ವಚನ ವಾಚನ : ಅಲ್ಲಮನ ಒಂದು ಬೆಡಗಿನ ವಚನ

 


ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ
ಗಂಡ ಗಂಡರನರಸಿ ತೊಳಲಿ ಬಳಲುತ್ತೈದಾರೆ
ಖಂಡ ಮಂಡಲದೊಳಗೆ ಕಂಡೆನೊಂದು ಚೋದ್ಯವ.
ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು
ಗುಹೇಶ್ವರನಲ್ಲಿಯೇ ನಿರ್ವಯಲಾಯಿತ್ತು

ಭಾವಾರ್ಥ : ಪರಶಿವ ತತ್ತ್ವದಲ್ಲಿ ಉದಯಿಸಿದ ಚಿತ್ ಬ್ರಹ್ಮಾಂಡದಿಂದ ಈ ಪ್ರಪಂಚ ಹುಟ್ಟಿಕೊಂಡಿತು. ಅದರಿಂದ ಹೊರಬಂದ ಜೀವರು ತಮ್ಮ ಮೂಲ ಸ್ವಭಾವವನ್ನೆ ಮರೆತರು, ಮಿಥ್ಯೆಯನ್ನು ನಂಬಿದರು. ತಮ್ಮ ನಿಲುವು ಯಾವುದೆಂಬುದನ್ನೆ ಅರಿಯದೆ ವ್ಯರ್ಥವಾಗಿ ಪರಬ್ರಹ್ಮವನ್ನರಸಿ ತೊಳಲಿಬಳಲತೊಡಗಿದರು. 

ಇದು ಅಪೂರ್ಣ ಜ್ಞಾನದ ಪರಿಣಾಮ. ವಿವೇಕನೆಂಬ ಶಿಷ್ಯನು ಜ್ಞಾನವೆಂಬ ದರ್ಪಣದಿಂದ ಪರಬ್ರಹ್ಮವನ್ನು ನೋಡಲು, ಶಿವನೇ ನಾನೆಂಬ ಜ್ಞಾನೋದಯವಾಗುವುದು. ಜ್ಞಾನವನ್ನು ಸದಾ ನುಂಗುತ್ತಿದ್ದ ಅಜ್ಞಾನವು ಗುಹೇಶ್ವರನಲ್ಲಿ ಲಯವಾಗಿ ಹೋಗುವುದು.

(ಆಕರ: ಅಲ್ಲಮನ ವಚನ ಚಂದ್ರಿಕೆ )

Leave a Reply