‘ಕೇವಲಜ್ಞಾನಿ’ ವರ್ಧಮಾನ ಮಹಾವೀರ

ಇಂದು ಅಹಿಂಸೆಯೇ ಮಹೋನ್ನತ ಧರ್ಮವೆಂದು ಸಾರಿದ ವರ್ಧಮಾನ ಮಹಾವೀರನ ಜನ್ಮದಿನ.  ಜೈನ ಧರ್ಮದ ಇಪ್ಪತ್ನಾಲ್ಕು ತೀರ್ಥಂಕರರಲ್ಲಿ ಕೊನೆಯವನು ವರ್ಧಮಾನ ಮಹಾವೀರ. ಮಹಾವೀರನು ಕ್ರಿ.ಪೂ.599ರ ಚೈತ್ರ ಶುದ್ಧ ತ್ರಯೋದಶಿಯ ದಿನ (ಈ ವರ್ಷ ಮಾರ್ಚ್ 29) ಬಿಹಾರದ ಕುಂಡಗ್ರಾಮ (ಭಾಸ್ ಕುಂಡ್) ಎಂಬಲ್ಲಿ ಸಿದ್ದಾರ್ಥ ಮತ್ತು ತ್ರಿಶಲಾ ದೇವಿಯರ ಮಗನಾಗಿ ಜನಿಸಿದನು. ಈತನಿಗೆ ಜ್ಞಾತಪುತ್ರ, ಸನ್ಮತಿ ನಾಯಕ, ಅತಿವೀರ, ನಿರ್ಗಂಥ ಎಂಬ ಹೆಸರುಗಳೂ ಇದ್ದವು. ಇಕ್ವಾಕು ವಂಶದವನಾದ ಸಿದ್ಧಾರ್ಥ ಲಿಚ್ಛವಿಗಳ ನಾಯಕ, ಕುಂಡಗ್ರಾಮದ ಅರಸ. ವರ್ಧಮಾನನು ಬಾಲ್ಯದಲ್ಲಿ ಸೂಕ್ತ […]