ಕುವೆಂಪು : ವಿಶ್ವಮಾನವ ಸಂದೇಶ ~ ಪಂಚಮಂತ್ರ, ಸಪ್ತಸೂತ್ರ

ಇಂದು (ಡಿ.29) ‘ದಾರ್ಶನಿಕ ಕವಿ’ ಕುವೆಂಪು (ಕೆ.ವಿ. ಪುಟ್ಟಪ್ಪ) ಜನ್ಮದಿನ. ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣ್ಕೆಯನ್ನೂ ವೈಚಾರಿಕತೆಯನ್ನೂ ಬಿತ್ತಿದ ಮಹಾಚೇತನ ಕುವೆಂಪು ಅಪ್ಪಟ ಅಧ್ಯಾತ್ಮ ಜೀವಿಯಾಗಿದ್ದರು. ಅವರು ರೂಪಿಸಿದ ‘ವಿಶ್ವಮಾನವ ಸಂದೇಶ ‘ ಇಲ್ಲಿ ನೀಡಲಾಗಿದೆ… ಅವರು ರೂಪಿಸಿದ ‘ವಿಶ್ವಮಾನವ ಸಂದೇಶ ‘ ಇಲ್ಲಿ ನೀಡಲಾಗಿದೆ…

ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ : ಗುರುವಿನೊಡನೆ ದೇವರಡಿಗೆ | ಆಯ್ದಭಾಗ ~ 1

“ಸಮಸ್ತ ದೇಶ ಜೀವನವೂ ಚಳವಳಿಯ ಉಸಿರಲ್ಲಿ ಕುದ್ದು, ಬೆಂದು ತಲ್ಲಣಿಸುತ್ತಿರುವಾಗ ಶ್ರೀ ರಾಮಕೃಷ್ಣ ಸಂಸ್ಥೆ ಮಾತ್ರ ಏಕೆ ತೆಪ್ಪಗೆ ಕೂತಿದೆ? ದೇಶಕ್ಕೆ ನಿಮ್ಮ ಕಾಣಿಕೆ ಏನು? ಸ್ವಾತಂತ್ರ್ಯ ಸಂಪಾದನೆಗೆ ನೀವು ಮಾಡುವುದೇನೂ ಇಲ್ಲವೆ? ಶ್ರೀರಾಮಕೃಷ್ಣ ಸಂಸ್ಥೆಯ ಈ ವರ್ತನೆ ಅರಿಯಲಾರದೆ ದೇಶವೆಲ್ಲ ಅಚ್ಚರಿಗೊಂಡಿದೆ. ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಮಹಾಸಂಸ್ಥೆ ಮಾಡಬೇಕಾದ ಕರ್ತವ್ಯ ಯಾವುದೂ ಇಲ್ಲವೆ?” ಭಕ್ತ ,ಶಿವಾನಂದರನ್ನು ಪ್ರಶ್ನಿಸಿದ ~ ಸಂಕಲನ : ಸ್ವಾಮಿ ಅಪೂರ್ವಾನಂದ | ಕನ್ನಡಕ್ಕೆ : ಕುವೆಂಪು ಅದು ಅಸಹಕಾರ ಚಳವಳಿಯ […]

ರಾಮಕೃಷ್ಣರ ಸತ್ಯ ದರ್ಶನ : ದಾರ್ಶನಿಕ ಕವಿ ಕುವೆಂಪು ಕಂಡಂತೆ

“ಪರಮಹಂಸರು ಬರಿಯ ಸಿದ್ಧಾಂತ ಲೋಲುಪರಲ್ಲ, ಯೋಗಪ್ರವೀಣರು. ಸರ್ವಮತ ಸಿದ್ಧಾಂತಗಳನ್ನೂ ಸಾಧನೆಯ ಶಾಲೆಯಲ್ಲಿ ಅಸಮಸಾಹಸದಿಂದಲೂ ವಿಶಾಲಹೃದಯದಿಂದಲೂ ಪರೀಕ್ಷಿಸಿ ಸಮನ್ವಯತತ್ತ್ವಸಿದ್ಧರಾದವರು. ಸರ್ವಧರ್ಮಸಮನ್ವಯಾಚಾರ್ಯರಾದವರು. ಎಲ್ಲ ಮತಗಳೂ ಒಂದೇ ಸತ್ಯದೆಡೆಗೆ ಹೋಗುವ ಬೇರೆಬೇರೆ ದಾರಿಗಳು ಎಂಬುದನ್ನು ಅವರು ಬರಿಯ ಗ್ರಂಥಾಧ್ಯಯನದಿಂದ ಸಂಗ್ರಹಿಸಲಿಲ್ಲ. ಅದು ಅವರಿಗೆ ಪುಸ್ತಕದ ಬದನೆಕಾಯಿ ಆಗಿರಲಿಲ್ಲ. ಪ್ರತ್ಯಕ್ಷವಾದ ಸತ್ಯಸ್ಯಸತ್ಯವಾಗಿತ್ತು.” ಎಂದು ಬರೆಯುತ್ತಾರೆ ದಾರ್ಶನಿಕ ಕವಿ ಕುವೆಂಪು.  “ಎಷ್ಟು ಮತಗಳಿವೆಯೋ ಅಷ್ಟು ಪಥಗಳಿವೆ. ನೀರನ್ನು ಯಾವ ಭಾಷೆಯಲ್ಲಿ ಕರೆದರೂ ಅದು ನೀರೇ ಆಗಿರುತ್ತದೆಯಲ್ಲವೆ? ಹಾಗೆಯೇ ಭಗವಂತನನ್ನು ಯಾವ ಹೆಸರಿನಿಂದ ಕರೆದರೂ ಆತ […]