ಮೊದಲೇ ಯಾಕೆ ಉತ್ತರಿಸಲಿಲ್ಲ? : ಒಂದು ನಸ್ರುದ್ದೀನ್ ಕಥೆ

Mullaಒಂದು ದಿನ ಮುಲ್ಲಾ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಒಬ್ಬ ಅಪರಿಚಿತ ದಾರಿಹೋಕ ಅಲ್ಲಿಗೆ ಬಂದು ಒಂದು ನಿರ್ಧಿಷ್ಟ ಊರಿಗೆ ಹೋಗಲು ದಾರಿ ವಿಚಾರಿಸಿದ.

ಮುಲ್ಲಾ ಒಂದು ನಿಮಿಷ ವಿಚಾರ ಮಾಡಿ ಆ ಊರಿಗೆ ಹೋಗಲು ದಾರಿಯನ್ನು ಅತ್ಯಂತ ಸ್ಪಷ್ಟವಾಗಿ ಹೇಳಿಕೊಟ್ಟ.

ಆಮೇಲೆ ಆ ದಾರಿಹೋಕ ತಿರುಗಿ ಪ್ರಶ್ನೆ ಮಾಡಿದ “ ಧನ್ಯವಾದ ಗೆಳೆಯ ಆ ಊರು ಮುಟ್ಟಲು ನನಗೆ ಎಷ್ಟು ಸಮಯ ಹಿಡಿಯಬಹುದು?”

ಮುಲ್ಲಾ ಆ ದಾರಿಹೋಕನನ್ನೊಮ್ಮೆ ದಿಟ್ಟಿಸಿ ನೋಡಿ ತನ್ನ ಕೆಲಸದಲ್ಲಿ ಮಗ್ನನಾದ.

ದಾರಿಹೋಕ ಇನ್ನೊಮ್ಮೆ ಆ ಪ್ರಶ್ನೆ ಕೇಳಿದ, ಮುಲ್ಲಾ ಮತ್ತೆ ದಾರಿಹೋಕನ ಮಾತನ್ನು ನಿರ್ಲಕ್ಷಿಸಿದ.

ಅವಮಾನಿತನಾದ ದಾರಿಹೋಕ ಸಿಟ್ಟಿನಿಂದ ದಾಪುಗಾಲು ಹಾಕುತ್ತ ಮುಲ್ಲಾ ತೋರಿಸಿದ ದಿಕ್ಕಿನತ್ತ ನಡೆಯತೊಡಗಿದ.

ಎರಡು ಕ್ಷಣಗಳ ನಂತ ಮುಲ್ಲಾ ಕೂಗಿ ಉತ್ತರಿಸಿದ, “ ಹೀಗೇ ನಡೆದರೆ , ನಿನಗೆ ಮೂರು ಗಂಟೆ ಬೇಕಾಗಬಹುದು”

“ಮೊದಲೇ ಯಾಕೆ ಉತ್ತರಿಸಲಿಲ್ಲ ? “
ದಾರಿಹೋಕ ಕೋಪದಿಂದ ಕೇಳಿದ.

“ ಇಲ್ಲ ನನಗೆ ನೀನು ಎಷ್ಟು ಜೋರಾಗಿ ನಡೆಯಬಲ್ಲೆ ಎನ್ನುವದನ್ನು ನೋಡಬೇಕಾಗಿತ್ತು” ಮುಲ್ಲಾ ಉತ್ತರಿಸಿದ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.