ನೆಮ್ಮದಿಯ ಕ್ಷೇತ್ರವನ್ನು ತಲುಪುವುದು ಹೇಗೆ?

Ra um final

~ ಯಾದಿರಾ

ರಾ-ಉಮ್ ಆಶ್ರಮದಲ್ಲಿ ಬೋಧಕರು, ವಿದ್ಯಾರ್ಥಿಗಳು, ಅತಿಥಿಗಳು ಮತ್ತು ಸಂದರ್ಶಕರಿಗೆಲ್ಲಾ ಅನ್ವಯಿಸುವ ಒಂದು ನಿಯಮವಿತ್ತು. ಮಧ್ಯಾಹ್ನದ ಊಟವಾದ ಮೇಲೆ ಸಣ್ಣ ನಿದ್ರೆ ತೆಗೆಯುವುದು.

ಈ ನಿಯಮವನ್ನು ಆಶ್ರಮವಾಸಿಗಳೆಲ್ಲರೂ ಪಾಲಿಸಲೇಬೇಕಾಗಿತ್ತು. ನಿದ್ರೆ ಬಾರದವರು ಕನಿಷ್ಠ ಉಳಿದವರ ನಿದ್ರೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿತ್ತು.

ಒಂದು ಮಧ್ಯಾಹ್ನ ಎಲ್ಲರೂ ಊಟ ಮುಗಿಸಿದ್ದರು. ನಿದ್ರೆಗೆ ತೆರಳುವ ಹೊತ್ತಿಗೆ ನೆರೆಯ ಹಳ್ಳಿಯ ಬುದ್ಧಿವಂತನೊಬ್ಬ ತನ್ನ ಸಮಸ್ಯೆಯ ಪರಿಹಾರಕ್ಕಾಗಿ ಬಂದ.
ಆಶ್ರಮಕ್ಕೆ ಬಂದ ಅತಿಥಿಯನ್ನು ಗೌರವದಿಂದಲೇ ವಿದ್ಯಾರ್ಥಿಗಳು ಬರ ಮಾಡಿಕೊಂಡು ಏನು ವಿಷಯ ಎಂದು ಕೇಳಿದರು.

ಆ ಬುದ್ಧಿವಂತ ನನಗೆ ರಾ-ಉಮ್ ಬಳಿ ಪ್ರಶ್ನೆ ಕೇಳುವುದಕ್ಕಿದೆ ಎಂದ. ಆಶ್ರಮದ ನಿಯಮದ ಬಗ್ಗೆ ಅವನಿಗೆ ಮನವರಿಕೆ ಮಾಡಲು ಹಲವರು ಪ್ರಯತ್ನಿಸಿದರಾದರೂ ಅವನು ಒಪ್ಪಲೇ ಇಲ್ಲ.

ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ವಾ-ಐನ್-ಸಾಇಲ್ “ಅವನು ಪ್ರಶ್ನೆ ಕೇಳಲಿ ಬಿಡಿ” ಎಂದ.
ಬುದ್ಧಿವಂತನಿಗೆ ಖುಷಿಯಾಗಿ ಪ್ರಶ್ನೆಯನ್ನು ಕೇಳಿಯೇಬಿಟ್ಟ ‘ನೆಮ್ಮದಿಯ ಕ್ಷೇತ್ರವನ್ನು ತಲುಪುವುದು ಹೇಗೆ?’

ಕೌದಿಯನ್ನು ಕೊಡವುತ್ತಿದ್ದ ವಾ-ಐನ್, ‘ನೀನಲ್ಲಿಗೆ ತಲುಪಿದರೆ ನೆಮ್ಮದಿ ಅಲ್ಲಿರುವುದಿಲ್ಲ!’ ಅಂದು ನಿದ್ರೆ ಹೋದ!

 

Leave a Reply