ಕೃತಜ್ಞತೆ : ಸಕಾರಾತ್ಮಕತೆಯ ದಿವ್ಯೌಷಧ

ನಮ್ಮ ಸುತ್ತಲು ಒಂದು ಜಗತ್ತಿದೆ ಎಂದೇ ನಮಗೂ ಅಸ್ತಿತ್ವ ಇದೆ ಅಲ್ಲವೆ? ಇದೊಂದು ಒಳಹೆಣಿಗೆ. ಒಂದು ಗಂಟು ಬಿಡಿಸಿಕೊಂಡರೆ ಇಡಿಯ ನೇಯ್ಗೆ ಕಿಸಿದುಹೋಗುತ್ತೆ. ಆದ್ದರಿಂದ ನಮ್ಮ ಅಸ್ತಿತ್ವವನ್ನು ಉಳಿಸಿರುವ ಎಲ್ಲ ಎಳೆಗಳಿಗೂ ನಾವು ಕೃತಜ್ಞರಾಗಿರಬೇಕು. ನಮಗೆ ಅವರು ಕೂಡಾ ಆಗಿರುತ್ತಾರೆ… ಆಗಿರಬೇಕು. ಬದುಕಿನಲ್ಲಿ ನಮ್ಮನ್ನು ಸಂತೋಷವಾಗಿ ಇರಿಸಬಲ್ಲ ಯಾವುದಾದರೂ ಸಂಗತಿ ಇದೆ ಎಂದರೆ, ಅದು ‘ಕೃತಜ್ಞತೆ’. ಎಲ್ಲಕ್ಕಿಂತ ಮೊದಲು ನಮಗೆ ನಾವು ಕೃತಜ್ಞರಾಗಿರುವುದು. ದೇಹವು ನಮ್ಮನ್ನು ಹಿಡಿದುಕೊಂಡಿರುವುದಕ್ಕಾಗಿ. ಸ್ವಸ್ಥವಾಗಿರುವುದಕ್ಕಾಗಿ. ಮತ್ತು ನಮ್ಮೆಲ್ಲ ಚಟುವಟಿಕೆಗಳಿಗೆ ಸಹಕರಿಸುತ್ತಿರುವುದಕ್ಕಾಗಿ. ನಮ್ಮಲ್ಲಿ ಕೆಲವರು […]