶಿಷ್ಯನಿಗೆ ಗುರುವಿನ ವರ್ತನೆ ವಿಚಿತ್ರ ಅನ್ನಿಸುತ್ತಿತ್ತು. ಹಾಗೇ ನಡೆಯುತ್ತಾ ಅವರೊಂದು ಕೊಳವನ್ನು ತಲುಪಿದರು. ಅಲ್ಲಿ ಗುರು ಶೌಚಕ್ಕೆ ಇಳಿದಾಗ ಶಿಷ್ಯ, ಗುರುವಿನ […]

More

ಅತ್ಯಾಚಾರಕ್ಕೊಳಗಾದ ಅರಹಂತೆ ಮತ್ತು ಬುದ್ಧನ ವೈಶಾಲ್ಯತೆ : ಉತ್ಪಲಾವರ್ಣೆಯ ಕಥೆ

ಉತ್ಪಲಾವರ್ಣೆ ಬಿಕ್ಖುಣಿಯಾದುದು ಶ್ರೀಮಂತನ ದಾಯಾದಿಗಳಿಗೆ ಸರಿ ಕಾಣಲಿಲ್ಲ. ತಮ್ಮ ಮನೆತನದ ಹೆಣ್ಣು ಕೂದಲು ಬೋಳಿಸಿಕೊಂಡು ಸನ್ಯಾಸಿನಿಯಾಗುವುದನ್ನು ಅವರು ಸಹಿಸಲಿಲ್ಲ. ಏನಾದರೂ ಮಾಡಿ ತಮ್ಮ ಅಸಮಾಧಾನವನ್ನು ಸ್ಪಷ್ಟಪಡಿಸಬೇಕು ಮತ್ತು ಮನೆತನದ ಮರ್ಯಾದೆ ತೆಗೆದುದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಅವರು ನಿರ್ಧರಿಸಿದರು. ಅವರಲ್ಲೊಬ್ಬ ಸಮಯಸಾಧಿಸಿ ಅವಳ ಮೇಲೆ ಅತ್ಯಾಚಾರವನ್ನೆಸಗಿಯೂ ಬಿಟ್ಟ…. ~ ಚೇತನಾ ತೀರ್ಥಹಳ್ಳಿ ಶ್ರಾವಸ್ತಿ ಶ್ರೀಮಂತ ನಗರ. ಆ ನಗರದಲ್ಲೊಬ್ಬ ಶ್ರೀಮಂತ ವ್ಯಾಪಾರಿ. ಅವನಿಗೊಬ್ಬಳು ಮಗಳಿದ್ದಳು. ಹೆಸರು ಉತ್ಪಲಾವರ್ಣಾ. ಆ ಹೆಸರನ್ನು ಅವಳಿಗೆ ಅನ್ವರ್ಥಕವಾಗಿಯೇ ಇಟ್ಟಿದ್ದರು. ನೀಲಿ ಕಮಲದಂತೆ […]

More

ವಿವೇಕ ವಿಚಾರ : ವಿದ್ಯಾಭ್ಯಾಸದ ಮಹತ್ವ

ಜನರಿಗೆ ವಿದ್ಯಾಭ್ಯಾಸ ಅತ್ಯಗತ್ಯವಾಗಿ ಬೇಕು. ಈ ದಿನಗಳಲ್ಲಿ ಡೆಮಾಕ್ರಸಿಯ ಮಾತನಾಡುತ್ತಿರುವರು. ಡೆಮಾಕ್ರಸಿ ಎಂದರೆ ಜನರೆಲ್ಲ ಒಂದೇ ಸಮಾನವಾಗಿರುವ ವ್ಯವಸ್ಥೆ. ಯಾವುದೇ ವ್ಯಕ್ತಿ ತಾನು ಇತರರಿಗೆ ಸರಿಸಮಾನ ಎಂದು ತಿಳಿಯುವುದು ಹೇಗೆ? ಅವರ ಬುದ್ಧಿ ಚುರುಕಾಗಿರಬೇಕು, ಮೂಢನಂಬಿಕೆಗಳಿಂದ ಮುಕ್ತವಾಗಿರಬೇಕು. ತನ್ನ ಸತ್ಯವನ್ನು, ತನ್ನ ಶಕ್ತಿಯನ್ನು ಅರಿತಿರಬೇಕು. ಮತ್ತು ತನ್ನೊಳಗಿನ ಶಕ್ತಿಯನ್ನು ಹೊರಗಿನವರಾರೋ ಕೊಟ್ಟಿರುವುದಲ್ಲ, ಅದನ್ನು ತಾನೇ ಗಳಿಸಿರುವುದು ಎಂಬ ಅರಿವಿರಬೇಕು. ಈ ಅರಿವನ್ನು ಹೊಂದುವ ಕ್ಷಣವೇ ವ್ಯಕ್ತಿಯು ಸ್ವತಂತ್ರರಾಗುವರು. ಮತ್ತು ಈ ಸ್ವಾತಂತ್ರ್ಯ ಅವರಿಗೆ ಸಮಾನತೆಯ ಅರಿವನ್ನು ತಂದುಕೊಡುವುದು. […]

More