ಮೈದಾಸನ ಸ್ಪರ್ಶ ತಂದಿತ್ತ ಫಜೀತಿ  :  ಗ್ರೀಕ್ ಪುರಾಣ ಕಥೆಗಳು  ~ 22

“ಮೈದಾಸ್ ಟಚ್ – ಮೈದಾಸನ ಸ್ಪರ್ಶ” ಅನ್ನುವ ನುಡಿಗಟ್ಟನ್ನು ಕೇಳಿಯೇ ಇರುತ್ತೀರಿ. ಯಾರಾದರೂ ಏನನ್ನಾದರೂ ಮುಟ್ಟಿದರೆ ಚಿನ್ನದಂಥ ಫಲಿತಾಂಶ ಬರುತ್ತದೆ ಎಂದು ಸೂಚಿಸುವುದಕ್ಕೆ ಈ ನುಡಿಗಟ್ಟು ಬಳಕೆಯಾಗುತ್ತದೆ. ಇದರ ಮೂಲ ಗ್ರೀಕ್ ಪುರಾಣದಲ್ಲಿದೆ. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಮೈದಾಸ್, ಫ್ರಿಜಿಯ ದೇಶದ ದೊರೆ. ಅವನಿಗೆ ಗುಲಾಬಿ ಹೂವುಗಳೆದರೆ ಪಂಚಪ್ರಾಣ. ತನ್ನ ರಾಜ್ಯದ ತುಂಬೆಲ್ಲ ಗುಲಾಬಿಗಳನ್ನೆ ಬೆಳೆಸಿ, ಅದರಲ್ಲಿ ನಿತ್ಯವೂ ಹೂವರಳುವಂತೆ ವ್ಯವಸ್ಥೆ ಮಾಡಿದ್ದ ಮೈದಾಸ್. ಯಾರಾದರೂ ಅವನ ಗುಲಾಬಿ ತೋಟಗಳಿಗೆ ನುಗ್ಗಿದರೆ ಅವರಿಗೆ […]