ಭಗವಂತನನ್ನು ಏಕೆ ಭಜಿಸಬೇಕು? : ಅರ್ಥಸಹಿತ ಭಜ ಗೋವಿಂದಂ ಸ್ತೋತ್ರ ~ ಭಾಗ 1

ಶ್ರೀ ಶಂಕರಾಚಾರ್ಯ ವಿರಚಿತ “ಭಜ ಗೋವಿಂದಂ” ಸ್ತೋತ್ರವು ಅವರ ‘ಮೋಹಮುದ್ಗರ’ದಲ್ಲಿ ಕಾಣಸಿಗುತ್ತದೆ. ಮೂಲತಃ ಶ್ರೀ ಶಂಕರರು 11 ಶ್ಲೋಕಗಳನ್ನು ಮಾತ್ರ ರಚಿಸಿದ್ದಾರೆಂದೂ, ಉಳಿದವು ಅವರ ಶಿಷ್ಯರಿಂದ ಕಾಲಕ್ರಮದಲ್ಲಿ ಸೇರಿಸಲ್ಪಟ್ಟವೆಂದೂ ಹೇಳಲಾಗುತ್ತದೆ. ಅದೇನೇ ಇದ್ದರೂ ‘ಭಜ ಗೋವಿಂದಂ’ ಮೂವತ್ತು ಶ್ಲೋಕಗಳಲ್ಲಿ ಜೀವನ ದರ್ಶನವನ್ನೇ ಮಾಡಿಸುವ ಅತ್ಯದ್ಭುತ ಸ್ತೋತ್ರಮಾಲೆ ಎಂಬುದರಲ್ಲಿ ಸಂದೇಹವಿಲ್ಲ. ನಾವು ಭಗವಂತನನ್ನು (ಗೋವಿಂದನನ್ನು) ಏಕೆ ಭಜಿಸಬೇಕು ಎಂದು ಈ ಶ್ಲೋಕಗಳು ಮನದಟ್ಟು ಮಾಡಿಸುತ್ತವೆ.  ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ| ಸಂಪ್ರಾಪ್ತೇ ಸನ್ನಿಹಿತೇ ಕಾಲೇ […]

ಶಿವೋsಹಮ್ ಸರಣಿ ~ 2 : ಚಿಂತನ ಮನನ ಧ್ಯಾನ ವಿಧಿ

ವ್ಯಕ್ತ ಜಗತ್ತಿನಲ್ಲಿ ಪ್ರತಿ ವಸ್ತುವಿಗೂ ಎರಡು ಮಗ್ಗಲುಗಳಿರುತ್ತವೆ. ಆಂತರ್ಯ ಮತ್ತು ಬಾಹ್ಯ, ಸೂಕ್ಷ್ಮ ಮತ್ತು ಸ್ಥೂಲ. ಮನೋಬುದ್ಧಿ ಚಿತ್ತಾಹಂಕಾರಗಳು ಶರೀರದೊಳಗಿನ ಸೂಕ್ಷ್ಮ ಸಂಗತಿಗಳು. ಎಲ್ಲ ಬಗೆಯ ಮಾಹಿತಿ, ಜ್ಞಾನ ಹಾಗೂ ಅನುಭವಗಳ ಮೇಲೆ ಇವುಗಳ ಆಧಿಪತ್ಯ. ಮತ್ತು ಕಿವಿ, ನಾಲಗೆ, ಮೂಗು ಮತ್ತು ಕಣ್ಣುಗಳು – ಇವು ಶರೀರದ ಬಾಹ್ಯ ಅಥವಾ ಸ್ಥೂಲ ಸಂಗತಿಗಳು. ಇವುಗಳಿಂದ ಧ್ವನಿ, ಸ್ವಾದ, ಗಂಧ ಹಾಗೂ ದೃಶ್ಯಗಳನ್ನು ಗ್ರಹಿಸಬಹುದು. ಶಂಕರರು ಹೇಳುತ್ತಾರೆ, “ನಾನು ಈ ಎರಡೂ ಮಗ್ಗಲುಗಳಿಗೂ ಅತೀತನಾದವನು. ಮನೋಬುದ್ಧಿ ಚಿತ್ತಾಹಂಕಾರಗಳಿಗೆ […]