‘ಅರಳಿಮರ’ zentangle ಚಿತ್ರಧ್ಯಾನ ವಿಧಾನವನ್ನು ಪರಿಚಯಿಸುತ್ತಿದ್ದು, ಆಸಕ್ತರು ಇದರ ಸದುಪಯೋಗಪಡಿಸಿಕೊಳ್ಳಬಹುದು.

ಕದಡಿದ ಮನಸ್ಸನ್ನು ಒಂದು ಧಾರೆಗೆ ತಂದು ನಿಲ್ಲಿಸಲು ಹಲವು ದಾರಿ. ಕೆಲವರು ಎಲ್ಲ ಕೆಲಸಗಳನ್ನೂ ಬಿಟ್ಟು ಏಕಾಗ್ರತೆಗೆ ಪ್ರಯತ್ನಿಸಿದರೆ, ಕೆಲವರು ಯಾವುದಾದರೊಂದು ಕೆಲಸದಲ್ಲಿ ಮಗ್ನರಾಗಿ ಮನಸ್ಸನ್ನು ಹಿಡಿದು ನಿಲ್ಲಿಸಲು ಪ್ರಯತ್ನ ಮಾಡುತ್ತಾರೆ. ಏನನ್ನೂ ಮಾಡದೆ ಇರುವ ಮೂಲಕ ಧ್ಯಾನ ಸಿದ್ಧಿಸುವಂತೆಯೇ ಏನಾದರೊಂದನ್ನು ಮಾಡುವ ಮೂಲಕವೂ ಧ್ಯಾನ ಸಿದ್ಧಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ zentangle ಒಂದು ಅತ್ಯುತ್ತಮ ವಿಧಾನ.
Zentangle, ಯಾವುದೇ ನಿರ್ದಿಷ್ಟ ಕ್ರಮವಿಲ್ಲದ, ನಿಯಮವಿಲ್ಲದ ಚಿತ್ರ ರಚನಾ ವಿಧಾನ. ದಿನದ ಅಥವಾ ವಾರದ ಯಾವುದಾದರೊಂದು ಅವಧಿಯನ್ನು ಇದಕ್ಕೆ ತೆಗೆದಿಟ್ಟು ಪ್ರಯತ್ನಿಸಿ ನೋಡಿ. zentangle ಚಿತ್ರ ಧ್ಯಾನ ಯಾವುದೇ ನಿರ್ದಿಷ್ಟ ಆಕಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಬಿಡಿಸುವಂಥದಲ್ಲ. ಒಟ್ಟು ಆರಂಭಿಸಿ, ನಿಮ್ಮ ಮನಸ್ಸು ಹೇಗೆ ಹರಿಯುತ್ತದೋ ಹಾಗೆ ರಚಿಸುತ್ತಾ ಹೋಗುವ ವಿಧಾನ. ಹಾಗೊಮ್ಮೆ ಮನಸಿನಲ್ಲಿ ನಿರ್ದಿಷ್ಟ ಆಕಾರ ಬಿಡಿಸಬೇಕೆಂದಿದ್ದರೂ, ಅದು ಸ್ಪಷ್ಟವಾಗಿರದೆ, ರೂಕ್ಷವಾಗಿ ಇರುತ್ತದೆ ಅಷ್ಟೆ. ಚಿತ್ರ ಕೊನೆಗೊಳ್ಳುವಾಗ ನಿಮ್ಮ ಮನಸ್ಥಿತಿಯನ್ನು ಅದು ಬಿಂಬಿಸುತ್ತದೆ. ಹಾಗೂ ನಿಮ್ಮ ಮನಸ್ಸಿನ ಸಂಕೀರ್ಣತೆಗಳು ಅಲ್ಲಿ ಹೊರಹಾಕಲ್ಪಟ್ಟು ನೀವು ಬಹುತೇಕ ನಿರಾಳವಾಗಿರುತ್ತೀರಿ.
‘ಅರಳಿಮರ’ zentangle ಚಿತ್ರಧ್ಯಾನ ವಿಧಾನವನ್ನು ಪರಿಚಯಿಸುತ್ತಿದ್ದು, ಆಸಕ್ತರು ಇದರ ಸದುಪಯೋಗಪಡಿಸಿಕೊಳ್ಳಬಹುದು. ಕನಿಷ್ಠ ಶುಲ್ಕ ನೀಡಿ ಹೆಸರು ನೋಂದಾವಣೆ ಮಾಡಿಕೊಂಡರೆ, ವಾಟ್ಸಪ್ ಗ್ರೂಪ್ ಮೂಲಕ zentangle ಧ್ಯಾನವನ್ನು ಪರಿಚಯಿಸಿ, ತರಬೇತಿ ನೀಡಲಾಗುವುದು. ಜೊತೆಗೇ, Zentangle ಚಿತ್ರಗಳ ಮೂಲಕ ಮನಸ್ಥಿತಿಯ ಅಧ್ಯಯ ಮತ್ತು ಪರಿಹಾರ ಕಂಡುಕೊಳ್ಳುವ ಮಾರ್ಗವನ್ನೂ ಪರಿಚಯಿಸಲಾಗುವುದು.
ಮುಂದೆ ಈ ಕಲೆಯನ್ನು ಸೃಜನಶೀಲವಾಗಿಯೂ ಬಳಸಿಕೊಂಡು ಅಭಿವೃದ್ಧಿಪಡಿಸಿಕೊಳ್ಳಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಯನ್ನು Whatsapp ಮೂಲಕ ಸಂಪರ್ಕಿಸಿ : 6361885804