ನೆಮ್ಮದಿಯ ಬದುಕಿಗೆ 10 ದಾವ್ ಸೂತ್ರಗಳು : Be Positive Video

ನಾವು ಸಹಜವಾಗಿದ್ದರೆ ನಮ್ಮ ಬದುಕೂ ಅತ್ಯಂತ ಸರಳವಾಗಿರುತ್ತದೆ. ಆದರೆ ನಾವು ಹತ್ತು ಹಲವು ಸಂಕೀರ್ಣತೆಗಳನ್ನು ಹೇರಿಕೊಂಡು ಬದುಕನ್ನು ಸಿಕ್ಕುಸಿಕ್ಕಾಗಿಸಿಕೊಳ್ಳುತ್ತೇವೆ.  ದಾವ್, ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ನಮ್ಮ ಬದುಕನ್ನು ಹೇಗಿಟ್ಟುಕೊಳ್ಳಬೇಕೆಂದು ತಿಳಿಸುತ್ತದೆ. ಅವುಗಳಲ್ಲಿ 10 ಹೇಳಿಕೆಗಳನ್ನಾಯ್ದು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿ ನೀಡಲಾಗಿದೆ.   

ನೆಮ್ಮದಿಯ ಕ್ಷೇತ್ರವನ್ನು ತಲುಪುವುದು ಹೇಗೆ?

~ ಯಾದಿರಾ ರಾ-ಉಮ್ ಆಶ್ರಮದಲ್ಲಿ ಬೋಧಕರು, ವಿದ್ಯಾರ್ಥಿಗಳು, ಅತಿಥಿಗಳು ಮತ್ತು ಸಂದರ್ಶಕರಿಗೆಲ್ಲಾ ಅನ್ವಯಿಸುವ ಒಂದು ನಿಯಮವಿತ್ತು. ಮಧ್ಯಾಹ್ನದ ಊಟವಾದ ಮೇಲೆ ಸಣ್ಣ ನಿದ್ರೆ ತೆಗೆಯುವುದು. ಈ ನಿಯಮವನ್ನು ಆಶ್ರಮವಾಸಿಗಳೆಲ್ಲರೂ ಪಾಲಿಸಲೇಬೇಕಾಗಿತ್ತು. ನಿದ್ರೆ ಬಾರದವರು ಕನಿಷ್ಠ ಉಳಿದವರ ನಿದ್ರೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿತ್ತು. ಒಂದು ಮಧ್ಯಾಹ್ನ ಎಲ್ಲರೂ ಊಟ ಮುಗಿಸಿದ್ದರು. ನಿದ್ರೆಗೆ ತೆರಳುವ ಹೊತ್ತಿಗೆ ನೆರೆಯ ಹಳ್ಳಿಯ ಬುದ್ಧಿವಂತನೊಬ್ಬ ತನ್ನ ಸಮಸ್ಯೆಯ ಪರಿಹಾರಕ್ಕಾಗಿ ಬಂದ. ಆಶ್ರಮಕ್ಕೆ ಬಂದ ಅತಿಥಿಯನ್ನು ಗೌರವದಿಂದಲೇ ವಿದ್ಯಾರ್ಥಿಗಳು ಬರ ಮಾಡಿಕೊಂಡು ಏನು ವಿಷಯ ಎಂದು ಕೇಳಿದರು. […]