ಒಲವೇ ಜೀವನ ಸಾಕ್ಷಾತ್ಕಾರ….

ಅಂಗಸಂಗಕ್ಕೆ ಒದಗುವ ಭಿನ್ನ ಲಿಂಗದ ಮನುಷ್ಯ ಮಾತ್ರವೇ ಪ್ರೇಮಿ ಎಂಬ ಭಾವನೆ ಅಳಿದು, ಪ್ರತಿಯೊಂದು ಜೀವವೂ ಪ್ರೇಮಿಸಲು ಅರ್ಹವೆಂದು ತಿಳಿಯುವುದು ಅತಿ ಮುಖ್ಯ. ಆ ತಿಳಿವಿನ ನಂತರ ಪರಿಪೂರ್ಣ ಪ್ರೇಮ ಬೆಳೆಸಿಕೊಳ್ಳುತ್ತೇವಲ್ಲ, ಅದು ನಮ್ಮನ್ನು ಸಾಮಾನ್ಯ ಮಾನವರಿಂದ ಸಂತರ ಎತ್ತರಕ್ಕೆ ಏರಿಸುತ್ತದೆ. ಆದರೆ ಈ ಆರೋಹಣ ಸುಲಭವೇನಲ್ಲ…. ಫೋತಿ ಪಢ್ ಪಢ್ ಜಗ್ ಮುವಾ ಪಂಡಿತ್ ಭಾಯಾ ನ ಕೋಯ್ | ಧಾಯಿ ಅಕ್ಷರ್ ಪ್ರೇಮ್ ಕೆ ಜೋ ಪಢೇ ಸೋ ಪಂಡಿತ್ ಹೋಯ್ || ಎನ್ನುತ್ತದೆ ಸಂತ […]

ಮನುಷ್ಯ ಉಳಿದೆಲ್ಲ ಚರಾಚರಗಳಿಗಿಂತ ಹೇಗೆ ಭಿನ್ನ? : ಸ್ವಾಮಿ ರಾಮತೀರ್ಥ

ಈ ಚರಾಚರ ಜಗತ್ತನ್ನು ಮುಖ್ಯವಾಗಿ ನಾಲ್ಕು ಭಾಗವನ್ನಾಗಿ ಮಾಡಬಹುದು. ಧಾತುವರ್ಗ, ಸಸ್ಯವರ್ಗ, ಪ್ರಾಣಿವರ್ಗ ಹಾಗೂ ಮನುಷ್ಯ ವರ್ಗ. ಈ ಲೋಕದಲ್ಲಿ ಮನುಷ್ಯನು ಪಶುಪ್ರಾಣಿಗಳಿಗಿಂತಲೂ ಹೆಚ್ಚು ಶಕ್ತಿಯನ್ನೂ ಉತ್ತಮ ರೀತಿಯಾದ ಚಲನೆಯನ್ನೂ ಕ್ರಿಯೆಯನ್ನೂ ತೋರಿಸುತ್ತಾನೆ. ದೈಹಿಕ ಚಲನೆಯಷ್ಟೇ, ಅಥವಾ ಅದಕ್ಕಿಂತ ಮನುಷ್ಯನ ಬೌದ್ಧಿಕ ಚಲನೆ ಅತ್ಯದ್ಭುತವಾದದ್ದು. ಆತ ತೋರ್ಪಡಿಸುವ ಬೌದ್ಧಿಕ ಶಕ್ತಿಸಾಮರ್ಥ್ಯಗಳು ಪ್ರಾಣಿಗಳಲ್ಲಿ ಇಲ್ಲ. ಆದ್ದರಿಂದ ಜೀವಶಕ್ತಿಯ ಬೆಳವಣಿಗೆಯ ನಿಚ್ಚಣಿಕೆಯಲ್ಲಿ ಪ್ರಾಣಿಗಳು ಮನುಷ್ಯನಿಗಿಂತಲೂ ಬಹಳ ಕೆಳಗಿನ ಮೆಟ್ಟಿಲಿನಲ್ಲಿವೆ ಎಂದು ವಿಜ್ಞಾನಿ ಸಂತ, ಗಣಿತಜ್ಞ, ಸ್ವಾಮಿ ರಾಮತೀರ್ಥರು ವಿವರಿಸುತ್ತಾರೆ. ಅವರು […]