ಕನ್ನಡಿಯಂತೆ ಪ್ರತಿಬಿಂಬಿಸು, ಚೌಕಟ್ಟಿನೊಳಗಿನ ಚಿತ್ರವಾಗಿಸಬೇಡ : Morning Mantra

ಕನ್ನಡಿ ದಿನಕ್ಕೆ ಅದೆಷ್ಟು ನೂರು, ಸಾವಿರ ವಸ್ತು/ವ್ಯಕ್ತಿಗಳನ್ನು ಪ್ರತಿಬಿಂಬಿಸಿದರೂ ಯಾವ ಬಿಂಬವನ್ನೂ ತನ್ನ ಚೌಕಟ್ಟಿಗೆ ತೂಗು ಹಾಕಿಕೊಂಡು ಚಿತ್ರವಾಗಿ ಉಳಿಸಿಕೊಳ್ಳುವುದಿಲ್ಲ. ಯಾವುದು ಎಷ್ಟು ಹೊತ್ತು ಎದುರಿಗೆ ಇರುತ್ತಾರೋ, ಅಷ್ಟು ಹೊತ್ತೂ ಅವರು ಇರುವಂತೆಯೇ ಗ್ರಹಿಸುವುದು – ತೋರುವುದು. ಅಷ್ಟೇ ಅದರ ಕೆಲಸ ~ ಗಾಯತ್ರಿ ಈ ದಿನದ Morning Mantra ನಮಗೆ ಸಮಾಜದೊಡನೆ ಬೆರೆಯಲು ಅತ್ಯಂತ ಉಪಯುಕ್ತವಾಗಿರುವಂತದ್ದು. ಆದರೆ, ಅಷ್ಟೇ ಸರಳವೂ ಆಗಿರುವಂಥದ್ದು : “ಕನ್ನಡಿಯಂತೆ ಪ್ರತಿಬಿಂಬಿಸು, ಚೌಕಟ್ಟಿನೊಳಗಿನ ಚಿತ್ರವಾಗಿಸಬೇಡ”! ಎದ್ದು, ಮುಖ ತೊಳೆದು ಕನ್ನಡಿ ಮುಂದೆ […]