ತುಳಸೀದಾಸರ ಸೂಕ್ತಿಗಳು : ಬೆಳಗಿನ ಹೊಳಹು

ದಿನವನ್ನು ಶುಭಕರವಾಗಿಸುವ ತುಳಸೀದಾಸರ ಕೆಲವು ಸೂಕ್ತಿಗಳು ಇಲ್ಲಿವೆ:

tulasiವಿವೇಕವನ್ನುಕೊಡಲಾಗದು, ಪಡೆಯಲಾಗದು. ಅದು ಅತ್ಯಂತ ಕಷ್ಟ. ಹೇಗೋ ಅದೃಷ್ಟದಿಂದ ಅದನ್ನು ಪಡೆದರೂ, ಅದನ್ನು ಹಿಡಿದಿಟ್ಟುಕೊಳ್ಳಲು ಹಲವು ಅಡ್ಡಿ ಆತಂಕಗಳು ಬರುತ್ತವೆ. ಆದ್ದರಿಂದ ವಿವೇಕವನ್ನು ನಾವೇ ನಮ್ಮೊಳಗೆ ಮೂಡಿಸಿಕೊಳ್ಳಬೇಕು.

*

ಆಸೆ ಎಂಬ ದೇವತೆ ನಿಜಕ್ಕೂ ವಿಚಿತ್ರ. ಅವಳನ್ನು ಪೂಜಿಸಿದಷ್ಟೂ ದುಃಖ ನೀಡುತ್ತಾಳೆ; ಕಡೆಗಣಿಸಿದಷ್ಟೂ ಆನಂದ ನೀಡುತ್ತಾಳೆ!

**

ಸಹಾನುಭೂತಿಯ ಮಾತುಗಳು ದ್ವೇಷಕ್ಕೆ ಮದ್ದು. ಇತರರಿಗೆ ಒಳಿತನ್ನುಂಟು ಮಾಡುವುದೇ ಸೌಹಾರ್ದಕ್ಕೆ ಮೂಲ. ನಿಂದೆಯಿಂದ, ಕೆಟ್ಟ ಮಾತುಗಳಿಂದ ಗೆಲುವು ಲಭಿಸಿದರೆ, ವಾಸ್ತವದಲ್ಲಿ ಅದು ನಿನ್ನ ಸೋಲೇ ಆಗಿರುತ್ತದೆ.

***

ಮಳೆ ಬಂದಾಗ ಜನ ಸಂತೋಷಿಸುತ್ತಾರೆ. ಆದರೆ, ಈ ಸಂತೋಷದಲ್ಲಿ ಅದಕ್ಕೆ ಕಾರಣನಾದ ಸೂರ್ಯನನ್ನು ಮರೆಯಬಾರದು. ಸೂರ್ಯ, ನೀರನ್ನು ಸೆಳೆದು, ಮೋಡವಾಗಿಸಿ ಮಳೆಗೆ ಕಾರಣವಾಗುತ್ತಾನೆ.
ಎಲ್ಲಿ ಸೂರ್ಯನಂಥ ರಾಜ/ ಆಡಳಿತಗಾರರು ಇರುತ್ತಾರೋ, ಆ ದೇಶದ ಪ್ರಜೆಗಳೇ ಅದೃಷ್ಟವಂತರು.

Leave a Reply