ರಾಮತೀರ್ಥರ ವಿಚಾರಧಾರೆ : ನಿಮ್ಮ ಪಂಚೇಂದ್ರಿಯಗಳನ್ನು ಸರಿಯಾಗಿ ಬಳಸಿ

ಇನ್ನೊಬ್ಬರ ಅಭಿಪ್ರಾಯವನ್ನು ಅನುಮೋದಿಸುವಾಗ ಅದು ಮೊದಲು ನಮಗೆ ಸಂಪೂರ್ಣ ಸಮ್ಮತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಗುಂಪಿನಲ್ಲಿ ಸುಮ್ಮನೆ ಕೈಯೆತ್ತುವುದರಿಂದ ನಿಮಗೆ ನೀವೇ ದ್ರೋಹ ಮಾಡಿಕೊಂಡಂತಾಗುತ್ತದೆ. ಜನರು ಸಾಮಾನ್ಯವಾಗಿ ತಮ್ಮ ಸ್ವಂತ ಕಿವಿಗಳಿಂದ ಕೇಳುವುದಿಲ್ಲ. ಬದಲಿಗೆ ಬೇರೆಯವರ ಕಿವಿಗಳಿಂದ ಕೇಳುತ್ತಾರೆ. ಅವರು ತಮ್ಮ ಸ್ವಂತ ಕಣ್ಣುಗಳಿಂದ ನೋಡುವುದಿಲ್ಲ. ಬದಲಿಗೆ ಬೇರೆಯವರ ಕಣ್ಣುಗಳಿಂದ ನೋಡುತ್ತಾರೆ. ಅವರು ತಮ್ಮ ರಸನೇಂದ್ರಿಯಗಳಿಗೆ ಬದಲಾಗಿ ಇತರರ ರಸನೇಂದ್ರಿಯಗಳ ರುಚಿ ಅರುಚಿಗಳನ್ನು ತಮ್ಮದಾಗಿ ಭಾವಿಸುತ್ತಾರೆ. ಪ್ರಪಂಚದ ಜನರು ಇರುವುದೇ ಹೀಗೆ! ಅವರು ತಮಗೇನು ಬೇಕೋ ಅದನ್ನು ಮಾಡುವುದಿಲ್ಲ. […]