Zentangle : ಚಿತ್ರಧ್ಯಾನ ಸಾಧನ

‘ಅರಳಿಮರ’ zentangle ಚಿತ್ರಧ್ಯಾನ ವಿಧಾನವನ್ನು ಪರಿಚಯಿಸುತ್ತಿದ್ದು, ಆಸಕ್ತರು ಇದರ ಸದುಪಯೋಗಪಡಿಸಿಕೊಳ್ಳಬಹುದು. ಕದಡಿದ ಮನಸ್ಸನ್ನು ಒಂದು ಧಾರೆಗೆ ತಂದು ನಿಲ್ಲಿಸಲು ಹಲವು ದಾರಿ. ಕೆಲವರು ಎಲ್ಲ ಕೆಲಸಗಳನ್ನೂ ಬಿಟ್ಟು ಏಕಾಗ್ರತೆಗೆ ಪ್ರಯತ್ನಿಸಿದರೆ, ಕೆಲವರು ಯಾವುದಾದರೊಂದು ಕೆಲಸದಲ್ಲಿ ಮಗ್ನರಾಗಿ ಮನಸ್ಸನ್ನು ಹಿಡಿದು ನಿಲ್ಲಿಸಲು ಪ್ರಯತ್ನ ಮಾಡುತ್ತಾರೆ. ಏನನ್ನೂ ಮಾಡದೆ ಇರುವ ಮೂಲಕ ಧ್ಯಾನ ಸಿದ್ಧಿಸುವಂತೆಯೇ ಏನಾದರೊಂದನ್ನು ಮಾಡುವ ಮೂಲಕವೂ ಧ್ಯಾನ ಸಿದ್ಧಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ zentangle ಒಂದು ಅತ್ಯುತ್ತಮ ವಿಧಾನ.  Zentangle, ಯಾವುದೇ ನಿರ್ದಿಷ್ಟ ಕ್ರಮವಿಲ್ಲದ, ನಿಯಮವಿಲ್ಲದ ಚಿತ್ರ ರಚನಾ ವಿಧಾನ. […]

ಸಹಜ ಧರ್ಮವನ್ನು ಕಾಪಾಡುವುದು…

ಇಬ್ಬರು ಝೆನ್ ಸನ್ಯಾಸಿಗಳು ನದಿಯಲ್ಲಿ ತಮ್ಮ ಊಟದ ತಟ್ಚೆ ತೊಳೆಯುತ್ತಿದ್ದಾಗ ಒಂದು ಚೇಳು ನದಿಯಲ್ಲಿ ಕೊಚ್ಚಿಕೊಂಡು ಹೋಗುವುದನ್ನು ಕಂಡರು. ಥಟ್ಚನೆ ಒಬ್ಬ ಸನ್ಯಾಸಿ ಅದನ್ನು ನದಿಯಿಂದ ಹೊರ ತೆಗೆದು ದಂಡೆಯ ಮೇಲೆ ಬಿಟ್ಟ. ಹೀಗೆ ಮಾಡುವಾಗ ಚೇಳು ಸನ್ಯಾಸಿಯ ಬೆರಳಿಗೆ ಕಚ್ಚಿಬಿಟ್ಟಿತು. ಸನ್ಯಾಸಿ ತಲೆ ಕೆಡಿಸಿಕೊಳ್ಳದೆ ಮತ್ತೆ ತಟ್ಟೆ ತೊಳೆಯುವುದನ್ನು ಮುಂದುವರೆಸಿದ. ಆ ಚೇಳು ಮತ್ತೆ ಜಾರಿ ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗತೊಡಗಿತು. ಆ ಸನ್ಯಾಸಿ ಮತ್ತೆ ಆ ಚೇಳನ್ನು ಎತ್ತಿ ದಂಡೆಯ ಮೇಲೆ ಬಿಟ್ಟ. ಆ […]