ಹಲೋ ಮಿಸ್ಟರ್! ನೀನು ಆರನೆಯವನಾಗಿ ಬರುವೆಯಾ!?

ಗ್ರೀಕ್ ದೇಶದ ಕ್ರೀಟ್ ದ್ವೀಪದಲ್ಲಿ ಬಿಷಪ್ ಕ್ರೆಟಿನ್’ನ ಒಂದು ಪುಟ್ಟ ಚರ್ಚ್ ಇತ್ತು. ಆರಕ್ಕಿಂತ ಕಡಿಮೆ ಜನರಿದ್ದರೆ ಚರ್ಚ್ ತನ್ನ ಸೇವಾ ಪ್ರಾರ್ಥನೆಗಳನ್ನು ನಡೆಸಲಾಗುವುದಿಲ್ಲ ಎಂಬುದು ಆ ಗ್ರೀಕ್ ಸಾಂಪ್ರದಾಯಿಕ ಚರ್ಚಿನ ನಿಯಮಗಳಲ್ಲಿ ಒಂದಾಗಿತ್ತು. ಅದರಂತೆ ದಿನಾಲೂ ಆ ಊರಿನ ಆರು ಮುದುಕಿಯರು ಸಂಜೆಯ ಪ್ರಾರ್ಥನೆಗೆ ಬರುತ್ತಿದ್ದರು. ಒಂದು ದಿನ ಅವರಲ್ಲೊಬ್ಬ ಮುದುಕಿ ಸತ್ತುಹೋದಳು. ಮಾರನೆ ದಿನ ಸಂಜೆ ಪ್ರಾರ್ಥನೆಗೆ ಕೇವಲ ಐವರು ಮುದುಕಿಯರಿದ್ದಾರೆ! ಬಿಷಪ್ ಚಿಂತಿತನಾದ. ಅವರಲ್ಲೊಬ್ಬ ಮುದುಕಿಯನ್ನು ಕರೆದು, “ಈಗಿಂದೀಗಲೇ ಹೊರಗೆ ಹೋಗಿ ರಸ್ತೆಯಲ್ಲಿ […]