ತಾವೋ ತಿಳಿವು #69 ~ ಅನಂತ ಸಾಧ್ಯತೆಗಳ ಬಯಲು, ತಾವೋ

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ

tao

ತಾವೋ ಒಂದು ಬಾವಿ
ಸೇದಿದಷ್ಟೂ ತುಂಬಿಕೊಳ್ಳುವ ಬಾವಿ
ಅನಂತ ಸಾಧ್ಯತೆಗಳ
ಮಹಾ ಬಯಲು.

ಇರುವುದಂತೂ ಹೌದು,
ಆದರೆ ಯಾರಿಗೂ ಕಾಣಿಸುವುದಿಲ್ಲ
ಯಾರು ಕಟ್ಟಿಸಿದರೋ?
ದೇವರಿಗಿಂತ ಹಳೆಯದು ಮಾತ್ರ ನಿಜ.

Leave a Reply