ಮನಸ್ಸನ್ನು ನಿಯಂತ್ರಿಸುವ ಮೊದಲು ಅದನ್ನು ಅರಿಯಿರಿ : ಸಾಮವೇದ

“ಮೊದಲು ನಿಮ್ಮ ಮನಸ್ಸಿನ ಸಾಮರ್ಥ್ಯವನ್ನು ಅರಿಯಿರಿ. ಆಮೇಲೆ ಅದನ್ನು ಪಳಗಿಸುವ ಪ್ರಯತ್ನ ಮಾಡಿ” ಅನ್ನುತ್ತದೆ ಸಾಮವೇದ.  ತನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಲ್ಲವರಷ್ಟೆ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸದೆ ಹೋದರೆ ಅದು ನಮ್ಮನ್ನು ತನ್ನ ಅಡಿಯಾಳಾಗಿ ಮಾಡಿಕೊಳ್ಳುತ್ತದೆ. ಹಾಗೇನಾದರೂ ಆದರೆ ನಾವು ಚಂಚಲಚಿತ್ತರಾಗಿಬಿಡುತ್ತೇವೆ. ಹೀಗಾದಾಗ ನಾವು ಯಾವುದೇ ವಿಷಯದಲ್ಲಿ ದೃಢನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ದೃಢ ನಿರ್ಧಾರ ತಾಳದ ಹೊರತು ಯಾವುದೇ ಕೆಲಸ ಸುಸೂತ್ರವಾಗಿ ನಡೆಯುವುದೂ ಸಾಧ್ಯವಿಲ್ಲ.  ಆದರೆ ಈ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದು […]