ಶಾಶ್ವತವನ್ನು ಅನುಭವಿಸುವ ವಿಧಾನ : ತಾವೋ ಪದ್ಯ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

tao

ಬ್ರಹ್ಮಾಂಡದ ಹುಟ್ಟಿನಲ್ಲಿ
ನಮ್ಮೆಲ್ಲರ ಗುಟ್ಟು.
ತಾಯಿಯನ್ನು ಹುಡುಕಾಡುವುದೆಂದರೆ
ಮಕ್ಕಳನ್ನು ಮಾತಾಡಿಸುವುದು.
ಮಕ್ಕಳ ಹೆಗಲ ಮೇಲೆ ನಿಂತು
ತಾಯಿಯನ್ನು ಅಪ್ಪಿಕೊಂಡಾಗ
ಸಾವಿಗೂ ಭಯ.

ಬಾಯಿ, ಬಾಗಿಲು ಮುಚ್ಚಿದಾಗ
ಬದುಕು ತೆರೆದುಕೊಳ್ಳುವುದು.
ಮಾತು ಗೆದ್ದಾಗ, ವ್ಯವಹಾರ ದ್ವಿಗುಣವಾದಾಗ
ಬದುಕಿಗೆ ಬರೆ.

ಸಂತನಿಗೆ ಸಣ್ಣದೂ ಸ್ಪಷ್ಟ
ಯೋಧನಿಗೆ ಸೋಲೂ ಒಂದು ಶಕ್ತಿ
ತಾವೋ ಬೆಳಕಲ್ಲಿ
ಒಳಗಿನದನ್ನು ಕಾಣುವುದೇ
ಶಾಶ್ವತವನ್ನು ಅನುಭವಿಸುವ ವಿಧಾನ.

Leave a Reply