“ನನಗೆ ಕುರಾನಿನಲ್ಲಿ ಏನಿದೆ ಗೊತ್ತು” : ಇದ್ರಿಸ್ ಶಾ ಹೇಳಿದ ದರ್ವೇಶಿ ಕಥೆ

ಬೆಕ್ತಾಶಿ ದರ್ವೇಶಿಯೊಬ್ಬ ತನ್ನ ವಿನಯಶೀಲ ನಡವಳಿಕೆಯಿಂದ ಎಲ್ಲರ ಮನ್ನಣೆ ಪಡೆಯುತ್ತಿದ್ದ.

“ನೀನು ಇಷ್ಟು ಪವಿತ್ರನಾಗಿರುವುದು ಹೇಗೆ?” ಎಂದು ಯಾರಾದರೂ ಕೇಳಿದರೆ, “ನನಗೆ ಕುರಾನಿನಲ್ಲಿ ಏನಿದೆ ಎಂದು ಗೊತ್ತು”  ಅನ್ನುತ್ತಿದ್ದ.

ಒಂದು ದಿನ ದರ್ವೇಶಿ ಚಹಾಖಾನೆಯಲ್ಲಿ ಕುಳಿತಿದ್ದ. ಅಲ್ಲಿದ್ದ ಅಪರಿಚಿತನೊಬ್ಬ ಅವನಿಗೆ ಸಲ್ಲುತ್ತಿದ್ದ ಮನ್ನಣೆ ಕಂಡು ಆಶ್ಚರ್ಯಚಕಿತನಾದ. ದರ್ವೇಶಿಗೆ ಎಲ್ಲರು ಕೇಳುತ್ತಿದ್ದ ಪ್ರಶ್ನೆಯನ್ನೇ ಕೇಳಿದ, “ನೀನು ಇಷ್ಟು ಪವಿತ್ರನಾಗಿರುವುದು ಹೇಗೆ?”

ದರ್ವೇಶಿ ಚಹಾ ಹೀರುತ್ತ ಹೇಳಿದ, “ನನಗೆ ಕುರಾನಿನಲ್ಲಿ ಏನಿದೆ ಎಂದು ಗೊತ್ತು” .

“ಓಹೋ!? ಅದು ಸರಿ… ಕುರಾನಿನಲ್ಲಿ ಏನಿದೆ?”

“ಹಾಳೆಗಳ ನಡುವೆ ಅಪ್ಪಚ್ಚಿಯಾದ ಎರಡು ಒಣಹೂವುಗಳು ಮತ್ತು ಗೆಳೆಯ ಅಬ್ದುಲ್ಲಾ ಬರೆದಿದ್ದ ಪತ್ರ” ದರ್ವೇಶಿ ತಣ್ಣಗೆ ಉತ್ತರಿಸಿದ.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

Leave a Reply