lotus

ತಿಳಿವು ಘಟಿಸುವ ಘಳಿಗೆಯೇ ಜ್ಞಾನೋದಯ

ಈವರೆಗೆ ಜ್ಞಾನೋದಯ ಹೊಂದಿದವರೆಲ್ಲರೂ ಹುಟ್ಟು – ಬೆಳವಣಿಗೆಯೊಂದಿಗೆ ತಮ್ಮ ಸುತ್ತ ಕಟ್ಟಿಕೊಂಡ ಗೋಡೆ – ಮಾಡುಗಳನ್ನು ಭಂಜಿಸುವ ಪ್ರಯತ್ನ ನಡೆಸಿದವರೇ. ಆ ಪ್ರಯತ್ನದ ಕೊನೆಯ ಉಳಿಪೆಟ್ಟು ಬಿದ್ದ ಘಳಿಗೆಯೇ ಜ್ಞಾನೋದಯದ ಘಟನೆ ~ ಚೇತನಾ ತೀರ್ಥಹಳ್ಳಿ ವಾಸ್ತವದಲ್ಲಿ ಕತ್ತಲೆಂಬುದಿಲ್ಲ. ಇರುವುದೇನಿದ್ದರೂ ಬೆಳಕಿನ ಗೈರು ಹಾಜರಿಯಷ್ಟೆ. ಬೇಕಿದ್ದರೆ ಪರಿಶೀಲಿಸಿ. ಕತ್ತಲು ತುಂಬಿದ ಕೋಣೆಯಲ್ಲಿ ಒಂದು ದೀಪದ ಕುಡಿ ಬೆಳಕು ತರಬಲ್ಲದು. ಆದರೆ ಬೆಳಕೇ ಬೆಳಕಾಗಿರುವ ಕಡೆ ಕತ್ತಲನ್ನು ತಂದು ತುಂಬಲು ಸಾಧ್ಯವಿಲ್ಲ. ಬೆಳಕನ್ನು ತಡೆದು, ಕೃತಕವಾಗಿ ಕತ್ತಲನ್ನು ಸೃಷ್ಟಿಸಬಹುದು. […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #11

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ದಾರಿ ಎಲ್ಲಿಗೆ ಕರೆದೊಯ್ಯಬಹುದು ಎನ್ನುವ ಆತಂಕದಿಂದ ದೂರವಿರಿ. ಬದಲಾಗಿ ನೀವು ಇಡಲು ಮುಂದಾಗುತ್ತಿರುವ ಮೊದಲ ಹೆಜ್ಜೆಯ ಮೇಲೆ ಮಾತ್ರ ಧ್ಯಾನವನ್ನು ಕೇಂದ್ರೀಕರಿಸಿ. ಬದುಕಿನ ಪ್ರಯಾಣದಲ್ಲಿ ಮೊದಲ ಹೆಜ್ಜೆ ಮಾತ್ರ ಅತ್ಯಂತ ಕಠಿಣ ಭಾಗ; ಅದನ್ನು ಸರಿಯಾಗಿ ನಿಭಾಯಿಸುವುದೊಂದೆ ನಿಮ್ಮ ಮುಂದಿರುವ ಜವಾಬ್ದಾರಿ. ಈ ಹೆಜ್ಜೆ ಇಟ್ಟಾದ ಮೇಲೆ ಎಲ್ಲವನ್ನೂ ಪ್ರಯಾಣದ ಸಹಜತೆಗೆ ಬಿಟ್ಟು ಬಿಡಿ ಬಾಕಿ ಎಲ್ಲ ನಿಮ್ಮನ್ನು ಹಿಂಬಾಲಿಸುತ್ತದೆ. ಹರಿವಿನ ಜೊತೆ […]

ಪವರ್ ಆಫ್ ಪ್ಲೀಸ್ : ಸಜ್ಜನಿಕೆ ಹೃದಯಗಳನ್ನು ಆಳುವುದು

ಅಧಿಕಾರ ಚಲಾಯಿಸುವುದು ಎಂದರೆ ತೀರ ಬಿಗುವಾಗಿ ವರ್ತಿಸುವುದೇ? ಕೆಲಸ ಮಾಡದೆ ಇರುವವರನ್ನು ಶಿಕ್ಷಿಸುವುದೇ? ಅಥವಾ ದಂಡ ವಿಧಿಸುವುದೇ? ಖಂಡಿತವಾಗಿಯೂ ಕೆಲಸ ಸುಸೂತ್ರವಾಗಿ ನೆರವೇರಲು ಈ ಎಲ್ಲವೂ ಕೂಡಾ ದಾರಿಗಳೇ ಆಗಿದ್ದರೂ ಇವೇ ದಾರಿಗಳಾಗಿ ಉಳಿದುಬಿಡಬಾರದು. ಕೆಲವೊಮ್ಮೆ ಹೀಗಾಗುತ್ತದೆ. ನಾವು ಅಧಿಕಾರದಲ್ಲಿ ಇದ್ದರೂ ನಮ್ಮಿಂದ ಅದರ ಸರಿಯಾದ ಬಳಕೆ ಸಾಧ್ಯವಾಗುವುದಿಲ್ಲ. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಅಧಿಕಾರವೆಂದರೆ ಹುದ್ದೆ ನಿಭಾಯಿಸುವುದು. ದೊಡ್ಡ ಹುದ್ದೆಯಲ್ಲಿ ಇರುವವರು ಅಧಿಕಾರ ನಡೆಸುವುದು ಅವರ ಪಾಲಿನ ಕರ್ತವ್ಯವೂ ಆಗಿರುತ್ತದೆ. ಆದ್ದರಿಂದ ತಮ್ಮ ಕೆಳಗಿನವರಿಂದ ಕೆಲಸ ಮಾಡಿಸುವುದು […]